ಸರ್ಕಾರ ಕೋವಿಡ್-19 ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಅಜಯ್ ಕುಮಾರ್ ಸಿಂಗ್ ಮೆಚ್ಚುಗೆ| ಅಜಯ್ ಕುಮಾರ್ ಸಿಂಗ್ ನಿವೃತ್ತರಾಗಿ ಸುಮಾರು ವರ್ಷಗಳಾಗಿದ್ದರೂ ಅವರ ಪ್ರವೃತ್ತಿ ಹಾಗೇ ಉಳಿದಿದೆ. ಅವರಿಗೆ ನನ್ನ ನಮಸ್ಕಾರಗಳು ಎಂದ ಸಚಿವ ಸುರೇಶ್ ಕುಮಾರ್|
ಬೆಂಗಳೂರು(ಏ.10): ರಾಜ್ಯ ಸರ್ಕಾರ ಕೋವಿಡ್-19 ಮಹಾಮಾರಿಯ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ನಿವೃತ್ತ ಪೋಲೀಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸುರೇಶ ಕುಮಾರ್ ಅವರು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು ಬೆಳಿಸಚಿವ ಸುರೇಶ್ ಕುಮಾರ್ ಗ್ಗೆಯೇ ಸಿಕ್ಕ ಟಾನಿಕ್. ನಮ್ಮ ರಾಜ್ಯ ಕಂಡ ಅಪರೂಪದ, ದಕ್ಷ ಪೋಲೀಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಫೋನ್ ಮಾಡಿದ್ದರು. ರಾಜ್ಯ ಸರ್ಕಾರ ಕೋವಿಡ್-19 ಮಹಾಮಾರಿಯ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಒಂದಷ್ಟು ಸಲಹೆಗಳನ್ನೂ ನೀಡಿದರು. ನಂತರ "Sir. I am ready for any service. You can utilise me at any time " ಎಂದರು. ಅಜಯ್ ಕುಮಾರ್ ಸಿಂಗ್ ನಿವೃತ್ತರಾಗಿ ಸುಮಾರು ವರ್ಷಗಳಾಗಿದ್ದರೂ ಅವರ ಪ್ರವೃತ್ತಿ ಹಾಗೇ ಉಳಿದಿದೆ. ಅವರಿಗೆ ನನ್ನ ನಮಸ್ಕಾರಗಳು ಎಂದು ಬರೆದುಕೊಂಡಿದ್ದಾರೆ.
ರಸ್ತೆ ಗುಡಿಸಿ, ಸರಳತೆ ಮೆರೆದ ಸಚಿವ ಸುರೇಶ್ ಕುಮಾರ್ ದಂಪತಿ
ಹಾಗೆಯೇ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ತುರ್ತು ಕಾರ್ಯಕ್ಕಾಗಿ ವಿತರಿಸುವ ಪಾಸ್‌ಗಳು ದುರುಪಯೋಗವಾಗುವುದಕ್ಕೆ ಯಾರೂ ಅವಕಾಶ ನೀಡಬಾರದು. ಬಿಬಿಎಂಪಿ ಗುತ್ತಿಗೆದಾರರೊಬ್ಬರು ನಿನ್ನೆ ದಿನ ತಮ್ಮ Mercedes Benz ಕಾರಿನಲ್ಲಿ ಆರಾಮಾಗಿ ಓಡಾಡಲು ಒಂದು ಪಾಸ್ ಹೇಗೋ ಪಡೆದಿದ್ದರು. ಕೊನೆಗೆ ನಗರದ ಹಿರಿಯ ಪೋಲೀಸ್ ಅಧಿಕಾರಿಯ ಕೈಗೇ ಸಿಕ್ಕಿಬಿದ್ದರು ಎಂದು ಬರೆದುಕೊಳ್ಳುವ ಮೂಲಕ ಪಾಸ್ ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.