ಬಳ್ಳಾರಿ ಜಿಲ್ಲೆಯ ಮೇಲೆ ಕಣ್ಣಿಟ್ಟಿದ್ದ ಶ್ರೀರಾಮುಲುಗೆ ಮತ್ತೊಮ್ಮ ನಿರಾಸೆ| ಆನಂದ್ ಸಿಂಗ್‌ಗೆ ಒಲಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ| ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀರಾಮುಲು|
ಬಳ್ಳಾರಿ(ಏ.10): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನ ದಿಢೀರ್ ಅಂತ ನೇಮಕ ಮಾಡಿದ್ದಾರೆ. ಆದರೆ, ಈ ಬಾರಿಯೂ ಗಣಿ ನಾಡು ಬಳ್ಳಾರಿ ಜಿಲ್ಲೆಯ ಮೇಲೆ ಕಣ್ಣಿಟ್ಟಿದ್ದ ಶ್ರೀರಾಮುಲುಗೆ ನಿರಾಸೆಯಾಗಿದೆ.
ಐದು ಬಾರಿ ಶಾಸಕರಾಗಿ, ಮಂತ್ರಿಯಾಗಿ, ಸ್ವಂತ ಪಕ್ಷ ಕಟ್ಟಿ ಮುಗ್ಗರಿಸಿದ್ರೂ ಶ್ರೀರಾಮುಲುಗೆ ಮಾತ್ರ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನಮಾನ ಸಿಗುತ್ತಿಲ್ಲ. ಬಿಜೆಪಿ ಸರ್ಕಾರ ರಚನೆಯಾದಗಲೆಲ್ಲಾ ಶ್ರೀರಾಮುಲು ಮಂತ್ರಿಯಾಗಿದ್ದಾರೆ. ಆದ್ರೇ ಸ್ವಂತ ಜಿಲ್ಲೆಗೆ ಮಾತ್ರ ಉಸ್ತುವಾರಿಯಾಗೋ ಭಾಗ್ಯ ಅವರಿಗೆ ದೊರೆತಿಲ್ಲ. ಕೊನೆಯ ಕ್ಷಣದವರೆಗೂ ಕಸರತ್ತು ನಡೆಸಿದ್ರೂ ಶ್ರೀರಾಮುಲುಗೆ ಉಸ್ತುವಾರಿ ಭಾಗ್ಯ ದಕ್ಕಿಲ್ಲ.
undefined
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಬೆಳಗಾವಿ ಸಾಹುಕಾರ್‌ಗೆ ಭಾರೀ ನಿರಾಸೆ!
2006 ಸಮ್ಮಿಶ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಮಂತ್ರಿ ಯಾದ್ರು ಆಗ ಗದಗ ಜಿಲ್ಲೆಯ ಉಸ್ತುವಾರಿ ನೀಡಲಾಗಿತ್ತು. ಅಂದು ಬಳ್ಳಾರಿಗೆ ದಿವಂಗತ ಎಂ.ಪಿ.ಪ್ರಕಾಶ ಉಸ್ತುವಾರಿ ಸಚಿವರಾಗಿದ್ದರು. ಮತ್ತೆ ಶ್ರೀರಾಮುಲು 2008ರಲ್ಲಿ ಮತ್ತೆ ಆರೋಗ್ಯ ಇಲಾಖೆ ಸಚಿವರಾದ್ರು ರಾಯಚೂರು ಉಸ್ತುವಾರಿ ನೀಡಲಾಗಿತ್ತು. ಅಂದು ಬಳ್ಳಾರಿ ಜಿಲ್ಲೆಯನ್ನ ಜನಾರ್ದನ ರೆಡ್ಡಿಗೆ ನೀಡಲಾಗಿತ್ತು. ಇದೀಗ 2019ರಲ್ಲಿ ಮಂತ್ರಿ ಯಾದ್ರು ಮೊದಲಿಗೆ ರಾಯಚೂರು ಮತ್ತು ಚಿತ್ರದುರ್ಗ ನೀಡಲಾಗಿತ್ತು. ಇದೀಗ ಚಿತ್ರದುರ್ಗ ಜಿಲ್ಲೆ ಮಾತ್ರ ನೀಡಿದ್ದಾರೆ. ಪಕ್ಷದಿಂದ ಪಕ್ಷಕ್ಕೆ ಹಾರಿ ಬಂದ ಆನಂದ ಸಿಂಗ್ ಅವರಿಗೆ ಭರ್ಜರಿ ಲಕ್ ಬಂದಿದೆ. ಎರಡನೇ ಬಾರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನವನ್ನ ಆನಂದ ಸಿಂಗ್ ಪಡದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
2012 ಶ್ರೀರಾಮುಲು ಸೇರಿದಂತೆ ಬಹುತೇಕ ನಾಯಕರು ಪಕ್ಷ ಬಿಟ್ಟು ಹೋದಾಗ ಆನಂದ ಸಿಂಗ್ ಮೊದಲ ಬಾರಿ ಶಾಸಕರಾಗಿ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಆನಂದ ಸಿಂಗ್ ಸ್ಥಾನ ಪಡೆದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
ಇದೀಗ 2018ರಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗಿ ಮತ್ತೆ 2019ರಲ್ಲಿ ಬಿಜೆಪಿಗೆ ವಾಪಸ್ ಬಂದು ಗೆದ್ದು ಮಂತ್ರಿ ಯಾಗಿದ್ದಲ್ಲದೇ ಆನಂದ ಸಿಂಗ್ ಬಳ್ಳಾರಿ ಉಸ್ತುವಾರಿಯನ್ನ ಗಿಟ್ಟಿಸಿಕೊಂಡಿದ್ದಾರೆ.