ಸೋಮನಾಥ ದೇಗುಲದಂತೆ ದತ್ತಪೀಠವನ್ನು ಸಹ ಪುನರುತ್ಥಾನಗೊಳಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಪೀಠದಲ್ಲಿ ಹೋಮ, ಹವನ, ಅರ್ಚಕರಿಂದ ಪೂಜೆ ಸಲ್ಲಿಸುವ ಮೂಲಕ ಪುನರುತ್ಥಾನ ಕಾರ್ಯ ಇಂದಿನಿಂದಲೇ ಆರಂಭವಾಗಿದೆ
ಚಿಕ್ಕಮಗಳೂರು (ಡಿ.9) : ಸೋಮನಾಥ ದೇಗುಲದಂತೆ ದತ್ತಪೀಠವನ್ನು ಸಹ ಪುನರುತ್ಥಾನಗೊಳಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಪೀಠದಲ್ಲಿ ಹೋಮ, ಹವನ, ಅರ್ಚಕರಿಂದ ಪೂಜೆ ಸಲ್ಲಿಸುವ ಮೂಲಕ ಪುನರುತ್ಥಾನ ಕಾರ್ಯ ಇಂದಿನಿಂದಲೇ ಆರಂಭವಾಗಿದೆ ಎಂದರು. ಸಂಪುಟದ ಉಪ ಸಮಿತಿ ರಚನೆ ಮಾಡಿ ಸಮಿತಿ ಕೊಟ್ಟಶಿಫಾರಸು ಪರಿಗಣಿಸಿ ಸಂಪುಟದ ನಿರ್ಣಯದ ಪ್ರಕಾರ ದತ್ತಪೀಠ ವ್ಯವಸ್ಥಾಪನಾ ಸಮಿತಿ ರಚನೆಯಾಗಿದೆ. ತಾತ್ಕಾಲಿಕವಾಗಿ ಅರ್ಚಕರನ್ನು ನೇಮಕ ಮಾಡಲಾಗಿದೆ. ಪೂರ್ಣ ಪ್ರಮಾಣದ ನೇಮಕ ನಿಯಮದ ಪ್ರಕಾರ ಮಾಡಬೇಕಾಗಿರುವುದರಿಂದ ಈ ಕೆಲಸವೂ ಶೀಘ್ರವಾಗಿ ಆಗುತ್ತದೆ ಎಂದು ಹೇಳಿದರು.
ಕಾಶಿ ಕಾರಿಡಾರ್ ಹೇಗೆ ಅಭಿವೃದ್ಧಿ ಆಗಿದಿಯೋ ಹಾಗೆಯೇ ದತ್ತಪೀಠವನ್ನು ಸಹ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ದತ್ತಪೀಠದ ಇಂದು ಅಥವಾ ನಿನ್ನೆಯದಲ್ಲ, ನಾವ್ಯಾರು ಹುಟ್ಟು ಹಾಕಿದ್ದಲ್ಲ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಚಂದ್ರದ್ರೋಣ ಪರ್ವತದಲ್ಲಿ ದತ್ತಾತ್ರೇಯಸ್ವಾಮಿ ತಪಸ್ಸು ಮಾಡಿದ್ದರು. ಐಕ್ಯದ ಗುರುತಾಗಿ ಇಂದಿಗೂ ಪಾದುಕೆಗಳು ಇವೆ. ಎಲ್ಲ ಪುರಾಣದಲ್ಲೂ ಇದರ ಉಲ್ಲೇಖ ಇದೆ ಎಂದು ಹೇಳಿದರು.
undefined
Gujarat election ರಾವಣ ಮನಸ್ಸಿನ ಪಕ್ಷ ಸೋಲಲೇ ಬೇಕಿತ್ತು ಸೋತಿದೆ: ಸಿ.ಟಿ ರವಿ
ದರ್ಗಾ ಬೇರೆ ಇದೆ, ಪೀಠ ಬೇರೆ ಇದೆ. ನಾಗೇನಹಳ್ಳಿಯಲ್ಲಿ ದರ್ಗಾ ಇದೆ. ಅದು ಸರ್ಕಾರದ ಮೂಲಕ ಇಲ್ಲವಾದರೆ ನ್ಯಾಯಾಲಯದಲ್ಲಿ ಎತ್ತಿ ಹಿಡಿಯಲಾಗುವುದು. ಇಂದು ನಮಗೆ ಸಂತೃಪ್ತಿಯ ಭಾವನೆ ಇದೆ. ನಿರಾತಂಕವಾಗಿ ಪೂಜೆ ಸಲ್ಲಿಸುವ ವಾತಾವರಣ ನಿರ್ಮಾಣವಾಗಿದೆ ಎಂದರು.
ಸಾಂಸ್ಕೃತಿಕ ಪುನರುತ್ಥಾನದ ಪ್ರತೀಕ ದತ್ತಪೀಠ ಇದಕ್ಕೆ ಇರುವ ಆತಂಕ ನಿವಾರಣೆ ಮಾಡಲಾಗುವುದು. 2001ರಲ್ಲಿ ರಾಜ್ಯ ಸರ್ಕಾರದ ಸಂಕಲ್ಪ ತಾತ್ಕಾಲಿಕವಾಗಿತ್ತು. ಆಮೇಲೆ ನ್ಯಾಯಾಲಯದಿಂದ ಆದೇಶ ತಂದರು. ಆದರೆ, ಈಗ ನ್ಯಾಯಾಲಯದಿಂದಲೇ ಆದೇಶ ಆಗಿದೆ. ಹಿಂದೂ ಅರ್ಚಕರು ನೇಮಕವಾಗಬೇಕೆಂದು ನ್ಯಾಯಲಯವೇ ಪೂರಕ ಆದೇಶ ಮಾಡಿದೆ. ಅದಕ್ಕೆ ಪೂರಕವಾಗಿ ಸರ್ಕಾರ ನಿರ್ಣಯ ತೆಗೆದುಕೊಂಡಿದೆ. ಅಂದು ನಮ್ಮ ಚಳವಳಿಗೆ ಮಣಿದು ಹೋಮಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈಗ ನ್ಯಾಯಾಲಯದ ಬಲವೂ ಇದೆ. ಸರ್ಕಾರದ ತೀರ್ಮಾನವೂ ಬಲ ಕೊಟ್ಟಿದೆ. ಹಾಗಾಗಿ, ಯಾರೂ ತಡೆಯಲು ಸಾಧ್ಯವಿಲ್ಲ. ಪೂಜಾ ಕಾರ್ಯ ಮುಂದುವರಿಯಲಿದೆ ಎಂದರು. ನನ್ನನ್ನು ಮುಲ್ಲಾಅಂತಾ ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ: ಸಿ.ಟಿ.ರವಿ