Davanagere: ಕಳ್ಳಕಾಕರನ್ನು ನಿಯಂತ್ರಿಸಲು ಅಡಿಕೆ ತೋಟಕ್ಕೆ ಸಿಸಿಟಿವಿ: ರೈತನ ಹೊಸ ಉಪಾಯ

By Govindaraj SFirst Published Dec 9, 2022, 7:42 AM IST
Highlights

ಅಡಿಕೆ ಕದ್ದರೆ ಮಾನ ಹೋಗುತ್ತದೆ ಎಂಬ ಮಾತಿತ್ತು. ಆದ್ರೆ ಅಡಿಕೆ ತೋಟದಲ್ಲೇ ಅಡಿಕೆ ಕದಿಯುವವರ ಸಂಖ್ಯೆ ಹೆಚ್ಚಾಗಿದೆ. ಅಡಿಕೆ  ದರ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ತೋಟದಲ್ಲಿ ಹಸಿ ಅಡಿಕೆ ಕದ್ದು ಮಾರುವ ಕಳ್ಳರ ಸಂಖ್ಯೆ ಹೆಚ್ಚಾಗಿದೆ.

ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ 

ದಾವಣಗೆರೆ (ಡಿ.09): ಅಡಿಕೆ ಕದ್ದರೆ ಮಾನ ಹೋಗುತ್ತದೆ ಎಂಬ ಮಾತಿತ್ತು. ಆದ್ರೆ ಅಡಿಕೆ ತೋಟದಲ್ಲೇ ಅಡಿಕೆ ಕದಿಯುವವರ ಸಂಖ್ಯೆ ಹೆಚ್ಚಾಗಿದೆ. ಅಡಿಕೆ  ದರ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ತೋಟದಲ್ಲಿ ಹಸಿ ಅಡಿಕೆ ಕದ್ದು ಮಾರುವ ಕಳ್ಳರ  ಸಂಖ್ಯೆ ಹೆಚ್ಚಾಗಿದೆ. ಕೈ ಗೆ ಬಂದ ಫಸಲು ಬಾಯಿಗೆ ಬರಲಿಲ್ಲ ಎಂದು ರೈತರಿಗೆ ಸಂಕಟವಾದ್ರೆ ಪೊಲೀಸರಿಗೆ ಅಡಿಕೆ ಕದ್ದೊಯ್ಯುತ್ತಿರುವವರನ್ನು ಮಟ್ಟ ಹಾಕುವುದೇ ಒಂದು ಸವಾಲಾಗಿದೆ. ಇದಕ್ಕೆ ರೈತರೇ ಒಂದು ಉಪಾಯ ಕಂಡುಕೊಂಡು  ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿ ಅಡಿಕೆ  ತೋಟದಲ್ಲಿ ಸಿಸಿಟಿವಿ ಹಾಕಿಸುತ್ತಿದ್ದಾರೆ.. 

ದಾವಣಗೆರೆ ಜಿಲ್ಲೆಯ ಅಡಿಕೆ ನಾಡು ಎಂದು ಪ್ರಸಿದ್ಧಿಯಾಗಿರುವ ಚನ್ನಗಿರಿ ತಾಲ್ಲೂಕಿನಲ್ಲಿ ಅಡಿಕೆ ಕದಿಯುವ ಖದೀಮರ ಸಂಖ್ಯೆ ಹೆಚ್ಚಾಗಿದೆ. ಹಸನು ಮಾಡಿ ಇನ್ನೇನು ಮಾರುಕಟ್ಟೆಗೆ ಹೋಗಬೇಕೆಂದು ತುಂಬಿಸಿಟ್ಟಿದ್ದ ಅಡಿಕೆ ಚೀಲಗಳು ಕಳ್ಳರ ಪಾಲಾಗಿವೆ. ಇನ್ನು ಕೆಲವು ಕಡೆ ಫಸಲು ಬಂದ ಅಡಿಕೆ ತೋಟಕ್ಕೆ ಕಳ್ಳರು ಲಗ್ಗೆ ಇಟ್ಟು ಅಡಿಕೆ ಕದಿಯುತ್ತಿದ್ದಾರೆ. ಚನ್ನಗಿರಿ ತಾಲ್ಲೂಕ್ ದಾವಣಗೆರೆ ತಾಲ್ಲೂಕ್ ಮಾಯಕೊಂಡ ಹೋಬಳಿಯಲ್ಲಿ ಅಡಿಕೆ ತೋಟದ ಮಾಲೀಕರು ತಮ್ಮ ಫಸಲು ಬಂದ ಅಡಿಕೆ ತೋಟವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳಬೇಕಿದೆ.  ಚನ್ನಗಿರಿ ಸಂತೇಬೆನ್ನೂರು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ರೈತರು  ವಾರಕ್ಕೊಂದು ಕಳವು ಪ್ರಕರಣ ದಾಖಲಿಸುತ್ತಿದ್ದಾರೆ. ಈ ಕಳ್ಳತನದ ಕಣ್ಗಾವಲಿಗೆ ಇದೀಗ ಎಲೆಬೇತೂರಿನ  ಅಡಿಕೆ ತೋಟದ ಮಾಲೀಕ  ನಂದೀಶ್ ಹೈಟೆಕ್ ತಂತ್ರಜ್ಞಾನದ ಮೊರೆಹೋಗಿದ್ದಾರೆ. 

Ticket Fight: ಕೊಡಗಿನ ಎರಡು ಕ್ಷೇತ್ರಗಳಿಗೆ ಆಕಾಂಕ್ಷಿಗಳ ದಂಡು

ದಾವಣಗೆರೆ ತಾಲ್ಲೂಕಿನ ಎಲೇಬೇತೂರು ಗ್ರಾಮದಲ್ಲಿ ನಂದೀಶ್ ಎಂಬ ತೋಟದ ಮಾಲೀಕ ತನ್ನ ಮೂರುವರೆ ಎಕರೆ ಅಡಿಕೆ ತೋಟಕ್ಕೆ ಸಿಸಿಟಿವಿ ಹಾಕಿಸಿದ್ದಾರೆ. ತೋಟದ ಪ್ರವೇಶದ್ವಾರದಲ್ಲಿ ನಾಲ್ಕು ಹೈ ರೆಶಲ್ಯೂಶನ್ ಕ್ಯಾಮೆರಾಗಳು 24 ಗಂಟೆ  ಸರ್ವಲೆನ್ಸ್ ಮಾಡಲಿದ್ದು ಯಾರಾದ್ರು ಅಪರಿಚಿತರು ಕಳ್ಳರು ಹೊತ್ತಲ್ಲಿ ಹೊತ್ತಲ್ಲಿ ತೋಟಕ್ಕೆ ನುಗ್ಗಿದ್ರೆ ತಕ್ಷಣ ತೋಟದ ಮಾಲೀಕ ನಂದೀಶ್ ಮೊಬೈಲ್‌ಗೆ ಮೇಸೆಜ್ ಹೋಗುತ್ತಿದೆ. ತನ್ನ ಮೊಬೈಲ್  ಮಾನೀಟರ್‌ನಲ್ಲಿ ತೋಟದ  ಚಿತ್ರಣ ನೋಡುವ ನಂದೀಶ್  ತಕ್ಷಣ ಅಲರ್ಟ್ ಆಗಿ ತೋಟದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗಿದೆ. ನಂದೀಶ್ ಮನೆಯಿಂದ ಎಷ್ಟೇ ದೂರದಲ್ಲಿದ್ದರು ತನ್ನ ತೋಟದ ಆಗುಹೋಗುಗಳ ಬಗ್ಗೆ  ಸಂಪೂರ್ಣ ಚಿತ್ರಣ ಅಂಗೈಯಲ್ಲಿ ಮಾನಿಟರ್ ಮಾಡುತ್ತಿದ್ದಾರೆ. 

ಎಲೇಬೇತೂರಿನ  ನಂದೀಶ್‌ರವರ ತೋಟದಲ್ಲಿ ಮೂರು ಬಾರಿ ಕಳ್ಳರು ವಿಫಲ ಯತ್ನ ನಡೆಸಿದ್ದಾರೆ. ಒಮ್ಮೆ ಕಳ್ಳರು ನುಗ್ಗಿದ್ದು ಸಿಸಿಟಿವಿ ಮೂಲಕ ಗೊತ್ತಾಗಿ ಇಡೀ ಊರ ಗ್ರಾಮಸ್ಥರು ಕಳ್ಳರನ್ನು ಹಿಡಿಯಲು ಓಡಿಸಿಕೊಂಡು ಹೋಗಿದ್ದರು. ಆದ್ರೆ ಕಳ್ಳರು ಅದ್ಹೇಗೋ ಪಾರಾಗಿ ತೋಟದ ಕಳ್ಳತನ ಸಿಸಿಟಿವಿಯಿಂದ ತಪ್ಪಿತು. ಸಿಸಿಟಿವಿ ಹಾಕಿಸುವುದಕ್ಕು ಮುನ್ನ ತೋಟದ ಮನೆಯಲ್ಲಿ ಮಲಗಿ ನಿದ್ರೆಗೆಟ್ಟು ಕಳ್ಳಕಾಕರನ್ನು ಕಾಯಬೇಕಿತ್ತು. ಆದ್ರೆ ಸಿಸಿಟಿವಿ ಹಾಕಿಸಿದ ನಂತರ  ರೈತರು  ತೋಟದ ಮನೆಗೆ ಬಂದು ರಾತ್ರಿಯಿಡಿ ಕಳ್ಳರನ್ನು ಕಾಯುವುದು ತಪ್ಪಿದ್ದು ಮನೆಯಲ್ಲಿದ್ದೇ ಅಡಿಕೆ ತೋಟವನ್ನು ಕಾಯಬಹುದಾಗಿದೆ. 

ಇನ್ನು ಕರ್ನಾಟಕದತ್ತ ಎಲ್ಲರ ಚಿತ್ತ: ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ ಫೈಟ್‌

30 ಸಾವಿರ ವೆಚ್ಚದಲ್ಲಿ  ಸಿಸಿಟಿವಿ ಹಾಕಿರುವುದರಿಂದ  ಕಾಡುಪ್ರಾಣಿಗಳು ಹುಳ ಹುಪ್ಪಡಿಗಳ ಆತಂಕವಿಲ್ಲದೇ ಮನೆಯಿಂದಲೇ ನೆಮ್ಮದಿಯಾಗಿ ತೋಟ ನೋಡಿಕೊಳ್ಳಲು ಸಾಧ್ಯವಾಗಿದೆ. ಇದರಿಂದ ಮನೆಯವರಿಗೆ ತೋಟಕ್ಕೆ ಹೋದ ಮಗ ಅಲ್ಲಿ ಹೇಗಿದ್ದಾನೋ ಎಂಬ ಆತಂಕವು ಕಡಿಮೆಯಾಗಿದೆ ಎಂದು ನಂದೀಶ್ ತಾಯಿ ನಾಗರತ್ಮಮ್ಮ ಅಭಿಪ್ರಾಯಿಸುತ್ತಾರೆ.  ಅಡಿಕೆ ತೋಟದಿಂದ ಇತ್ತಿಚೆಗೆ ಲಕ್ಷ ಲಕ್ಷ ಆದಾಯ ಬರುತ್ತಿದ್ದು ಅಡಿಕೆ ತೋಟದ ಬೆಳೆಯನ್ನು ಉಳಿಸಿಕೊಳ್ಳುವುದು ರೈತರಿಗೊಂದು ಸವಾಲಾ ಆಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಕಳ್ಳರ ಪಾಲಾಗುವುದು ಸಿಸಿಟಿವಿ ಯಿಂದ ಗಣನೀಯವಾಗಿ ಕಡಿಮೆ ಆಗಿದೆ. ಒಂದು ತೋಟಕ್ಕೆ ಸಿಸಿಟಿವಿ ಅಳವಡಿಸಿದ್ರೆ ಸುತ್ತಮುತ್ತಲ  ರೈತರಿಗೆ ಅನುಕೂಲವಾಗುತ್ತಿದ್ದು ಸಿಸಿಟಿವಿ ಇತ್ತಿಚೆಗೆ ರೈತ ಸ್ನೇಹಿಯಾಗಿರುವುದು ನಿಜಕ್ಕು ರೈತ ವರ್ಗದಲ್ಲಿ ಸಂತಸ ಮೂಡಿಸಿದೆ.

click me!