
ಚಾಮರಾಜನಗರ: ಅದು ರಾಜ್ಯದ ಪ್ರಸಿದ್ದ ವನ್ಯಧಾಮ. ಅಲ್ಲಿ ಗೊಬ್ಬರ ಮಾಫಿಯಾ ಹಾಗೂ ಅರಣ್ಯದಲ್ಲಿರುವ ಹುಲಿ ಹಸು ಕೊಂದಿದ್ದಕ್ಕೆ ಆರು ಹುಲಿಗಳ ಹತ್ಯಾಕಾಂಡವೇ ನಡೆದು ಹೋಗಿತ್ತು. ಈ ಭಾಗದಲ್ಲಿ ಮಳೆ ಕೊರತೆಯಿಂದ ಬೀಕರ ಪರಿಸ್ಥಿತಿ ಇದೆ. ಇಲ್ಲಿರುವ ಹಸುಗಳಿಗೆ ಮೇವು, ನೀರು ಕೊರತೆಯಿದೆ. ಈ ಹಿನ್ನಲೆ ಬಿಗಿ ನಿಲುವು ತಳೆದ ಅರಣ್ಯಾಧಿಕಾರಿಗಳು ತಮಿಳುನಾಡಿನಿಂದ ರಾಜ್ಯಕ್ಕೆ ಎಂಟ್ರಿ ಕೊಡುವ ಹಸುಗಳಿಗೆ ನಿರ್ಬಂಧ ವಿಧಿಸಿದೆ. ತಮಿಳುನಾಡಿನಿಂದ ರಾಜ್ಯದ ಅರಣ್ಯಕ್ಕೆ ಬರುವ ಹಸುಗಳನ್ನು ವಾಪಾಸ್ ಕಳಿಸ್ತಿದ್ದಾರೆ. ಅಲ್ಲದೇ ಹದ್ದಿನ ಕಣ್ಣೀಡುವ ಕೆಲಸವಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ರಾಜ್ಯದಲ್ಲಿ ಈಗಾಗಲೇ ಬೀಕರ ಬರದ ಪರಿಸ್ಥಿತಿ ಇದೆ. ಜನಗಳಿಗಷ್ಟೇ ಅಲ್ಲ ಜಾನುವಾರುಗಳಿಗೂ ಕುಡಿಯುವ ನೀರಿನ ಅಭಾವವಿದೆ. ಅಲ್ಲದೇ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಕಳೆದ ವರ್ಷ 6 ಹುಲಿಗಳ ಹತ್ಯಾಕಾಂಡ ಕೂಡ ನಡೆದಿತ್ತು. ಅದು ಗೊಬ್ಬರ ಮಾಫಿಯಾ ಕೈವಾಡ ಇರುವ ಶಂಕೆ ತಮಿಳುನಾಡಿನಿಂದ ಸಾವಿರಾರು ಹಸುಗಳನ್ನು ತಂದು ಮಲೆ ಮಹದೇಶ್ವರ ವನ್ಯಧಾಮಕ್ಕೆ ಬಿಡಲಾಗುತ್ತಿತ್ತು. ಈ ಹಿನ್ನಲೆ ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವಲಯದಲ್ಲಿ ಒಂದು ತಾಯಿ ಹುಲಿ ಹಾಗೂ ನಾಲ್ಕು ಮರಿಗಳು ಸೇರಿ ಒಂದು ಹಸುವನ್ನು ಬೇಟೆಯಾಡಿ ಕೊಂದಿದ್ವು, ಇದ್ರಿಂದ ಆಕ್ರೋಶಗೊಂಡ ರೈತರು ಸತ್ತ ಹಸುವಿಗೆ ವಿಷವಿಟ್ಟು ಐದು ಹುಲಿಗಳ ಸಾವಿಗೆ ಕಾರಣವಾಗಿದ್ದರು. ಅಲ್ಲದೇ ಪಚ್ಚೆದೊಡ್ಡಿ ಗಸ್ತಿನಲ್ಲೂ ಕೂಡ ಹಸುವನ್ನು ಹುಲಿ ಕೊಂದಿದ ಅನ್ನೋ ಕಾರಣಕ್ಕೆ ವಿಷವಿಟ್ಟು ಕೊಂದು ಮೂರು ಭಾಗಗಳಾಗಿ ಹುಲಿಯನ್ನು ತುಂಡರಿಸಿದ್ದರು. ಈ ಎಲ್ಲಾ ಘಟನೆಯಿಂದ ಎಚ್ಚೆತ್ತ ಅರಣ್ಯಾಧಿಕಾರಿಗಳು ಇಂತಹ ಕೃತ್ಯಕ್ಕೆ ಬ್ರೇಕ್ ಹಾಕಬೇಕು ಅಂತಾ ಹೊರರಾಜ್ಯದಿಂದ ಬರುವ ಹಸುಗಳಿಗೆ ನಿಷೇಧ ವಿಧಿಸಿದರು.
ಇನ್ನೂ ಹುಲಿ ಕೊಂದ ಕಾರಣದಿಂದ ಅರಣ್ಯದಲ್ಲಿ ಹಸುಗಳನ್ನು ಕೊಂಡೊಯ್ದು ದೊಡ್ಡಿ ಹಾಕುವುದು, ಹೊರರಾಜ್ಯದಿಂದ ರಾಜ್ಯದ ಕಾಡುಗಳಿಗೆ ಬರುವ ಹಸುಗಳಿಗೆ ಸಂಪೂರ್ಣ ನಿಷೇಧ ವಿಧಿಸಿತು. ಅಲ್ಲದೇ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ನೆರೆರಾಜ್ಯದ ದನಗಳು ಬಾರದಂತೆ ಎಚ್ಚರಿಕೆ ವಹಿಸಲಾಗಿದೆ. ಸ್ಥಳೀಯ ಕಾಡಂಚಿನ ರೈತರ ಬಳಿ ಎಷ್ಟು ಹಸುಗಳಿವೆ ಎಂಬ ಮಾಹಿತಿ ಕಲೆ ಹಾಕಲೂ ಈಗಾಗಲೇ ಸರ್ವೇ ಕೂಡ ಮಾಡಲಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಬರದ ಕಾರ್ಮೋಡ ಆವರಿಸಿದೆ. ಹನೂರು ಭಾಗದಲ್ಲಂತೂ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಪರಿಸ್ಥಿತಿ ಇದೆ. ಮುಂದೆ ರಾಜ್ಯದಲ್ಲಿರುವ ದನಗಳಿಗೆ ಮೇವು ನೀರಿನ ಸಮಸ್ಯೆ ಉಂಟಾಗಲಿದೆ. ಈ ಹಿನ್ನಲೆ ಅರಣ್ಯಾಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದ್ದಾರೆ.
ಒಟ್ನಲ್ಲಿ ಗಡಿ ಜಿಲ್ಲೆಯನ್ನೂ ಸರ್ಕಾರ ಬರದ ಪಟ್ಟಿಗೆ ಸೇರಿಸಿದೆ. ಹನೂರು ಭಾಗದಲ್ಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿಯಿದೆ. ಆದ್ರಿಂದ ರಾಜ್ಯದ ಒಳಭಾಗದಲ್ಲಿರುವ ದನಗಳಿಗೆ ಮೇವು, ನೀರಿಲ್ಲ.ಹೊರಭಾಗದ ದನಗಳನ್ನು ಒಳಗೆ ಸೇರಿಸೋದು ಅಸಾಧ್ಯವಾಗಿದೆ. ಇನ್ನೂ ಗೊಬ್ಬರ ಮಾಫಿಯಾದಿಂದ ಮುಂದಿನ ದಿನಗಳಲ್ಲಿ ಕಾಡು ಹಾಗೂ ಕಾಡು ಪ್ರಾಣಿಗಳಿಗೂ ಸಮಸ್ಯೆ ಎದುರಾಗದಂತೆ ಅರಣ್ಯ ಇಲಾಖೆ ಹದ್ದಿನ ಕಣ್ಣೀಟ್ಟಿದೆ. (ವರದಿ: ಪುಟ್ಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ)