ರಾಯಚೂರು: ಜಿ.ಪಂ ಮತ್ತು ತಾ.ಪಂ ಚುನಾವಣಾ ಮೀಸಲಾತಿ ಪ್ರಕಟ, ಹಳ್ಳಿ ಹಳ್ಳಿಯಲ್ಲಿ ರಾಜಕೀಯ ಚಟುವಟಿಕೆ ಚುರುಕು!

Published : Nov 26, 2026, 10:00 AM IST
ZP Elections AI Image

ಸಾರಾಂಶ

ರಾಜ್ಯ ಸರ್ಕಾರ ರಾಯಚೂರು ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಮೀಸಲಾತಿ ಪ್ರಕಟಿಸಿದೆ. ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳು ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ರಾಯಚೂರು: ರಾಜ್ಯ ಸರ್ಕಾರ ಕೊನೆಗೂ ಸ್ಥಳೀಯ ಸಂಸ್ಥೆಗಳಾದ ತಾ.ಪಂ. ಮತ್ತು ಜಿ.ಪಂ‌. ಚುನಾವಣೆ ಮಾಡಲು ಕ್ಷೇತ್ರಗಳ ಮೀಸಲಾತಿ ಪ್ರಕಟಿಸಿದೆ. ಮೀಸಲಾತಿ ನೋಡಿದ ತಾ.ಪಂ. ಮತ್ತು ಜಿ.ಪಂ. ಆಕಾಂಕ್ಷಿಗಳಲ್ಲಿ ಚುನಾವಣೆ ಸ್ಪರ್ಧೆಗೆ ತಯಾರಿ ಶುರುವಾಗಿದೆ. ಮೀಸಲಾತಿಗೆ ತಕ್ಕ ಕ್ಷೇತ್ರದಲ್ಲಿ ಓಡಾಟ ಮಾಡಿ ಜನರ ಮನಗೆಲ್ಲಲು ತಾಲೀಮು ಶುರು ಮಾಡಿದ್ದಾರೆ. ಕೆಲವರು ಫೇಸ್‌ಬುಕ್‌ ಮತ್ತು ವಾಟ್ಸಾಪ್ ಗ್ರೂಪ್ ಗಳಲ್ಲಿ ತಮ್ಮ ಫೋಟೋ ಹಾಕಿ ನಾನು ಜಿ.ಪಂ. ಅಭ್ಯರ್ಥಿ ಅಂತ ಹೇಳಿಕೊಂಡು ಫೋಸ್ಟರ್ ರಾಜಕೀಯ ಚಟುವಟಿಕೆ ನಡೆಸಿದ್ದಾರೆ. ಇನ್ನೂ ಕೆಲವರು ಶಾಸಕರು ಮತ್ತು ಸಚಿವರು ಹಾಗೂ ಸಂಸದರನ್ನ ಭೇಟಿ ಮಾಡಿ ಟಿಕೆಟ್ ಕೊಡಿಸಿ, ನಾನು ಸ್ಪರ್ಧೆ ಮಾಡುತ್ತೇನೆ ಅವಕಾಶ ಕೊಡಿ ಅಂತ ಕೇಳಲು ಮುಂದಾಗಿದ್ದಾರೆ.

ಚುನಾವಣಾ ರಾಜಕೀಯಕ್ಕೆ ಹೊಸ ಲೆಕ್ಕಾಚಾರ

ಕಳೆದ 10 ವರ್ಷಗಳ ಬಳಿಕ ರಾಜ್ಯದಲ್ಲಿ ಜಿ.ಪಂ. ಹಾಗೂ ತಾ.ಪಂ. ಗಳಿಗೆ ಚುನಾವಣೆ ನಡೆಸಲು ಮೀಸಲಾತಿ ಪ್ರಕಟವಾಗಿದೆ. ಜಿಲ್ಲಾ ಪಂಚಾಯತ ಮತ್ತು ತಾ.ಪಂ.ಗಳ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಲಿವೆ. ಈಗಾಗಲೇ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳ ಮೀಸಲಾತಿ ವಿವರ ಪರಿಶೀಲಿಸುವಲ್ಲಿ ನಿರತರಾಗಿದ್ದಾರೆ.

ಕೆಲವು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನಿಗದಿಯಾಗಿರುವುದರಿಂದ ಮಹಿಳಾ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ಒಲಿದು ಬಂದಿದೆ. ಇನ್ನೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಕ್ಷೇತ್ರಗಳಲ್ಲಿ ಆಯಾ ವರ್ಗದ ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿಯಲು ಸಿದ್ಧತೆ ನಡೆಸಬೇಕಿದೆ. ಇತ್ತ ಸಾಮಾನ್ಯ ಕ್ಷೇತ್ರಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ನಡುವೆ ಪೈಪೋಟಿ ಹೆಚ್ಚಾಗುವ ಸಾಧ್ಯತೆಯಿದೆ.

ಪ್ರತಿ ಕ್ಷೇತ್ರದಲ್ಲಿ ನಾಲ್ಕು- ಐದು ಅಭ್ಯರ್ಥಿಗಳು ಕಣಕ್ಕೆ ಇಳಿಯಲು ಸಿದ್ಧತೆ

ರಾಯಚೂರು ಜಿಲ್ಲೆಯಲ್ಲಿ ಜಿ.ಪಂ. ಮತ್ತು ತಾ.ಪಂ.ಚುನಾವಣೆ ಮೀಸಲಾತಿ ಪ್ರಕಟಗೊಂಡ ಬಳಿಕ ಪ್ರತಿ ಊರಿನಲ್ಲಿ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ. ಜಿಲ್ಲೆಯಲ್ಲಿ 39 ಜಿ.ಪಂ. ಕ್ಷೇತ್ರಗಳು ಇದ್ದು, 133 ತಾ.ಪಂ.ಕ್ಷೇತ್ರಗಳು ಇವೆ. ಎಲ್ಲಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಚುನಾವಣೆ ತಯಾರಿ ಶುರು ಮಾಡಿದ್ದಾರೆ. ಕಳೆದ ಬಾರಿ ಸದಸ್ಯರಾಗಿ ಆಯ್ಕೆಯಾದವರು, ಮತ್ತೊಂದು ಅವಕಾಶಕ್ಕಾಗಿ ಹಿರಿಯ ನಾಯಕರ ಬಾಗಿಲಿಗೆ ಹೋಗಿ ಟಿಕೆಟ್ ನನಗೆ ಕೊಡಬೇಕು ಅಂತ ಕೇಳಿದ್ರೆ, ಹೊಸ ನಾಯಕರು ಈ ಬಾರಿ ನಮಗೆ ಅವಕಾಶ ನೀಡಬೇಕು. ನಾನು ಈ ಬಾರಿ ಜಿ.ಪಂ. ಅಭ್ಯರ್ಥಿ ಅಂತ ಸೋಷಿಯಲ್ ಮೀಡಿಯಾ ಬಳಕೆ ಮಾಡಿಕೊಂಡು ಪೋಸ್ಟರ್ ವೈರಲ್ ಮಾಡಲು ಶುರು ಮಾಡಿದ್ದಾರೆ.

ರಾಯಚೂರು ಜಿಲ್ಲೆಯ ಜಿ.ಪಂ. ಕ್ಷೇತ್ರ ಮತ್ತು ಮೀಸಲಾತಿ

ರಾಯಚೂರು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಒಟ್ಟು 39 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ವಿವಿಧ ಕ್ಷೇತ್ರಗಳಿಗೆ ಸಾಮಾನ್ಯ, ಮಹಿಳೆ, ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡ ಸೇರಿದಂತೆ ವಿವಿಧ ವರ್ಗಗಳ ಮೀಸಲಾತಿ ನಿಗದಿಪಡಿಸಲಾಗಿದೆ.

39 ಕ್ಷೇತ್ರಗಳಿಗೆ ನಿಗದಿಯಾದ ಮೀಸಲಾತಿ ವಿವರ

1) ಚಂದ್ರಬಂಡಾ ಜಿ.ಪಂ. ಕ್ಷೇತ್ರ- ಅನುಸೂಚಿತ ಜಾತಿ,

2) ದೇವಸುಗೂರು ಜಿ.ಪಂ. ಕ್ಷೇತ್ರ- ಸಾಮಾನ್ಯ (ಮಹಿಳೆ),

3) ಗಿಲ್ಲೆಸುಗೂರು ಜಿ.ಪಂ. ಕ್ಷೇತ್ರ- ಸಾಮಾನ್ಯ,

4) ಕಲ್ಮಲಾ ಜಿ.ಪಂ. ಕ್ಷೇತ್ರ - ಅನುಸೂಚಿತ ಜಾತಿ,

5) ತಲಮಾರಿ ಜಿ.ಪಂ. ಕ್ಷೇತ್ರ- ಅನುಸೂಚಿತ ಪಂಗಡ (ಮಹಿಳೆ),

6) ಯರಗೇರಾ ಜಿ.ಪಂ. ಕ್ಷೇತ್ರ, ಅನುಸೂಚಿತ ಜಾತಿ (ಮಹಿಳೆ),

7) ಚಿಕ್ಕಸುಗೂರು ಜಿ.ಪಂ. ಕ್ಷೇತ್ರ - ಸಾಮಾನ್ಯ (ಮಹಿಳೆ),

8) ಹಿರೇಕೊಟ್ನೆಕಲ್ ಜಿ.ಪಂ. ಕ್ಷೇತ್ರ- ಸಾಮಾನ್ಯ

9) ಕುರ್ಡಿ ಜಿ.ಪಂ. ಕ್ಷೇತ್ರ- ಅನುಸೂಚಿತ ಪಂಗಡ,

10) ನೀರಮಾನ್ವಿ ಜಿ.ಪಂ. ಕ್ಷೇತ್ರ- ಅನುಸೂಚಿತ ಜಾತಿ,

11) ಪೋತ್ನಾಳ ಜಿ.ಪಂ. ಕ್ಷೇತ್ರ,- ಸಾಮಾನ್ಯ,

12) ಕಲ್ಮಂದೂರು ಜಿ.ಪಂ. ಕ್ಷೇತ್ರ,- ಸಾಮಾನ್ಯ (ಮಹಿಳೆ),

13) ಬಾಗಲವಾಡ ಜಿ.ಪಂ. ಕ್ಷೇತ್ರ - ಅನುಸೂಚಿತ ಜಾತಿ (ಮಹಿಳೆ),

14) ಮಲ್ಲಟ ಜಿ.ಪಂ. ಕ್ಷೇತ್ರ,- ಅನುಸೂಚಿತ ಪಂಗಡ,

15) ಮಸರಕಲ್ ಜಿ.ಪಂ. ಕ್ಷೇತ್ರ- ಅನುಸೂಚಿತ ಜಾತಿ (ಮಹಿಳೆ),

16) ಕೊಪ್ಪರ ಜಿ.ಪಂ. ಕ್ಷೇತ್ರ- ಸಾಮಾನ್ಯ,

17) ಗಬ್ಬೂರು ಜಿ.ಪಂ. ಕ್ಷೇತ್ರ- ಸಾಮಾನ್ಯ,

18) ಜಾಲಹಳ್ಳಿ ಜಿ.ಪಂ. ಕ್ಷೇತ್ರ- ಅನುಸೂಚಿತ ಪಂಗಡ (ಮಹಿಳೆ),

19) ಅರಕೇರಾ ಜಿ.ಪಂ. ಕ್ಷೇತ್ರ, ಸಾಮಾನ್ಯ (ಮಹಿಳೆ),

20) ಕಾದಿಗೇರಾ ಜಿ.ಪಂ. ಕ್ಷೇತ್ರ, ಅನುಸೂಚಿತ ಪಂಗಡ (ಮಹಿಳೆ)

21) ರಾಮದುರ್ಗ ಜಿ.ಪಂ. ಕ್ಷೇತ್ರ- ಅನುಸೂಚಿತ ಜಾತಿ (ಮಹಿಳೆ),

22) ಗಲಗ ಜಿ.ಪಂ. ಕ್ಷೇತ್ರ- ಸಾಮಾನ್ಯ,

23) ನಾಗಲಾಪುರ ಜಿ.ಪಂ. ಕ್ಷೇತ್ರ- ಸಾಮಾನ್ಯ (ಮಹಿಳೆ),

24) ಮಾವಿನಭಾವಿ ಜಿ.ಪಂ. ಕ್ಷೇತ್ರ, - ಸಾಮಾನ್ಯ,

25) ಆನೆ ಹೊಸೂರು ಜಿ.ಪಂ. ಕ್ಷೇತ್ರ- ಅನುಸೂಚಿತ ಜಾತಿ

26) ದೇವರಭೂಪುರ ಜಿ.ಪಂ. ಕ್ಷೇತ್ರ, ಸಾಮಾನ್ಯ

27) ಗುರುಗುಂಟಾ ಜಿ.ಪಂ. ಕ್ಷೇತ್ರ- ಅನುಸೂಚಿತ ಪಂಗಡ (ಮಹಿಳೆ)

28) ಗಜಲಗಟ್ಟಾ ಜಿ.ಪಂ. ಕ್ಷೇತ್ರ- ಸಾಮಾನ್ಯ,

29) ಜವಳಗೇರಾ ಜಿ.ಪಂ. ಕ್ಷೇತ್ರ, - ಸಾಮಾನ್ಯ (ಮಹಿಳೆ),

30) ಬಾದರ್ಲಿ ಜಿ.ಪಂ. ಕ್ಷೇತ್ರ- ಅನುಸೂಚಿತ ಪಂಗಡ

31) ದೇವರಗುಡಿ ಜಿ.ಪಂ. ಕ್ಷೇತ್ರ,- ಹಿಂದುಳಿದ ವರ್ಗ 'ಅ' (ಮಹಿಳೆ),

32) ರೌಂಡಕುಂದಾ ಜಿ.ಪಂ. ಕ್ಷೇತ್ರ- ಅನುಸೂಚಿತ ಜಾತಿ

33) ಸಾಲಗುಂದಾ ಜಿ.ಪಂ. ಕ್ಷೇತ್ರ- ಸಾಮಾನ್ಯ (ಮಹಿಳೆ),

34) ಜಾಲಿಹಾಳ ಸಾಮಾನ್ಯ

35) ತಿಡಿಗೋಳ ಜಿ.ಪಂ. ಕ್ಷೇತ್ರ- ಸಾಮಾನ್ಯ (ಮಹಿಳೆ),

36) ತೋರಣದಿನ್ನಿ ಜಿ.ಪಂ. ಕ್ಷೇತ್ರ- ಸಾಮಾನ್ಯ (ಮಹಿಳೆ),

37) ಸಂತೇಕಲ್ಲೂರು ಜಿ.ಪಂ. ಕ್ಷೇತ್ರ- ಅನುಸೂಚಿತ ಪಂಗಡ,

38): ಮೇದಿನಾಳ ಜಿ.ಪಂ. ಕ್ಷೇತ್ರ- ಅನುಸೂಚಿತ ಜಾತಿ (ಮಹಿಳೆ),

39) ಗುಡದೂರು ಜಿ.ಪಂ. ಕ್ಷೇತ್ರ ಸಾಮಾನ್ಯ

ಹೀಗೆ ಕ್ಷೇತ್ರಗಳ ವಿವರ ಇದ್ದು, ಈ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ನಿಧಾನವಾಗಿ ಆರಂಭವಾಗಿವೆ.

ರಾಯಚೂರು ಜಿಲ್ಲೆಯಲ್ಲಿವೆ 133 ತಾ.ಪಂ. ಚುನಾವಣಾ ಕ್ಷೇತ್ರಗಳು

ರಾಯಚೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಬೆನ್ನಲ್ಲೇ ಇದೀಗ ರಾಯಚೂರು ಜಿಲ್ಲೆಯ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಕೂಡ ಪ್ರಕಟಗೊಂಡಿದೆ. ಜಿಲ್ಲೆಯ ವಿವಿಧ ತಾಲೂಕು ಪಂಚಾಯಿತಿಗಳ ವ್ಯಾಪ್ತಿಯ ಒಟ್ಟು 133 ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಿ ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಅನ್ವಯ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿದೆ.

ರಾಯಚೂರು ಜಿಲ್ಲೆಯಲ್ಲಿ 8 ತಾಲೂಕುಗಳ ತಾ.ಪಂ.ಕ್ಷೇತ್ರಗಳ ವಿವರ

ರಾಯಚೂರು ತಾಲೂಕು: 23 ತಾ.ಪಂ. ಕ್ಷೇತ್ರಗಳು

ಮಾನ್ವಿ ತಾಲೂಕು: 14 ತಾ.ಪಂ. ಕ್ಷೇತ್ರಗಳು

ಸಿರವಾರ ತಾಲೂಕು: 11 ತಾ.ಪಂ. ಕ್ಷೇತ್ರಗಳು

ದೇವದುರ್ಗ ತಾಲೂಕು: 13 ತಾ.ಪಂ. ಕ್ಷೇತ್ರಗಳು

ಲಿಂಗಸುಗೂರು ತಾಲೂಕು: 22 ತಾ.ಪಂ. ಕ್ಷೇತ್ರಗಳು

ಮಸ್ಕಿ ತಾಲೂಕು: 16 ತಾ.ಪಂ. ಕ್ಷೇತ್ರಗಳು

ಸಿಂಧನೂರು ತಾಲೂಕು: 21 ತಾ.ಪಂ. ಕ್ಷೇತ್ರಗಳು

ಅರಕೇರಾ ತಾಲೂಕು: 13 ತಾ.ಪಂ. ಕ್ಷೇತ್ರಗಳು

ಹೀಗೆ 8 ತಾಲೂಕುಗಳು ಸೇರಿ ಒಟ್ಟು 133 ತಾ.ಪಂ. ಕ್ಷೇತ್ರಗಳಲ್ಲಿ ಮೀಸಲಾತಿ ಪ್ರಕಟಿಸಲಾಗಿದೆ. ಈ ಮೀಸಲಾತಿ ಬಂದ ಬಳಿಕ ಚುನಾವಣಾ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರು ಚುನಾವಣೆ ಸಿದ್ಧತೆಯಲ್ಲಿ ತೊಡಗಿದ್ದಾರೆ. (ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು) 

PREV
Read more Articles on
click me!

Recommended Stories

ಕೃಷಿ ಅಧಿಕಾರಿ ಹುಚ್ಚಪ್ಪ ಶಿಂಗೆಗೋಳ ಮನೆ, ಕಚೇರಿ, ತೋಟದ ಮೇಲೆ ಲೋಕಾಯುಕ್ತ ದಾಳಿ; ಸಿಕ್ಕಿದ್ದೇನು?
ವೀರೇಂದ್ರ ಹೆಗ್ಗಡೆ ಜನ್ಮದಿನಕ್ಕೆ ಅಂಚೆ ಚೀಟಿ ಬಿಡುಗಡೆ; ಕಲಾಂ ಬಳಸಿದ್ದ ಕಾರು, ಪೆನ್ನು ಸಂಗ್ರಹಾಲಯಕ್ಕೆ!