ಸರ್ಜಾಪುರ-ಹೆಬ್ಬಾಳ ಮೆಟ್ರೋ: ಟೋಲ್ ವಸೂಲಿ ಮಾಡೋಕ್ ರೆಡಿ, ಡಬಲ್ ಡೆಕ್ಕರ್‌ಗೆ ಅಪ್ರೂವಲ್ ಕೊಡಿ! ಕೃಷ್ಣ ಬೈರೇಗೌಡ

Published : Nov 26, 2026, 09:32 AM IST
Bengaluru Sarjapura Hebbal Double dekkar red line metro

ಸಾರಾಂಶ

ಬೆಂಗಳೂರಿನ ಸರ್ಜಾಪುರ–ಹೆಬ್ಬಾಳ ಮೆಟ್ರೋ ರೆಡ್ ಲೈನ್ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿ 22 ತಿಂಗಳು ಕಳೆದರೂ ಕೇಂದ್ರದ ಅನುಮೋದನೆ ಬಾಕಿ ಇದೆ. ಡಬಲ್ ಡೆಕ್ಕರ್ ವ್ಯವಸ್ಥೆ ಮತ್ತು ಟೋಲ್ ಸಂಗ್ರಹಕ್ಕೆ ರಾಜ್ಯ ಸರ್ಕಾರ ಸಮ್ಮತಿಸಿದೆ. ಈ ಯೋಜನೆಯಿಂದ ವಾಹನ ದಟ್ಟಣೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ.

ಬೆಂಗಳೂರು (ನ.26): ಸಿಲಿಕಾನ್ ಸಿಟಿ ಬೆಂಗಳೂರು ಜನರ ಬಹುನಿರೀಕ್ಷಿತ 37.8 ಕಿ.ಮೀ. ಉದ್ದದ ಸರ್ಜಾಪುರ–ಹೆಬ್ಬಾಳ ಮೆಟ್ರೋ ರೆಡ್ ಲೈನ್ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿ 22 ತಿಂಗಳು ಕಳೆದರೂ ಕೇಂದ್ರ ಸರ್ಕಾರದ ಅಧಿಕೃತ ಅನುಮೋದನೆ ಇನ್ನೂ ಬಾಕಿ ಉಳಿದಿದೆ. ಯೋಜನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ಸಕಾರಾತ್ಮಕ ಸ್ಪಂದನೆ ದೊರೆತಿದ್ದರೂ, ಅಂತಿಮ ಹಸಿರು ನಿಶಾನೆಗಾಗಿ ರಾಜ್ಯ ಸರ್ಕಾರ ಕಾಯುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಸರ್ಜಾಪುರದಿಂದ ಹೆಬ್ಬಾಳದವರೆಗಿನ ರೆಡ್ ಲೈನ್ ಮಾರ್ಗದಲ್ಲಿ ಡಬಲ್ ಡೆಕ್ಕರ್ ವ್ಯವಸ್ಥೆ ನಿರ್ಮಿಸುವ ಪ್ರಸ್ತಾವನೆ ಮುಂದಿದೆ. ಡಬಲ್ ಡೆಕ್ಕರ್ ನಿರ್ಮಿಸಿದರೆ ಅದಕ್ಕೆ ಟೋಲ್ ಸಂಗ್ರಹಿಸಬೇಕೆಂಬ ಕೇಂದ್ರದ ಷರತ್ತಿಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಯೋಜನೆಯ ಪ್ರಮುಖ ಅಂಶಗಳು

ಮಾರ್ಗ ಮತ್ತು ಉದ್ದ: ಸರ್ಜಾಪುರದಿಂದ ಹೆಬ್ಬಾಳದವರೆಗೆ ಸುಮಾರು 37.8 ಕಿ.ಮೀ. ಉದ್ದದ ಈ ಮಾರ್ಗವು ಬೆಂಗಳೂರಿನ ಪ್ರಮುಖ ಸಂಚಾರ ದಟ್ಟಣೆ ಪ್ರದೇಶಗಳನ್ನು ಸಂಪರ್ಕಿಸಲಿದೆ.

ಸಿದ್ಧತೆಗಳು: ಸರ್ಜಾಪುರ ಭಾಗದಲ್ಲಿ ಈಗಾಗಲೇ ಮಣ್ಣಿನ ಪರೀಕ್ಷೆ ಪೂರ್ಣಗೊಂಡಿದ್ದು, ಕೇಂದ್ರದ ಒಪ್ಪಿಗೆ ಸಿಕ್ಕ ಬಳಿಕ ಮುಂದಿನ ಹಂತದ ಕಾಮಗಾರಿಗಳಿಗೆ ವೇಗ ನೀಡಲಾಗುತ್ತದೆ.

ಡಬಲ್ ಡೆಕ್ಕರ್ ಮತ್ತು ಟೋಲ್ ತಂತ್ರ: ರಸ್ತೆ ಸಂಚಾರದ ಜೊತೆಗೆ ಮೆಟ್ರೋ ವ್ಯವಸ್ಥೆಯನ್ನು ಸಂಯೋಜಿಸುವ ಡಬಲ್ ಡೆಕ್ಕರ್ ಮಾರ್ಗಕ್ಕೆ ಟೋಲ್ ವಿಧಿಸುವುದರಿಂದ, ಜನರು ಖಾಸಗಿ ವಾಹನಗಳ ಬದಲು ಮೆಟ್ರೋ ಪ್ರಯಾಣದತ್ತ ಆಕರ್ಷಿತರಾಗುತ್ತಾರೆ ಮತ್ತು ಮೆಟ್ರೋ ಬಳಕೆ ಹೆಚ್ಚುತ್ತದೆ ಎಂಬುದು ಕೇಂದ್ರದ ಲೆಕ್ಕಾಚಾರವಾಗಿದೆ.

ಬೆಂಗಳೂರಿಗರ ನಿರೀಕ್ಷೆ

ಸರ್ಜಾಪುರ ಭಾಗದಿಂದ ಉತ್ತರ ಬೆಂಗಳೂರಿನ ಹೆಬ್ಬಾಳದವರೆಗೆ ನೇರ ಮೆಟ್ರೋ ಸಂಪರ್ಕ ಕಲ್ಪಿಸುವ ಈ ಯೋಜನೆಯಿಂದ ವಾಹನ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಇದೆ. ಕೇಂದ್ರದ ಅಧಿಕೃತ ಅನುಮೋದನೆ ಶೀಘ್ರದಲ್ಲೇ ದೊರೆತು ಕಾಮಗಾರಿ ಆರಂಭವಾಗಲಿ ಎಂದು ಬೆಂಗಳೂರಿಗರು ಎದುರು ನೋಡುತ್ತಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರಲ್ಲಿ ನಡೆಯುತ್ತಿದ್ದ ಪಾಕಿಸ್ತಾನಿ ಡ್ರಾಮಾ ‘ದಾರ್-ಎ-ನಿಜಾತ್’ ಪ್ರದರ್ಶನ ರದ್ದು; ಫ್ರೇಜರ್ ಟೌನ್ ವಿವಾದ ಅಂತ್ಯ
ವಾಕಿಂಗ್‌ಗೆ ಹೋದ ವ್ಯಕ್ತಿ ದಿಢೀರ್ ಫುಡ್ ಡೆಲಿವರಿ ಬಾಯ್ ಆಗಿದ್ದೇಕೆ? ಬೆಂಗಳೂರಿನಲ್ಲಿ ನಡೆದ ಮನಕಲಕುವ ಘಟನೆಯಿದು!