ಸಮುದ್ರದಲ್ಲಿ ಈಜಲು ಹೋಗಿ ಮುಳುಗುತ್ತಿದ್ದ ಮಹಿಳೆ ಮತ್ತು ಮಗುವಿನ ರಕ್ಷಣೆ ಮಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿಯಲ್ಲಿ ನಡೆದಿದೆ. ಭಟ್ಕಳ ಮೂಲದ ಶಬಾನಾ ಹಾಗೂ ಆಕೆಯ ಪುತ್ರ ಮಹಮ್ಮದ್ ರಝಾಕ್ ರಕ್ಷಣೆಗೊಳಗಾದವರು.
ಕಾರವಾರ (ಡಿ.04): ಸಮುದ್ರದಲ್ಲಿ ಈಜಲು ಹೋಗಿ ಮುಳುಗುತ್ತಿದ್ದ ಮಹಿಳೆ ಮತ್ತು ಮಗುವಿನ ರಕ್ಷಣೆ ಮಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿಯಲ್ಲಿ ನಡೆದಿದೆ. ಭಟ್ಕಳ ಮೂಲದ ಶಬಾನಾ ಹಾಗೂ ಆಕೆಯ ಪುತ್ರ ಮಹಮ್ಮದ್ ರಝಾಕ್ ರಕ್ಷಣೆಗೊಳಗಾದವರು. ಸಂಬಂಧಿಕರ ಕಾರ್ಯಕ್ರಮಕ್ಕಾಗಿ ಭಟ್ಕಳದಿಂದ ತದಡಿಗೆ ಆಗಮಿಸಿದ್ದ ತಾಯಿ ಮಗ ತದಡಿ ಭಾಗದ ಸಮುದ್ರದಲ್ಲಿ ಆಟವಾಡಲು ಇಳಿಯುವಾಗ ಅಲೆಗೆ ಸಿಲುಕಿ ಮುಳಗಿದ್ದರು. ಕೂಡಲೇ ಸ್ಥಳೀಯ ಮೀನುಗಾರರಿಂದ ತಾಯಿ ಮಗುವಿನ ರಕ್ಷಣೆ ಮಾಡಲಾಗಿದ್ದು, ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವಿದ್ಯಾರ್ಥಿನಿಯರಿಂದ ಅಸ್ವಸ್ಥ ಮಹಿಳೆ ರಕ್ಷಣೆ: ಸುರಪುರ ನಗರದಲ್ಲಿ ಕೆಲ ದಿನಗಳಿಂದ ಅಸ್ಪಸ್ಥ ಮಹಿಳೆಯೊಬ್ಬರು ಅರೆಬರೆ ಬಟ್ಟೆಯುಟ್ಟು ಮೈಮೇಲೆ ಪ್ರಜ್ಞೆಯಿಲ್ಲದೆ ಓಡಾಡುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿನಿಯರು ಮಹಿಳೆಗೆ ಸೂಕ್ತ ರಕ್ಷಣೆ ಕೋರಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರಿಂದ ನ್ಯಾಯಾಲಯವು ಅಸ್ವಸ್ಥ ಮಹಿಳೆಯನ್ನು ಸೂಕ್ತ ಚಿಕಿತ್ಸೆಗಾಗಿ ಧಾರವಾಡದ ನಿಮಾನ್ಸಿಗೆ ಕರೆದೊಯ್ಯುವಂತೆ ಸೂಚಿಸಿದೆ. ನಗರದ ರಂಗಂಪೇಟೆ ಮತ್ತು ಸುರಪುರದ ಹಾದಿಬೀದಿಯಲ್ಲಿ ಮಾನಸಿಕ ಅಸ್ವಸ್ಥೆ ತನ್ನ ಬಟ್ಟೆಅರಿವಿಲ್ಲದಂತೆ ವಿಚಿತ್ರವಾಗಿ ವರ್ತಿಸುತ್ತಾ ಓಡುತಿದ್ದರು. ಜನರು ನೋಡಿದರೂ ಅವರನ್ನು ಸರಿಯಾದ ಸ್ಥಳಕ್ಕೆ ತಲುಪಿಸುವಲ್ಲಿ ನಾಗರಿಕ ಸಮಾಜ ಸೋತಿದೆ.
Chikkamagaluru: ಡಿ.ಎನ್.ಜೀವರಾಜ್‌ಗೆ ಸವಾಲು ಹಾಕಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ
ನಾನೊಬ್ಬ ಮಹಿಳಾ ವಿದ್ಯಾರ್ಥಿನಿಯಾಗಿ ಇನ್ನೊಬ್ಬ ಮಹಿಳೆಯ ವರ್ತನೆ ನೋಡಿ ಮಾನವೀಯತೆಯಿಂದ ಅವರನ್ನು ಸೂಕ್ತ ಸ್ಥಳಕ್ಕೆ ತಲುಪಿಸಿ ಚಿಕಿತ್ಸೆ ಕೊಡಿಸಬೇಕು ಎಂದು ತಾಲೂಕು ಕಾನೂನು ಅಧಿಕಾರಿಗಳಿಗೆ ರಂಗಂಪೇಟೆಯ ಅಂಬೇಡ್ಕರ್ ಪದವಿ ಕಾಲೇಜಿನ ವಿದ್ಯಾರ್ಥಿನಿಯರಾದ ಯಲ್ಲಮ್ಮ, ರೇಣುಕಾ, ಅಂಬಿಕಾ ಅರ್ಜಿ ನೀಡಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ತಾಲೂಕು ಕಾನೂನು ಸೇವಾ ಸಮಿತಿ ಮಾನಸಿಕ ಅಸ್ವಸ್ಥ ಮಹಿಳೆಗೆ ವೈದ್ಯಕೀಯ ಉಪಚಾರ ಕೊಡಿಸಿ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೆ.7 ರಂದು ಆದೇಶ ನೀಡಿತ್ತು.
ಆದರೂ ಸಿಡಿಪಿಓ ಇಲಾಖೆಯೂ ಅಸ್ವಸ್ಥೆಗೆ ಸೂಕ್ತ ಪುನರ್ವಸತಿ ಮತ್ತು ಚಿಕಿತ್ಸೆ ಕೊಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದನ್ನು ಕನ್ನಡಪ್ರಭ ದಿನಪತ್ರಿಕೆಯೂ ಸುರಪುರ ತಾಲೂಕು ಕಾನೂನು ಸೇವಾ ಸಮಿತಿ ಗಮನಕ್ಕೆ ತಂದಿತ್ತು. ಸುಮಾರು 12 ದಿನಗಳ ತರುವಾಯ ನ್ಯಾಯಾಧೀಶರು ನೀಡಿದ ಕಟ್ಟೆಚ್ಚರದ ಆದೇಶದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಕರೆತಂದು ನ್ಯಾಯಾಲಯದಿಂದ ರೆಸಿಪ್ಷನ್ ಆದೇಶ ಪಡೆದು ಮಾನಸಿಕ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿತು. ಬಳಿಕ ಎಚ್ಚೆತ್ತುಕೊಂಡ ಸಿಡಿಪಿಓ ಇಲಾಖೆ ಅಧಿಕಾರಿಗಳು ಅಸ್ವಸ್ಥೆಯನ್ನು ಸೆ. 19ರಂದು ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಧಾರವಾಡ ನಿಮಾನ್ಸ್‌ಗೆ ಕಳುಹಿಸಿಕೊಡಲಾಯಿತು.
ಸ್ವಾರ್ಥ, ಪ್ರತಿಷ್ಠೆ ಬಿಟ್ಟು ಒಳ್ಳೆ ಮಾರ್ಗದಲ್ಲಿ ಅನುಸರಿಸಿ: ಸಚಿವ ಅಶ್ವತ್ಥನಾರಾಯಣ್
ಮೆಚ್ಚುಗೆ ವ್ಯಕ್ತ: ಸಮಾಜದಲ್ಲಿ ಮಾನಸಿಕ ಅಸ್ವಸ್ಥರು ಸಂಚರಿಸುತ್ತಿದ್ದರೂ ನಾಗರಿಕ ಸಮಾಜದವರು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ, ರಂಗಂಪೇಟೆಯ ಅಂಬೇಡ್ಕರ್ ಪದವಿ ವಿದ್ಯಾರ್ಥಿನಿಯರು ಇದಕ್ಕೆ ತದ್ವಿರುದ್ಧವಾಗಿದ್ದು, ಅಸ್ವಸ್ಥ ಮಹಿಳೆಯ ತಿರುಗಾಡುವುದನ್ನು ಮನಗಂಡು ಕೋರ್ಚ್‌ವರೆಗೂ ಹೋಗಿ ಅರ್ಜಿ ನೀಡಿ ಸೂಕ್ತ ನ್ಯಾಯಕ್ಕೆ ಮೊರೆ ಹೋಗಿರುವ ಧೈರ್ಯವನ್ನು ಮೆಚ್ಚುವಂಥದ್ದು. ಇಂತಹ ಮಾದರಿ ಗುಣಗಳನ್ನು ವಿದ್ಯಾರ್ಥಿನಿಯರು ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.