ಉಡುಪಿ: ಕರಾವಳಿಯಲ್ಲಿ ಪಕ್ಷಿಗಳ ಕಲರವ- ಪಕ್ಷಿ ವೀಕ್ಷಣೆಗೆ ಇದು ಸಕಾಲ

By Suvarna NewsFirst Published Dec 26, 2022, 6:30 PM IST
Highlights

ಭಾವನಾ ಪ್ರತಿಷ್ಠಾನ ಹಾವಂಜೆ ಗ್ರಾಮೀಣ ಮಟ್ಟದಲ್ಲಿ ಜೀವ ವೈವಿಧ್ಯತೆಗಳನ್ನು ಗುರುತಿಸುವ ಮತ್ತು ಆ ನಿಟ್ಟಿನಲ್ಲಿ ಜಾಗೃತಗೊಳಿಸುವ ಪಕ್ಷಿ ವೀಕ್ಷಣೆಯ ದ್ವಿತೀಯ ಕಾರ್ಯಕ್ರಮವನ್ನು ಹಾವಂಜೆ ಗ್ರಾಮ ಪಂಚಾಯತ್, ಜೀವ ವೈವಿಧ್ಯ ಸಮಿತಿ ಹಾಗೂ ಗ್ರಾಮ ವಿಕಾಸ ಸಮಿತಿ ಮತ್ತು ಬರ್ಡರ್ಸ್ ಕ್ಲಬ್ ಇವರ ಸಹಯೋಗದಲ್ಲಿ ಸಂಯೋಜಿಸಿತ್ತು.

ಉಡುಪಿ (ಡಿ.26): ಕರಾವಳಿ ಜಿಲ್ಲೆ ಉಡುಪಿಯಲ್ಲಿ ಹಿತವಾದ ವಾತಾವರಣ ಇದೆ. ಜಿಲ್ಲೆಯಾದ್ಯಂತ ಅಪರೂಪಕ್ಕೆ ಎಂಬಂತೆ ಚಳಿ ಕಾಣಿಸಿಕೊಂಡಿದೆ. ಜಿಲ್ಲೆಯ ಹಸಿರು ಹಾಸಿನ ಮಲೆನಾಡು ಭಾಗದಲ್ಲಿ, ಪಕ್ಷಿಗಳ ಕಲರವ ಹೆಚ್ಚಿದೆ. ಅದರಲ್ಲೂ ಡಿಸೆಂಬರ್ ಜನವರಿ ತಿಂಗಳಲ್ಲಿ ವಿದೇಶಿ ಪಕ್ಷಿಗಳು, ಅತಿ ಹೆಚ್ಚು ಸಂಖ್ಯೆಯಲ್ಲಿ ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ವಲಸೆ ಬರುತ್ತವೆ. ವಲಸೆ ಹಕ್ಕಿಗಳನ್ನು ಗುರುತಿಸುವುದು ಹಾಗೂ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಪಕ್ಷಿಗಳ ಅಧ್ಯಯನ ನಡೆಸುವ ತಂಡವೇ ಉಡುಪಿಯಲ್ಲಿದೆ. ಪಕ್ಷಿ ವೀಕ್ಷಕರಿಗೆ ಇದು ಹೇಳಿ ಮಾಡಿಸಿದ ಕಾಲ.

ಭಾವನಾ ಪ್ರತಿಷ್ಠಾನ (ರಿ.) ಹಾವಂಜೆ ಗ್ರಾಮೀಣ ಮಟ್ಟದಲ್ಲಿ ಜೀವ ವೈವಿಧ್ಯತೆಗಳನ್ನು ಗುರುತಿಸುವ ಮತ್ತು ಆ ನಿಟ್ಟಿನಲ್ಲಿ ಜಾಗೃತಗೊಳಿಸುವ ಪಕ್ಷಿ ವೀಕ್ಷಣೆಯ ದ್ವಿತೀಯ ಕಾರ್ಯಕ್ರಮವನ್ನು ಹಾವಂಜೆ ಗ್ರಾಮ ಪಂಚಾಯತ್, ಜೀವ ವೈವಿಧ್ಯ ಸಮಿತಿ ಹಾಗೂ ಗ್ರಾಮ ವಿಕಾಸ ಸಮಿತಿ ಮತ್ತು ಬರ್ಡರ್ಸ್ ಕ್ಲಬ್ ಇವರ ಸಹಯೋಗದಲ್ಲಿ ಸಂಯೋಜಿಸಿತ್ತು. ಸುಮಾರು ಎರಡು ಘಂಟೆಗಳ ಅವಧಿಯಲ್ಲಿ 93 ಪ್ರಬೇಧದ ಪಕ್ಷಿಗಳನ್ನು ಗುರುತಿಸುತ್ತ ಮಾರ್ಗದರ್ಶನ ಮಾಡಿದ ಪರಿಸರವಾದಿ ಮತ್ತು ಆರ್ಕಿಟೆಕ್ಟ್ ಕಾಸರಗೋಡಿನ ಶ್ಯಾಂಕುಮಾರ್ ಪೂರ್ವಂಕರ್ ಆಗಮಿಸಿದ್ದರು.

ಮನೆಯಲ್ಲಿ ಬರ್ಡ್ಸ್ ಇವೆಯಾ? ಯಶಸ್ಸಿಗೆ ಅಡ್ಡಿಗಾಲು ಪಂಜರದಲ್ಲಿರುವ ಪಕ್ಷಿ

ಮಾನವರಿಲ್ಲದೇ ಪಕ್ಷಿಗಳು ಬದುಕಬಹುದು ಆದರೆ ಪಕ್ಷಿಗಳಿಲ್ಲದೇ ನಾವು ಜೀವಿಸಲಾರೆವು, ಅದನ್ನು ನಾವು ಅರ್ಥೈಸಿಕೊಂಡು ಈ ಜೀವ ವೈವಿಧ್ಯತೆಗಳನ್ನು ಸಂರಕ್ಷಿಸಿ ಕಾಪಿಡಬೇಕು ಎಂಬುದಾಗಿ ಅಭಿಪ್ರಾಯವಿತ್ತರು. ಬಹಳ ಅಪರೂಪದ್ದೆನ್ನಲಾಗುವ ಒರಿಯಂಟಲ್ ಟರ್ಟಲ್ ಡವ್, ಬ್ರವ್ನ್ ಬ್ರೀಸ್ಟೆಡ್ ್ಲೈಕ್ಯಾಚರ್, ಬೇ ಬ್ಯಾಕ್ ಶ್ರೈಕ್ ಮೊದಲಾದ ಪಕ್ಷಿಗಳು ಹಾಗೂ ಹಲವಾರು ವಲಸೆ ಹಕ್ಕಿಗಳನ್ನು ಈ ಸಂದರ್ಭದಲ್ಲಿ ಗುರುತಿಸಲಾಯಿತು. 

ಉತ್ತರಕನ್ನಡದಲ್ಲಿ ಹಾರ್ನ್‌ಬಿಲ್ ಪಕ್ಷಿಯ ಮನುಷ್ಯ ಪ್ರೀತಿ, ಹಕ್ಕಿ ಬರೋದನ್ನೇ ಕಾಯುವ ಕುಟುಂಬ

ಪಕ್ಷಿ ವೀಕ್ಷಣಾ ಕಾರ್ಯಕ್ರಮವನ್ನು ಸಂಯೋಜಿಸಿದ ಡಾ. ಜನಾರ್ದನ ಹಾವಂಜೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿವ್ಯಾ, ಪಂಚಾಯತ್ ಅಧ್ಯಕ್ಷರಾದ ಅಜಿತ್ ಗೋಳಿಕಟ್ಟೆ, ಸದಸ್ಯರಾದ ಉದಯ ಕೋಟ್ಯಾನ್, ಮಣಿಪಾಲ ಬರ್ಡರ್ಸ್ ಕ್ಲಬ್‌ನ ತೇಜಸ್ವಿ ಆಚಾರ್ಯ, ಡಾ. ಕೇತಕಿ, ಲಯನ್ಸ್ ಕ್ಲಬ್‌ನ ರಮಾನಂದ ಪ್ರಭು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

click me!