ಕೊಲೆ ಆರೋಪಿ ದರ್ಶನ್‌ಗೆ ವಿಪರೀತ ಬೆನ್ನು ನೋವು: ಎರಡು ದಿನಗಳಿಂದ ನಿದ್ದೆಯಿಲ್ಲದೆ ಪರದಾಟ!

By Girish Goudar  |  First Published Oct 26, 2024, 9:12 AM IST

ಕಳೆದ ಎರಡು ದಿನಗಳಿಂದ ಬೆನ್ನು ನೋವಿನಿಂದಾಗಿ ದರ್ಶನ್ ನಿದ್ದೆಯಿಲ್ಲದೆ ಒದ್ದಾಡುತ್ತಿದ್ದಾನೆ. ಫಿಜಿಯೋಥೇರಪಿ ನಿತ್ಯ ಮಾಡಲಾಗ್ತಿದೆ. ಅದರೂ ನಿರೀಕ್ಷಿತ ಮಟ್ಟದಲ್ಲಿ ನೋವು ಕಡಿಮೆಯಾಗಿಲ್ಲ. ಬೆನ್ನು ನೋವಿನ ಟ್ಯಾಬ್ಲೆಟ್,‌ ಔಷಧಿ ಕೊಟ್ರು ಬೆನ್ನು ನೋವಿನಿಂದ ದರ್ಶನ್‌ಗೆ ನಿದ್ದೆ ಮಾಡಲಾಗ್ತಿಲ್ಲ. 
 


ಬಳ್ಳಾರಿ(ಅ.26):  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ ವಿಪರೀತ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಬೆನ್ನು ನೋವಿನ ಹಿನ್ನಲೆಯಲ್ಲಿ ಮೆಡಿಕಲ್ ಕಾಟ್, ಬೆಡ್, ದಿಂಬು ಕೊಟ್ರು ನೆಮ್ಮದಿಯಾಗಿ ನಿದ್ದೆ ಮಾಡಲಾಗುತ್ತಿಲ್ಲವಂತೆ. 

ಹೌದು, ಕಳೆದ ಎರಡು ದಿನಗಳಿಂದ ಬೆನ್ನು ನೋವಿನಿಂದಾಗಿ ದರ್ಶನ್ ನಿದ್ದೆಯಿಲ್ಲದೆ ಒದ್ದಾಡುತ್ತಿದ್ದಾನೆ. ಫಿಜಿಯೋಥೇರಪಿ ನಿತ್ಯ ಮಾಡಲಾಗ್ತಿದೆ. ಅದರೂ ನಿರೀಕ್ಷಿತ ಮಟ್ಟದಲ್ಲಿ ನೋವು ಕಡಿಮೆಯಾಗಿಲ್ಲ. ಬೆನ್ನು ನೋವಿನ ಟ್ಯಾಬ್ಲೆಟ್,‌ ಔಷಧಿ ಕೊಟ್ರು ಬೆನ್ನು ನೋವಿನಿಂದ ದರ್ಶನ್‌ಗೆ ನಿದ್ದೆ ಮಾಡಲಾಗ್ತಿಲ್ಲ. 

Tap to resize

Latest Videos

undefined

ಜೈಲಲ್ಲಿ ಕೊಲೆ ಆರೋಪಿ ನಟ ದರ್ಶನ್‌ ಬಳಸಿದ ಫೋನ್‌ ಮೂಲ ಪತ್ತೆ!

L5 & S1 ನಲ್ಲಿ ಊತ ಕಾಣಿಸಿಕೊಂಡಿದೆ. ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿದೆ. ವಿಮ್ಸ್ ನ್ಯೂರೋ ವಿಭಾಗದಿಂದ ಬಂದಿರುವ ಸ್ಕ್ಯಾನಿಂಗ್ ವರದಿ ಅನ್ವಯ ಬೆನ್ನು ಮೂಳೆ ಸರ್ಜರಿ ಮಾಡಿಸುವುದು ಅನಿವಾರ್ಯವಾಗಿದೆ ಎಂದು ತಿಳಿದು ಬಂದಿದೆ. 

ಬಳ್ಳಾರಿಯಲ್ಲಿ ಸರ್ಜರಿ ಬೇಡ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿ ಅಂತ ದರ್ಶನ್ ಪಟ್ಟು ಹಿಡಿದಿದ್ದಾನೆ. ನಿನ್ನೆ ಎರಡು ಬ್ಯಾಗ್ ಹಿಡಿದು ನಡೆದು ಹೋಗಲು ಆಗದೆ ದರ್ಶನ್ ಒದ್ದಾಡಿದ್ದಾನೆ. ದರ್ಶನ್ ಸ್ಥಿತಿ ಕಂಡು ಕುಟುಂಬಸ್ಥರು ಮರಗಿದ್ದಾರೆ. ಸರ್ಜರಿಗಾಗಿ ಬೆಂಗಳೂರಿಗೆ ಶಿಫ್ಟ್‌ ಬಗ್ಗೆ ದರ್ಶನ್ ಕೋರ್ಟ್‌ ಮೊರೆ ಹೋಗಲಿದ್ದಾನೆ ಎಂದು ತಿಳಿದು ಬಂದಿದೆ.  

click me!