ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿ ರಾತ್ರಿ ಊಟ ಸೇವಿಸಿದ ಕೊಲೆ ಆರೋಪಿ ನಟ ದರ್ಶನ್..!

ಕೊಲೆ ಆರೋಪಿ ನಟ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ರಾತ್ರಿ ಊಟ ಸೇವಿಸಿದ್ದಾರೆ. ಎರಡು ಚಪಾತಿ-ಪಲ್ಯ, ಅನ್ನ ಸಾಂಬಾರ್, ಮಜ್ಜಿಗೆ ಸೇವಿಸಿದ್ದಾರೆ. ಜೈಲಿನ ನಿಯಮದಂತೆ ದರ್ಶನ್‌ಗೆ 355 ಗ್ರಾಂ ರೈಸ್, 650 ಗ್ರಾಂ ಸಾಂಬಾರ್ ಹಾಗೂ 205 ಮಜ್ಜಿಗೆಯನ್ನ ಜೈಲು ಸಿಬ್ಬಂದಿ ನೀಡಿದ್ದಾರೆ. 

ಬಳ್ಳಾರಿ(ಆ.29): ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ನಟ ದರ್ಶನ್‌ನನ್ನ ಇಂದು(ಗುರುವಾರ) ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಕರೆತರಲಾಗಿದೆ. ಆದ್ರೆ, ಬೆಳಿಗ್ಗೆ ಹಾಗೂ ಮಧ್ಯಾಹ್ನ ಊಟವನ್ನ ನಿರಾಕರಿಸಿದ್ದ ದರ್ಶನ್‌ ರಾತ್ರಿ ಊಟವನ್ನ ಮಾಡಿದ್ದಾರೆ. 

Latest Videos

ಕೊಲೆ ಆರೋಪಿ ನಟ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ರಾತ್ರಿ ಊಟ ಸೇವಿಸಿದ್ದಾರೆ. ಎರಡು ಚಪಾತಿ-ಪಲ್ಯ, ಅನ್ನ ಸಾಂಬಾರ್, ಮಜ್ಜಿಗೆ ಸೇವಿಸಿದ್ದಾರೆ.  ಜೈಲಿನ ನಿಯಮದಂತೆ ದರ್ಶನ್‌ಗೆ 355 ಗ್ರಾಂ ರೈಸ್, 650 ಗ್ರಾಂ ಸಾಂಬಾರ್ ಹಾಗೂ 205 ಮಜ್ಜಿಗೆಯನ್ನ ಜೈಲು ಸಿಬ್ಬಂದಿ ನೀಡಿದ್ದಾರೆ. 

ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್‌, ಆಪ್ತರ ಬಳಿ ಬೇಸರ ಹೊರಹಾಕಿದ ಪತ್ನಿ ವಿಜಯಲಕ್ಷ್ಮೀ..!

ಆರೋಪಿ ನಟ ದರ್ಶನ್ ಸಾಮಾನ್ಯ ಕೈದಿಗಳಂತೆ ಜೈಲೂಟ ಸವಿದಿದ್ದಾರೆ. ಇಂದು ಬೆಳಗ್ಗೆ ಹಾಗೂ ಮಧ್ಯಾಹ್ನ ಊಟವನ್ನ ದರ್ಶನ್ ನಿರಾಕರಿಸಿದ್ದರು. ಆದರೆ ಇದೀಗ ಜೈಲಿನ ನಿಗದಿತ ಸಮಯದಂತೆ 7 ಗಂಟೆಗೆ ರಾತ್ರಿ ಊಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

click me!