ಹೊನ್ನಾಳಿ (ಡಿ.19): ಕೋವಿಡ್‌ನಿಂದ (Covid 19) ಮೃತಪಟ್ಟಕುಟುಂಬಕ್ಕೆ ಕೇಂದ್ರ ಸರ್ಕಾರ 50 ಸಾವಿರ ರು., ರಾಜ್ಯ ಸರ್ಕಾರ (Karnataka Govt) ಒಂದು ಲಕ್ಷ ಪರಿಹಾರ ನೀಡುತ್ತಿದ್ದು, ತಾನೂ ವೈಯಕ್ತಿಕವಾಗಿ ಹತ್ತು ಸಾವಿರ ಪರಿಹಾರ ನೀಡುತ್ತಿರುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ (MP Renukacharya) ಘೋಷಿಸಿದ್ದಾರೆ. ನ್ಯಾಮತಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆ ನಂತರ ಕೋವಿಡ್‌ನಿಂದ (Covid) ಮೃತಪಟ್ಟನಾಲ್ಕು ಕುಟುಂಬಕ್ಕೆ ರಾಜ್ಯ ಸರ್ಕಾರ (Karnataka Govt) ನೀಡುವ ಒಂದು ಲಕ್ಷದ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.
ಕೋವಿಡ್‌ನಿಂದ ಮೃತಪಟ್ಟಸುಮಾರು 20 ಕ್ಕೂ ಹೆಚ್ಚು ಕುಟುಂಬಳಿಗೆ ಈಗಾಗಲೇ ವೈಯಕ್ತಿಕವಾಗಿ ಹತ್ತು ಸಾವಿರ ಧನ ಸಹಾಯ ಮಾಡಿದ್ದು, ಅಧಿವೇಶನ ಮುಗಿದನಂತರ ಉಳಿದ ಕುಟುಂಬಗಳಿಗೆ (Family) ವಿತರಿಸುವುದಾಗಿ ಹೇಳಿದರು.
ಹೊನ್ನಾಳಿ ತಾಲೂಕಿನಲ್ಲಿ ಕೋವಿಡ್‌ನಿಂದ (Covid) ಮೃತಪಟ್ಟ37 ಜನರಿಗೆ ಪರಿಹಾರ ಚೆಕ್‌ಗಳನ್ನು ನೀಡಿದ್ದು, ನ್ಯಾಮತಿ ತಾಲೂಕಿನಲ್ಲಿ 126 ಅರ್ಜಿಗಳು ಬಂದಿವೆ, ಅದರಲ್ಲಿ ನಾಲ್ಕು ಜನರಿಗೆ ಇಂದು ಪರಿಹಾರದ ಚೆಕ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಪರಿಹಾರದ ಚೆಕ್ ನೀಡಲಾಗುವುದು ಎಂದರು.
ನ್ಯಾಮತಿ ಪಪಂ ಆಡಳಿತ ವೈಖರಿ ಬಗ್ಗೆ ಸಾರ್ವಜನಿಕರಿಂದ (Publics) ಸಾಕಷ್ಟುದೂರು ಕೇಳಿ ಬರುತ್ತಿದ್ದು ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ರೇಣುಕಾ, ಉಪತಹಸೀಲ್ದಾರ್ ನಾಗರಾಜ್, ಪಪಂ ಮುಖ್ಯಾಧಿಕಾರಿ ಕೋಟ್ರೇಶ್, ಎಂಜಿನಿಯರ್ ಶಶಿಧರ್, ಜಿಪಂ ಮಾಜಿ ಸದಸ್ಯೆ ಉಮಾ ರಮೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಪಿ.ರವಿಕುಮಾರ್ ಮೊದಲಾದವರಿದ್ದರು.
ಸಾಲ ಮನ್ನಾ : ಕೋರೋನಾ ದಿಂದ ಸಾವನ್ನಪ್ಪಿದ ರೈತರ ಒಂದು ಲಕ್ಷ ರು.ವರೆಗಿನ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇನ್ನೆರಡು ದಿನಗಳಲ್ಲಿ ಅಂತಿಮ ತಿರ್ಮಾನ ಪ್ರಕಟವಾಗಲಿದೆ. ಈಗಾಗಲೇ ಎಲ್ಲಾ ಸಹಕಾರ ಸಂಸ್ಥೆಗಳಿಗೆ ಸಾವನ್ನಪ್ಪಿರುವ ರೈತರ ಮಾಹಿತಿ ಕೊಡಲು ಸೂಚನೆ ನೀಡಲಾಗಿದ್ದು, ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ಮೂಲಕ ಸಾಲಮನ್ನಾ ಯೋಜನೆ ಜಾರಿ ಮಾಡಲಾಗುತ್ತದೆ.
1 ಲಕ್ಷ ರೂ ಸಾಲ ಮನ್ನಾ ಮಾಡಲು ಸರ್ಕಾರದ ತಿರ್ಮಾನ ಸಾಧ್ಯತೆ ಇದ್ದು, ಆರ್ಥಿಕವಾಗಿ ಸಬಲವಾಗಿರುವ ಡಿಸಿಸಿ ಬ್ಯಾಂಕ್ ಗಳ ಮೂಲಕ ಸಾಲ ಮನ್ನಾಪ್ರಕ್ರಿಯೆ ನಡೆಯಲಿದ್ದು, ಡಿಸಿಸಿ ಬ್ಯಾಂಕ್ ಗಳಿಗೆ ಅಪೆಕ್ಸ್ ಬ್ಯಾಂಕ್ ಗಳಿಂದ ಆರ್ಥಿಕ ನೆರವು ದೊರೆಯಲಿದೆ.
ಸಾಲಮನ್ನಾ ಮಾಡಲು ಮುಂದಾಗಿರುವುದನ್ನು ಸ್ಪಷ್ಟಪಡಿಸಿರುವ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಇ ಬಗ್ಗೆ ಎಲ್ಲಾ ಮಾಹಿತಿ ಪಡೆಯಲಾಗುತ್ತಿದ್ದು ಇನ್ನೆರಡು ದಿನಗಳಲ್ಲಿ ತಿರ್ಮಾನವಾಗಲಿದೆ ಎಂದು ಹೇಳಿದ್ದಾರೆ. ಕೋರೋನಾದಿಂದ ಸಾವನ್ನಪ್ಪಿರುವ ರೈತರಿಗೆ ಸಹಾಯ ಮಾಡಬೇಕಾದ ಹೊಣೆಗಾರಿಕೆ ಇದೆ. ಅದಕ್ಕಾಗಿ ಅಪೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಮೂಲಕ ಸಾಲಮನ್ನಾ ಯೋಜನೆ ಜಾರಿಯಾಗಲಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ಸ್ವಾಗತ : ಕೋರೋನಾ ದಿಂದ ಸಾವನ್ನಪ್ಪಿರುವ ರೈತರ ಸಾಲಮನ್ನಾ ಯೋಜನೆ ಜಾರಿ ವಿಚಾರವಾಗಿ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಸಹಕಾರ ಮಹಾಮಂಡಳ ಸ್ವಾಗತಿಸಿದೆ.
ಸಾವಾಗಿರುವ ರೈತರ ಕುಟುಂಬಕ್ಕೆ ಸಹಕಾರ ಕೊಡುವ ಚಿಂತನೆ ಒಳ್ಳೆಯದು. ಕಷ್ಟದಲ್ಲಿ ಇರುವ ರೈತರ ಕುಟುಂಬಕ್ಕೆ ಅನುಕೂಲ ಆಗಲಿದೆ. ನಮ್ಮ ಇಡೀ ಸಹಕಾರ ವಲಯದ ಬೆಂಬಲ ಸರ್ಕಾರಕ್ಕೆ ಇರಲಿದೆ ಎಂದು ಕರ್ನಾಟಕ ಸಹಕಾರ ಮಹಾಮಂಡಳದ ಅಧ್ಯಕ್ಷ ಶಾಸಕ ಜಿ ಟಿ ದೇವೆಗೌಡ ಹೇಳಿದ್ದಾರೆ.