ಹಳ್ಳಿಕಾರ್ ಒಡೆಯ ಎಂದು ಹೆಸರಿಟ್ಟುಕೊಂಡು ಹಳ್ಳಿಕಾರ್ ರೇಸ್ ಮಾಡುವ ವರ್ತೂರ್ ಸಂತೋಷ್ ರೈತನಲ್ಲ. ಬದಲಾಗಿ ಹಳ್ಳಿಕಾರ್ ರೇಸ್ ಹೆಸರಲ್ಲಿ ರೈತರಿಗೆ ವಂಚನೆ ಮಾಡುವುದೇ ಅವರ ಕಾಯಕ ಎಂದು ಹಳ್ಳಿಕಾರ್ ರಾಸುಗಳ ಮಾಲೀಕ ಹಾಗೂ ರೈತ ಹೊಸಕೊಟೆ ಬೀರೇಶ್ ಆರೋಪಿಸಿದ್ದಾರೆ.
ಹೊಸಕೋಟೆ : ಹಳ್ಳಿಕಾರ್ ಒಡೆಯ ಎಂದು ಹೆಸರಿಟ್ಟುಕೊಂಡು ಹಳ್ಳಿಕಾರ್ ರೇಸ್ ಮಾಡುವ ವರ್ತೂರ್ ಸಂತೋಷ್ ರೈತನಲ್ಲ. ಬದಲಾಗಿ ಹಳ್ಳಿಕಾರ್ ರೇಸ್ ಹೆಸರಲ್ಲಿ ರೈತರಿಗೆ ವಂಚನೆ ಮಾಡುವುದೇ ಅವರ ಕಾಯಕ ಎಂದು ಹಳ್ಳಿಕಾರ್ ರಾಸುಗಳ ಮಾಲೀಕ ಹಾಗೂ ರೈತ ಹೊಸಕೊಟೆ ಬೀರೇಶ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರಿಗೂ ವರ್ತೂರ್ ಸಂತೋಷ್‌ಗೂ ಯಾವ ಸಂಬಂಧವೂ ಇಲ್ಲ. ವರ್ತೂರ್ ಸಂತೋಷ್ ಒಬ್ಬ ದಲ್ಲಾಳಿಯಾಗಿದ್ದು, ಹೊಸಕೋಟೆಯಲ್ಲಿ ರೇಸ್ ಮಾಡುವ ವೇಳೆ ಸ್ಥಳೀಯರಿಂದ 15 ಲಕ್ಷಕ್ಕೂ ಅಧಿಕ ಸಹಾಯಧನ ಕೊಡಿಸಿ ನಾನು ವೈಯಕ್ತಿಕವಾಗಿ ನೀಡಿದ್ದೇನೆ. ಆದರೆ ರೇಸ್ ಮುಗಿದ ನಂತರ ಇಲ್ಲಿ ರೇಸ್ ನಡೆದ ಜಾಗ ಸ್ವಚ್ಛತೆ ಮಾಡಿದವರಿಗೆ ಅಲ್ಲದೆ ಸಾಕಷ್ಟು ಜನರಿಗೆ ಹಣ ಕೊಡದೆ ಪಲಾಯನ ಆಗಿದ್ದಾನೆ. ಜೊತೆಗೆ ಅವರಿಂದ ನಾವೆಲ್ಲಾ ಸಹಾಯ ಪಡೆದಿರುವುದಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ದೂರಿದರು.
ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ಜೋಡಿ ಎತ್ತುಗಳಿಗೆ 3 ಸಾವಿರದಂತೆ 400 ಜೋಡಿಗಳ ಎತ್ತುಗಳಿಗೆ 12 ಲಕ್ಷ ಹಾಗೂ ಇತರೆ ಸಂಗ್ರಹಿಸಿದ 18 ಲಕ್ಷ ಸೇರಿ 30 ಲಕ್ಷಕ್ಕೂ ಅಧಿಕ ಹಣ ಸಹಾಯ ಪಡೆದು, ಯಾರೂ ಒಂದು ರೂಪಾಯಿಯೂ ನೀಡಿಲ್ಲ ಎಂದು ಆರೋಪಿತ್ತಿದ್ದಾರೆ. ವರ್ತೂರ್ ಸಂತೋಷ್ ರೇಸ್ ಮಾಡುವ ಉದ್ದೇಶ ಅವರ ವೈಯಕ್ತಿಕ ಲಾಭಕ್ಕಾಗಿ ಹೊರತು ರೈತರಿಗೆ ಅನುಕೂಲವಾಗುವ ಉದ್ದೇಶದಿಂದಲ್ಲ. ರೈತರಿಗೆ ಸಹಾಯ ಮಾಡುವ ಉದ್ದೇಶವಿದ್ದರೆ ಹಸುಗಳ ಪೋಷಣೆಗೆ ಸಹಾಯ ಮಾಡಬೇಕು. ಈಗ ಸ್ಟಾರ್ ಪಟ್ಟ ದೊರೆತಿದೆ ಎಂದು ಅಹಂ ಬಂದಿದೆ. ಹೊಸಕೋಟೆ ಜನರನ್ನು ರೇಸ್ ಹೆಸರಿನಲ್ಲಿ ಮಂಕು ಎರಚಿದ್ದಾಯ್ತು ಈಗ ಮಾಲೂರು ತಾಲೂನ ಜನರಿಗೆ ಮೋಸ ಮಾಡಲು ಮುಂದಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರೇಸ್‌ನಲ್ಲಿ ಸಹಾಯ ಮಾಡಿ ಮೋಸ ಹೋದ ಶಾಂತರಾಜು, ರಿತೇಶ್, ಮಂಜುನಾಥ್ ಇತರರಿದ್ದರು.