ಕ್ವಾರೆಂಟೈನ್ ಎಂದು ಕೂಡಿ ಹಾಕಿದಲ್ಲಿ ನಡೆಯುತ್ತಿದೆಯಾ ಮತಾಂತರ..?

By Kannadaprabha NewsFirst Published May 10, 2020, 1:37 PM IST
Highlights

ಸ್ಥಳೀಯರೆಂದು ಗುಜರಾತಿನಿಂದ ಕರೆದುಕೊಂಡು ಬಂದು ಮಾಲೂರಿನಲ್ಲಿ ಕ್ವಾರಂಟೈನ್‌ ಆದ 44 ಜನರ ಜಾತಕ ಹೊರಬರುತ್ತಿದ್ದು, 4 ಮಂದಿ ಹೊರಗಿನವರೆಂಬ ಅತಂಕಕಾರಿ ಸಂಗತಿ ತಿಳಿದುಬಂದಿದೆ. ಇದಕ್ಕಿಂತ ಮುಖ್ಯವಾಗಿ ಹಿಂದೂ ಒಬ್ಬ ಮುಸ್ಲಿಂ ಹೆಸರಿನಲ್ಲಿ ಕ್ವಾರಂಟೈನ್‌ ಆಗಿದ್ದು ಸಾಕಷ್ಟುಅನುಮಾನ ಮೂಡಿಸಿದೆ.

ಕೋಲಾರ(ಮೇ 10): ಸ್ಥಳೀಯರೆಂದು ಗುಜರಾತಿನಿಂದ ಕರೆದುಕೊಂಡು ಬಂದು ಮಾಲೂರಿನಲ್ಲಿ ಕ್ವಾರಂಟೈನ್‌ ಆದ 44 ಜನರ ಜಾತಕ ಹೊರಬರುತ್ತಿದ್ದು, 4 ಮಂದಿ ಹೊರಗಿನವರೆಂಬ ಅತಂಕಕಾರಿ ಸಂಗತಿ ತಿಳಿದುಬಂದಿದೆ. ಇದಕ್ಕಿಂತ ಮುಖ್ಯವಾಗಿ ಹಿಂದೂ ಒಬ್ಬ ಮುಸ್ಲಿಂ ಹೆಸರಿನಲ್ಲಿ ಕ್ವಾರಂಟೈನ್‌ ಆಗಿದ್ದು ಸಾಕಷ್ಟುಅನುಮಾನ ಮೂಡಿಸಿದೆ.

ಮೇ 3ರಂದು ಮಾಲೂರಿನ ನಿವಾಸಿಗಳೆಂದು ಗುಜರಾತಿನ ಜಮಾತಿಯಿಂದ ಬಂದಿದ್ದ 44 ಜನರನ್ನು ತಾಲೂಕಿನ ರಾಜೇನಹಳ್ಳಿಯಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಈ 44 ಜನರ ಪೂರ್ವಾಪರ ತಿಳಿಯಲು ಜಿಲ್ಲಾಡಳಿತವು ಮುಂದಾದಾಗ ಈ ಅಂತಕಕಾರಿ ವಿಷಯಗಳು ಹೊರಬಂದಿದೆ. ಮೂಲತಃ ಮಾಲೂರಿನವರೆಂದು ಹೇಳಿಕೊಂಡು ಧರ್ಮ ಪ್ರಚಾರಕ್ಕಾಗಿ ಮಾಚ್‌ರ್‍ 8 ರಂದು ಗುಜರಾತ್‌ಗೆ ತೆರಳಿದ್ದ ತಂಡವು ಕೊರೋನಾ ಹಿನ್ನೆಲೆಯಲ್ಲಿ ಅಲ್ಲೇ ಉಳಿದುಕೊಂಡಿದ್ದರು. ಲಾಕ್‌ಡೌನ್‌ ಸಡಿಲಗೊಂಡ ಹಿನ್ನೆಲೆಯಲ್ಲಿ ಗುಜರಾತ್‌ ಸರ್ಕಾರವು ಎಲ್ಲ 44 ಮಂದಿಯನ್ನು ಮೇ 3ರಂದು ಬಸ್‌ನಲ್ಲಿ ಮಾಲೂರಿಗೆ ಕಳುಹಿಸಿಕೊಡಲಾಗಿತ್ತು.

ಕಾವೇರಿ ವನ್ಯಧಾಮದಲ್ಲಿ ತೋಳ ಬಂತು ತೋಳ..!

ಇಲ್ಲಿನ ಜಿಲ್ಲಾಡಳಿತವು ಜಿಲ್ಲೆಯ ಗಡಿಭಾಗವಾದ ಕಟ್ಟಿಗೇನಹಳ್ಳಿ ಗೇಟ್‌ ಬಳಿ ತಪಾಸಣೆ ನಡೆಸಿ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ರಾಜೇನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಈ ವೇಳೆಯಲ್ಲಿ ಬಂದಿರುವ ಎಲ್ಲರೂ ಸ್ಥಳೀಯರೆಂದು ಹೇಳಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯ ಶಾಸಕರು ಸಹ ಪತ್ರಿಕಾಗೋಷ್ಠಿಯಲ್ಲಿ ದೃಢಿಕರಿಸಿದ್ದರು. ಆದರೆ ಇವರ ಪೂರ್ವಪರ ವಿಚಾರಣೆಗೆ ಅವರ ಆಧಾರ್‌ ಕಾರ್ಡ್‌ ಸಂಗ್ರಹಿಸಿದಾಗ ಇವರಲ್ಲಿ ತಮಿಳುನಾಡಿನ ಒಬ್ಬರು, ಉತ್ತರ ಪ್ರದೇಶದ ಇಬ್ಬರು ಹಾಗೂ ಒಬ್ಬ ಬೆಂಗಳೂರಿನ ಪಾದರಾಯಪುರದವರೆಂದು ತಿಳಿದುಬಂದಿದೆ.

ಅದರಲ್ಲೂ ತಮಿಳುನಾಡಿನ ಬೇರಿಕೈನ ಕಾರ್ತಿಕ್‌ಮುನಿಯೇಂದ್ರ ಎಂಬುವನ್ನು ಸಾದಿಕ್‌ ಎಂದು ಹೇಳಿಕೊಂಡಿದ್ದು, ಮತಾಂತರವಾಗಿರುವ ಬಗ್ಗೆ ಶಂಕೆ ಮೂಡಿಸಿದೆ. ಕಾರ್ತಿಕ್‌ನ ಆಧಾರ್‌ ಕಾರ್ಡ್‌ ಪರಿಶೀಲಿಸಿದಾಗ ತಮಿಳುನಾಡಿನ ಬೇರಿಕೈ ನಿವಾಸಿಯಾಗಿದ್ದು, ಹಿಂದೂ ಎಂದು ನಮೂದಿಸಲಾಗಿದೆ. ಇಂತಹ ಗಂಭೀರ ವಿಷಯವನ್ನು ಮಾಲೂರಿಗೆ ಇವರೆಲ್ಲರನ್ನು ಕರೆತರಲು ಆಸಕ್ತಿ ವಹಿಸಿದ್ದ ಪಟ್ಟಣದ ಕುಂಬಾರಪೇಟೆಯ ಸಯ್ಯದ್‌ ಉಸ್ಮಾನ್‌ ಎಲ್ಲ ವಿಷಯವನ್ನು ಮರೆಮಾಚಿರುವುದನ್ನು ಜಿಲ್ಲಾಡಳಿತ ಗಮನಿಸಿದೆ.

ಸೋಂಕು ಭಾರಿ ಹೆಚ್ಚಳ!: ರಾಜ್ಯಕ್ಕೆ ಕಂಟಕವಾಯ್ತಾ ಲಾಕ್‌ಡೌನ್ ಸಡಿಲಿಕೆ?

ಈ ಸಂಬಂಧ ದೂರು ದಾಖಲಿಸುವಂತೆ ಜಿಲ್ಲಾಧಿ​ಕಾರಿ ನೀಡಿರುವ ಆದೇಶದಂತೆ ಸ್ಥಳೀಯ ತಹಸೀಲ್ದಾರ್‌ ಮಂಜುನಾಥ್‌ ಅವರು ಮೇ 5ರಂದು ಸ್ಥಳೀಯ ಠಾಣೆಯಲ್ಲಿ ಮಹಮ್ಮದ್‌ ಹಮ್ಮಾ, ಸಮೀರ್‌, ಸೈಯದ್‌ ರಿಜ್ವಾನ್‌ ಹಾಗೂ ತಮಿಳುನಾಡಿನ ಕಾರ್ತಿಕ್‌ ವಿರುದ್ಧ ದೂರು ಸಲ್ಲಿಸಿದ್ದಾರೆ. ಕಾರ್ತಿಕ್‌ ಮುನಿಯೇಂದ್ರ ಬಿನ್‌ ಮುನಿಯೇಂದ್ರ ಹಿಂದೂ ಧರ್ಮಕ್ಕೆ ಸೇರಿದವನಾಗಿದ್ದು, ಸದರಿ ಇವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ, ಸಾದಿಕ್‌ ಎಂಬ ಹೆಸರು ಬದಲಾಯಿಸಿಕೊಂಡಿದ್ದು, ಮತಾಂತರಗೊಳಿಸಿರ ಬಹುದೆಂಬ ಸಂಶಯ ಬಂದ ಹಿನ್ನೆಲೆಯಲ್ಲಿ ಸಂಬಂ​ಧಿದವರ ವಿರುದ್ಧ ಸಹ ಕಾನೂನು ರೀತ್ಯಾ ಕ್ರಮ ಜರುಗಿಸಲು ತಹಸೀಲ್ದಾರ್‌ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

ವಿಚಾರಣೆ ವೇಳೆಯಲ್ಲಿ ಸಾದಿಕ್‌ ಎಂದು ಅ​ಧಿಕಾರಿಗಳ ದಾರಿ ತಪ್ಪಿಸಿದ್ದ ಕಾರ್ತಿಕ್‌ ನಂತರ ಅ​ಧಿಕಾರಿಗಳು ದಾಖಲೆ ಕೇಳಿದಾಗ ಆರಂಭದಲ್ಲಿ ಹಿಂದೇಟು ಹಾಕಿದ. ಒತ್ತಡ ಹಾಕಿದ ನಂತರ ಆಧಾರ್‌ ಕಾರ್ಡ್‌ ನೋಡಿದಾಗ ಮತಾಂತರಗೊಂಡಿರುವುದು ಬೆಳಕಿಗೆ ಬಂದಿತ್ತು. ತಾಲೂಕಿನ ಮಾಸ್ತಿಗೆ ಸಮೀಪದ ತಮಿಳುನಾಡಿನ ಈ ಕಾರ್ತಿಕ್‌ನನ್ನು ಇಲ್ಲೇ ಮತಾಂತರಗೊಳಿಸಿ ಗುಜರಾತಿಗೆ ಕರೆದುಕೊಂಡು ಹೋಗಲಾಗಿದ್ದೇಯೇ ಹಾಗೂ ಈತನ ಜತೆ ಇನ್ನೂ ಎಷ್ಟುಜನರನ್ನು ಮತಾಂತರಗೊಳಿಸಲಾಗಿದೆಯೇ ಎಂದ ಆನೇಕ ಪ್ರಶ್ನೆಗಳಿಗೆæ ಪೊಲೀಸರ ವಿಚಾರಣೆಯಿಂದ ಹೊರಬರಬೇಕಾಗಿದೆ. ಸದ್ಯಕ್ಕೆ ಕಾರ್ತಿಕ್‌ ಕ್ವಾರಂಟೈನ್‌ನಲ್ಲಿ ಇರುವುದರಿಂದ ಸ್ಥಳೀಯ ಪೊಲೀಸರು ಕ್ವಾರಂಟೈನ್‌ ಅವ​ಪೂರ್ಣಗೊಂಡ ನಂತರ ಸಮಗ್ರ ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

click me!