ಸರ್ಕಾರಿ ನೌಕರರ ಕೋವಿಡ್‌ ಚಿಕಿತ್ಸಾ ವೆಚ್ಚ ಮರುಪಾವತಿ

Published : Apr 22, 2021, 09:13 AM IST
ಸರ್ಕಾರಿ ನೌಕರರ ಕೋವಿಡ್‌ ಚಿಕಿತ್ಸಾ ವೆಚ್ಚ ಮರುಪಾವತಿ

ಸಾರಾಂಶ

 ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಕೋವಿಡ್‌ ಚಿಕಿತ್ಸಾ ವೆಚ್ಚ ಮರುಪಾವತಿಗೆ ನಿರ್ಧರಿಸಿರುವ ಸರ್ಕಾರ, ಈ ಸಂಬಂಧ ಪ್ಯಾಕೇಜ್‌ ದರ ಪ್ರಕಟಿಸಿ ಆದೇಶ ಮಾಡಿದೆ.

ಬೆಂಗಳೂರು (ಏ.22):  ಕೋವಿಡ್‌ ಸೋಂಕಿತ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಕೋವಿಡ್‌ ಚಿಕಿತ್ಸಾ ವೆಚ್ಚ ಮರುಪಾವತಿಗೆ ನಿರ್ಧರಿಸಿರುವ ಸರ್ಕಾರ, ಈ ಸಂಬಂಧ ಪ್ಯಾಕೇಜ್‌ ದರ ಪ್ರಕಟಿಸಿ ಆದೇಶ ಮಾಡಿದೆ.

 ಸಾಮಾನ್ಯ ವಾರ್ಡ್‌ಗೆ ದಿನಕ್ಕೆ 10 ಸಾವಿರ ರು., ಹೆಚ್ಚು ಅವಲಂಬಿತ ಘಟಕಕ್ಕೆ (ಹೈ ಡಿಪೆನ್ಡೆನ್ಸಿ ಯೂನಿಟ್‌) 12 ಸಾವಿರ ರು., ವೆಂಟಿಲೇಟರ್‌ ರಹಿತ ಐಸಿಯು ವಾರ್ಡ್‌ಗೆ 15 ಸಾವಿರ ರು., ವೆಂಟಿಲೇಟರ್‌ ಸಹಿತ ಐಸಿಯು ವಾರ್ಡ್‌ಗೆ 25 ಸಾವಿರ ರು. ನಿಗದಿ ಮಾಡಿದೆ.

3 ಲಕ್ಷ ಸಮೀಪಕ್ಕೆ ದೈನಂದಿನ ಸೋಂಕು, 2023 ಸಾವು! .

 ಈ ಪ್ಯಾಕೇಜ್‌ ದರದಲ್ಲಿ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚ ಮರುಪಾವತಿಸಲು ಸೂಚಿಸಿದೆ. ಒಂದು ವೇಳೆ ಚಿಕಿತ್ಸಾ ದರವು ಸರ್ಕಾರ ನಿಗದಿಪಡಿಸಿರುವ ಪ್ಯಾಕೇಜ್‌ ದರಕ್ಕಿಂತ ಕಡಿಮೆ ಇದ್ದರೆ ಯಾವುದು ಕಡಿಮೆಯೋ ಅದರ ಆಧಾರದಲ್ಲಿ ಚಿಕಿತ್ಸಾ ವೆಚ್ಚ ಮರುಪಾವತಿಸಲು ಸೂಚಿಸಿದೆ.

PREV
click me!

Recommended Stories

Bengaluru; ತಿಂಗಳಿಗೆ 2 ಲಕ್ಷ ಸಂಪಾದನೆ, ಆದರೂ ಸಿಗದ 2BHK ಮನೆ; ಬೆಂಗಳೂರಿನಲ್ಲಿ ಹಳೆಯ ಮನೆಗಳತ್ತ ಜನರ ಒಲವು!
ಪ್ರದೂಷ್ ಮಾಫಿ ಸಾಕ್ಷಿ ತಡೆಯುವ ದರ್ಶನ್ ಪ್ರಯತ್ನಕ್ಕೆ ಹಿನ್ನಡೆ, ಅರ್ಜಿ ವಜಾಗೊಳಿಸಿದ ಕೋರ್ಟ್