ಶ್ರೀರಂಗಪಟ್ಟಣ: ಹಳ್ಳಿಕಾರ್‌ ಎತ್ತು 10.25 ಲಕ್ಷಕ್ಕೆ ಮಾರಾಟ, ಕರ್ನಾಟಕದಲ್ಲೇ ದುಬಾರಿ ಬೆಲೆಗೆ ಸೇಲ್‌..!

By Kannadaprabha NewsFirst Published May 28, 2023, 11:34 PM IST
Highlights

ಈ ಎತ್ತು ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಸೇರಿದಂತೆ ಹಾಸನ, ತರೀಕೆರೆ, ಚಿಕ್ಕಮಗಳೂರು, ತೇಗೂರು ವ್ಯಾಪ್ತಿಯಲ್ಲಿ ನಡೆದಿದ್ದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸೇರಿದಂತೆ ಹಲವು ಬಹುಮಾನಗಳನ್ನು ಗೆದ್ದಿತ್ತು. ಈ ಎತ್ತಿಗೆ ಗಾಳಿ ವೇಗದಲ್ಲಿ ನುಗ್ಗುವ, ಬ್ರಾಂಡ್‌ ಅಣ್ಣಪ್ಪ ಎಂದು ವಿನು ಹೆಸರು ಇಟ್ಟಿದ್ದರು .

ಶ್ರೀರಂಗಪಟ್ಟಣ(ಮೇ.28): ತಾಲೂಕಿನ ಪಾಲಹಳ್ಳಿಯ ವಿನು ಅವರ ಹಳ್ಳಿಕಾರ್‌ ತಳಿಯ ಒಂಟಿ ಎತ್ತು ದಾಖಲೆಯ 10.25 ಲಕ್ಷ ರು.ಗೆ ಮಾರಾಟವಾಗಿದೆ. ಚಿಕ್ಕಮಗಳೂರು ತಾಲೂಕು ತೇಗೂರಿನ ಮಂಜಣ್ಣ ಈ ಎತ್ತನ್ನು ಖರೀದಿಸಿದ್ದಾರೆ. ಇದು ರಾಜ್ಯದಲ್ಲೇ ದುಬಾರಿ ಬೆಲೆಗೆ ಮಾರಾಟವಾಗಿದೆ ಎಂದು ಮಾಲೀಕರಾದ ವಿನು ತಿಳಿಸಿದ್ದಾರೆ.

ಈ ಎತ್ತು ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಸೇರಿದಂತೆ ಹಾಸನ, ತರೀಕೆರೆ, ಚಿಕ್ಕಮಗಳೂರು, ತೇಗೂರು ವ್ಯಾಪ್ತಿಯಲ್ಲಿ ನಡೆದಿದ್ದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸೇರಿದಂತೆ ಹಲವು ಬಹುಮಾನಗಳನ್ನು ಗೆದ್ದಿತ್ತು. ಈ ಎತ್ತಿಗೆ ಗಾಳಿ ವೇಗದಲ್ಲಿ ನುಗ್ಗುವ, ಬ್ರಾಂಡ್‌ ಅಣ್ಣಪ್ಪ ಎಂದು ವಿನು ಹೆಸರು ಇಟ್ಟಿದ್ದರು .

ಮಂಡ್ಯ: ಒಂದೇ ಗಿಡದಲ್ಲಿ ಎರಡು ಬಣ್ಣದ ದಾಸವಾಳ ಹೂವು

ವಿನು ಅವರು ಒಂದೂವರೆ ವರ್ಷದ ಹಿಂದೆ ಗಗನ್‌ ಎಂಬ ಹೆಸರಿನ ಮತ್ತೊಂದು ಎತ್ತನ್ನು 7.68 ಲಕ್ಷ ರು.ಗೆ ಮಾರಾಟ ಮಾಡಿದ್ದರು. ಅದನ್ನೂ ಕೂಡ ತೇಗೂರಿನ ಮಂಜಣ್ಣ ಅವರೇ ಖರೀದಿಸಿದ್ದರು. ಎತ್ತಿನಗಾಡಿ ಓಟದ ಸ್ಪರ್ಧೆಗಾಗಿ ಮತ್ತೊಂದು ಎತ್ತನ್ನು ಸಾಕಿದ್ದೇನೆ. ಚಿತ್ರನಟ ದರ್ಶನ್‌ ಎತ್ತನ್ನು ಖರೀದಿಗೆ ಕೇಳಿದ್ದರು. ಆದರೆ, ಅದನ್ನು ಮಾರಾಟ ಮಾಡ ಲಾಗುವುದು ಎಂದು ವಿನು ತಿಳಿಸಿದ್ದಾರೆ.

click me!