ಬಿಬಿಎಂಪಿ ಮೇಯರ್‌ ಅಧಿಕಾರ ಅವಧಿ 2.5 ವರ್ಷಕ್ಕೆ ಹೆಚ್ಚಿಸಲು ಶಿಫಾರಸು

By Kannadaprabha NewsFirst Published Dec 9, 2020, 7:10 AM IST
Highlights

ಬಿಬಿಎಂಪಿಗೆ ಹೊಸ ಕಾಯ್ದೆ ಸದನ ಸಮಿತಿ ವರದಿ| ಸ್ಥಾಯಿ ಸಮಿತಿ ಸದಸ್ಯರ ಸಂಖ್ಯೆ 15ಕ್ಕೆ ಹೆಚ್ಚಿಸಿ| ಸರ್ಕಾರದ ಕಾರ್ಯದರ್ಶಿ ದರ್ಜೆಯ ಅಧಿಕಾರಿಯನ್ನು ಮುಖ್ಯ ಆಯುಕ್ತರನ್ನಾಗಿ ನೇಮಿಸಲು ಪ್ರಸ್ತಾಪ| ಶಾಸಕ ಎಸ್‌.ರಘು ನೇತೃತ್ವದ ಜಂಟಿ ಸಮಿತಿ ವರದಿ| ಬಿಬಿಎಂಪಿಗೆ ಹೊಸ ಕಾಯ್ದೆ ಸದನ ಸಮಿತಿ ವರದಿ| ಸ್ಥಾಯಿ ಸಮಿತಿ ಸದಸ್ಯರ ಸಂಖ್ಯೆ 15ಕ್ಕೆ ಹೆಚ್ಚಿಸಿ| ಸರ್ಕಾರದ ಕಾರ್ಯದರ್ಶಿ ದರ್ಜೆಯ ಅಧಿಕಾರಿಯನ್ನು ಮುಖ್ಯ ಆಯುಕ್ತರನ್ನಾಗಿ ನೇಮಿಸಲು ಪ್ರಸ್ತಾಪ| ಶಾಸಕ ಎಸ್‌.ರಘು ನೇತೃತ್ವದ ಜಂಟಿ ಸಮಿತಿ ವರದಿ| 

ಬೆಂಗಳೂರು(ಡಿ.09): ಮೇಯರ್‌ ಅಧಿಕಾರ ಅವಧಿ 30 ತಿಂಗಳು ಇರಬೇಕು, ಸರ್ಕಾರದ ಕಾರ್ಯದರ್ಶಿ ದರ್ಜೆಯ ಅಧಿಕಾರಿಯನ್ನು ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಬೇಕು ಹಾಗೂ ಸ್ಥಾಯಿ ಸಮಿತಿಗಳ ಸದಸ್ಯರ ಸಂಖ್ಯೆಯನ್ನು 12ರಿಂದ 15ಕ್ಕೆ ಹೆಚ್ಚಿಸಬೇಕೆಂದು ಬಿಬಿಎಂಪಿಗೆ ಪ್ರತ್ಯೇಕ ಹೊಸ ಕಾಯ್ದೆ ರಚನೆ ಕುರಿತು ರಚಿಸಲಾಗಿದ್ದ ಜಂಟಿ ಸದನ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ. ಶಾಸಕ ಎಸ್‌.ರಘು ಅವರ ನೇತೃತ್ವದ 20 ಸದಸ್ಯರನ್ನು ಒಳಗೊಂಡ ಜಂಟಿ ಸದನ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ವರದಿಯಲ್ಲಿ ಪ್ರಸ್ತುತ ಬಿಬಿಎಂಪಿಯ ಮೇಯರ್‌ ಅಧಿಕಾರ ಅವಧಿಯನ್ನು 12 ತಿಂಗಳಿಂದ 30 ತಿಂಗಳಿಗೆ ಹೆಚ್ಚಳ ಮಾಡುವುದು, ವಾರ್ಡ್‌ ಸಂಖ್ಯೆ243ಕ್ಕೆ ಏರಿಕೆ, ಸ್ಥಾಯಿ ಸಮಿತಿ ಸದಸ್ಯರ ಸಂಖ್ಯೆಯನ್ನು 15ಕ್ಕೆ ಹೆಚ್ಚಳ ಮಾಡುವುದು, ಪ್ರತಿ ವಲಯಗಳಿಗೆ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚನೆಗೆ ಅವಕಾಶ ನೀಡಿದ್ದು, ವಲಯ ಮಟ್ಟದಲ್ಲಿ ಒಬ್ಬ ಪಾಲಿಕೆ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಲು ವರದಿಯಲ್ಲಿ ಅವಕಾಶ ನೀಡಲಾಗಿದೆ.

ನಕಲಿ ಎಸ್‌ಬಿಐ ಶಾಖೆ ಆಯ್ತು..ಬೆಂಗಳೂರಿನಲ್ಲಿ ನಕಲಿ ಬಿಡಿಎ ಕಚೇರಿ!

ಇನ್ನು ಈಗಿನ ಮಾದರಿಯಂತೆ ಸರ್ಕಾರದ ಕಾರ್ಯದರ್ಶಿ ದರ್ಜೆಯ ಅಧಿಕಾರಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತರನ್ನಾಗಿ ನೇಮಿಸುವುದು ಜತೆಗೆ, ಪ್ರತಿ ವಲಯಕ್ಕೂ ವಿಶೇಷ ಆಯುಕ್ತರು ಕಾರ್ಯನಿರ್ವಹಿಸಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜಂಟಿ ಸದನ ಸಮಿತಿ ಸಲ್ಲಿಕೆ ಮಾಡಿರುವ ವರದಿಯನ್ನು ಕಾನೂನು ಸಚಿವರ ನೇತೃತ್ವದ ಪರಿಷ್ಕರಣಾ ಸಮಿತಿಯು ಪರಿಶೀಲನೆ ನಡೆಸಲಿದೆ. ಬಳಿಕ ರಾಜ್ಯ ಸರ್ಕಾರ ಉಭಯ ಸದನಗಳಿಗೆ ಮಂಡಿಸಿ ಅನುಮೋದನೆ ಪಡೆಯಬೇಕಾಗುತ್ತದೆ.
 

click me!