
ಆನೇಕಲ್ (ಫೆ.28): ಜನನಿಬಿಡ ರಸ್ತೆಯಲ್ಲಿ ಲವರ್‌ಅನ್ನು ರಾಯಲ್ ಎನ್‌ಫೀಲ್ಡ್ ಬೈಕ್‌ನ ಇಂಧನ ಟ್ಯಾಂಕ್ ಮೇಲೆ ಕೂರಿಸಿಕೊಂಡು ಪೋಲಿ ರೈಡ್ ಮಾಡಿದ್ದ ಲವರ್ಸ್ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಜಾಲಿ ಬೈಕ್ ರೈಡ್ ಮಾಡಿದ್ದ ಲವರ್ ಬಾಯ್‌ನನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸರ್ಜಾಪುರ ಪೊಲೀಸರಿಂದ ಬೈಕ್ ಸವಾರನ ಬಂಧನವಾಗಿದೆ. ಸೋಮಪುರದಲ್ಲಿರುವ ಕ್ರಿಸ್ಟಾಲ್ ಅಪಾರ್ಟ್ ಮೆಂಟ್ ತಿರುವಿನ ಬಳಿ ಇಬ್ಬರೂ ಜಾಲಿ ರೈಡ್ ಮಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬೆಂಗಳೂರು- ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಪ್ರೇಮಿಗಳು ಹುಚ್ಚಾಟ ನಡೆಸಿ ರಸ್ತೆ ಸುರಕ್ಷತೆಗೆ ಅಪಾಯ ಒಡ್ಡಿದ್ದರು. ಸಿನಿಮಾ ಸ್ಟೈಲ್ ನಲ್ಲಿ ಯುವಕ-ಯುವತಿ ಬೈಕ್ ರೈಡ್ ಮಾಡಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಕ್ರಮ ತೆಗೆದುಕೊಂಡ ಪೊಲೀಸರು ಲವರ್‌ಬಾಯ್‌ನ ಬಂಧಿಸಿದ್ದಾರೆ.
ಬೈಕ್ ನಲ್ಲಿ ರೊಮ್ಯಾನ್ಸ್ ಮಾಡುತ್ತ ಜಾಲಿ ರೈಡ್ ಮಾಡಿದ್ದ ಇಬ್ಬರೂ ಪ್ರೇಮಿಗಳ ಮೇಲೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಇದರ ಬೆನ್ನಲ್ಲಿಯೇ ಬೈಕ್ ಸವಾರನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 25 ವರ್ಷದ ಅಚ್ಯುತ್ ಕುಮಾರ್ ಬಂಧಿತ ಬೈಕ್ ಸವಾರ. ಚೆನೈನ ಮಾಸಿಲ್ಲ ಮಣಿ ಸ್ಟ್ರೀಟ್ ದೇವಿ ನಗರದ ಆಮ್ಬತುರು ನಿವಾಸಿ ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಬೆಳ್ಳಂದೂರು ಬಳಿಯ ಐಯೋಪೆಕ್ಸ್ (iopex) ಕಂಪನಿಯ ಉದ್ಯೋಗಿಯಾಗಿದ್ದಾನೆ.
ಬೆಳ್ಳಂದೂರಿನ ನೀಲಕಂಠೇಶ್ವರ ಪಿಜಿಯಲ್ಲಿ ಅಚ್ಯುತ್ ಕುಮಾರ್ ವಾಸವಿದ್ದ. ಘಟನೆ ನಡೆಯುವ ದಿನ ತಮಿಳುನಾಡಿನ ನಂಬರ್ ಪ್ಲೇಟ್ ಇದ್ದ ಬುಲೆಟ್ ಬೈಕ್‌ನಲ್ಲಿ ಪ್ರೇಯಸಿಯನ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಉಲ್ಟಾ ಕೂರಿಸಿಕೊಂಡು ಬೈಕ್ ರೈಡ್ ಮಾಡಿದ್ದ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಸರ್ಜಾಪುರ ಪೊಲೀಸರಿಂದ ಬೈಕ್ ಸವಾರ ಅಚ್ಚುತ್ ಕುಮಾರ್ ಬಂಧನ ಮಾಡಲಾಗಿದ್ದು, ಬಂಧಿಸಿ ನೋಟಿಸ್ ಕೊಟ್ಟು ಸರ್ಜಾಪುರ ಪೊಲೀಸರು ಕಳುಹಿಸಿದ್ದಾರೆ.
ಹೇ ಪ್ರಭು ಏನಿದು? ಒಂದು ಆಟೋದಲ್ಲಿ 19 ಮಂದಿ, ವಿಡಿಯೋ ನೋಡಿ ಪೊಲೀಸರೇ ಶಾಕ್
'ಅಜಾಗರೂಕ ಬೈಕ್ ಸ್ಟಂಟ್ ಪ್ರೀತಿಯ ಪ್ರದರ್ಶನವಲ್ಲ - ಅದು ಕಾನೂನಿನ ಉಲ್ಲಂಘನೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಬೆದರಿಕೆ. ಸರ್ಜಾಪುರ ಪೊಲೀಸರು ಅಪಾಯಕಾರಿ ಸವಾರಿಗಾಗಿ ಟೆಕ್ಕಿ ಮತ್ತು ಅವರ ಪಾರ್ಟ್‌ನರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಬೆಂಗಳೂರು ಜಿಲ್ಲಾ ಪೊಲೀಸ್ ಎಸ್ ಅಕೌಂಟ್‌ನಿಂದ ಟ್ವೀಟ್ ಮಾಡಲಾಗಿದೆ.