
ಚಿಕ್ಕಮಗಳೂರು (ಫೆ.28): ರವಿಚಂದ್ರನ್ ನಟನೆಯ ಕನಸುಗಾರ ಸಿನಿಮಾ ನೋಡಿರಬಹುದು. ಸಿನಿಮಾದ ಆರಂಭದಲ್ಲೇ ಬರುವ ಸೀನ್. ಕಳ್ಳತನವನ್ನೇ ಕಾಯಕ ಮಾಡಿಕೊಂಡಿರೋ ರವಿಚಂದ್ರನ್ ಹಾಗೂ ಮಂಡ್ಯ ರಮೇಶ್ ಹಣ ಕದ್ದು ದೇವಸ್ಥಾನಕ್ಕೆ ಬರುತ್ತಾರೆ. ಅದರ ಉದ್ದೇಶ ಪಾಪ ತೊಳೆದುಕೊಳ್ಳೋದು. ಮಂಡ್ಯ ರಮೇಶ್ ನೆಲದ ಮೇಲೆ ಸಣ್ಣ ವೃತ್ತ ಬರೆದು, ಕದ್ದು ತಂದಿದ್ದ ಕೊಡದಲ್ಲಿದ್ದ ಚಿಲ್ಲರೆ ಕಾಸ್‌ಅನ್ನು ಮೇಲೆ ಎಸೆಯುತ್ತಾರೆ. ಆ ವೃತ್ತದಲ್ಲಿ ಎಷ್ಟು ಹಣ ಬೀಳುತ್ತೋ ಆ ಹಣ ನಿನಗೆ ಎಂದು ದೇವರಿಗೆ ಆಮಿಷ ನೀಡುತ್ತಾರೆ. ಕೊನೆಗೆ ವೃತ್ತದಲ್ಲಿ 1 ರೂಪಾಯಿ ಬೀಳುತ್ತದೆ. ಅದನ್ನ ಹುಂಡಿಗೆ ಹಾಕುತ್ತಾರೆ. ಆದರೆ, ರವಿಚಂದ್ರನ್ ಪ್ರಳಯಾಂತಕ. ಕೊಡದಲ್ಲಿದ್ದ ಹಣವನ್ನೆಲ್ಲಾ ಮೇಲೆ ಎಸೆದು, ದೇವರೆ ನಿನಗೆ ಎಷ್ಟು ಬೇಕೋ ಅಷ್ಟು ಹಣ ತೆಗೆದುಕೋ ಉಳಿದದ್ದನ್ನು ನಾನು ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ. ದೇವರೊಂದಿಗೆ ಬ್ಯುಸಿನೆಸ್ ವ್ಯವಹಾರ ಮಾಡುವ ಅತ್ಯಂತ ಸ್ಮರಣೀಯ ಸಿನಿಮಾ ಸೀನ್ ಇದು. ಈಗ ಚಿಕ್ಕಮಗಳೂರಿನಲ್ಲಿ ಇದೇ ಮಾದರಿಯ ಕೊಂಚ ಭಿನ್ನ ಭಕ್ತ ಕಾಣಸಿಕ್ಕಿದ್ದಾನೆ. ದೇವರೊಂದಿಗೆ ದೊಡ್ಡ ಡೀಲ್ ಮಾಡುವ ಪತ್ರವನ್ನು ಹುಂಡಿಗೆ ಹಾಕಿ ಸುದ್ದಿಯಾಗಿದ್ದಾನೆ.
ದೇವಸ್ಥಾನಕ್ಕೆ ಹೋದಾಗ ದೇವರ ಬಳಿ ಎಲ್ಲವನ್ನೂ ಕೇಳುತ್ತಾರೆ. ಹಣ ಕೊಡು, ಆಸ್ತಿ-ಅಂತಸ್ತು ಕೊಡು. ಮಾನವ ಮಗಳು ನನ್ನ ಇಷ್ಟಪಡುವಂತೆ ಮಾಡು, ಪರೀಕ್ಷೆ ಪಾಸ್ ಮಾಡು, ಸಾಲ ತೀರಿಸು ಅಂತೆಲ್ಲಾ ಬೇಡಿದ್ದಾಗಿತ್ತು. ಈಗ ದೇವರಿಂದಲೇ ಸಾಲ ಕೇಳುವ ಭಕ್ತ ಕಾಣಸಿಕ್ಕಿದ್ದಾನೆ. ಇಲ್ಲಿಯವರೆಗೂ ಇದೊಂದು ಘಟನೆ ನಡೆದಿರಲಿಲ್ಲ. ಈಗ ಅದೂ ಆಗಿ ಹೋಗಿದೆ.
ಚಿಕ್ಕಮಗಳೂರಿನ ಭಕ್ತನೊಬ್ಬ ದೇವರಿಗೆ ದುಡ್ಡು ಕೇಳಿದ ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ. ಅದೇನು ಒಂದೆರಡು ಅಥವಾ ಐದು-10 ಲಕ್ಷ ರೂಪಾಯಿ ಅಲ್ಲ. ಬರೋಬ್ಬರಿ 2 ಕೋಟಿ ಹಣ ಕೇಳಿ ಕಲಾಕಾರ್ ಭಕ್ತನೊಬ್ಬ ಸುದ್ದಿಯಾಗಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಮಾರ್ಕಂಡೇಶ್ವರ ಸ್ವಾಮಿಗೆ ಹಣದ ಬೇಡಿಕೆ ಇಟ್ಟಿರುವುದು ವೈರಲ್ ಆಗಿದೆ.
ಶಿವರಾತ್ರಿಯ ದಿನ ದೇಗುಲಕ್ಕೆ ಹೋಗಿ ಕಾಣಿಕೆ ಹುಂಡಿಗೆ ಭಕ್ತ ಪತ್ರ ಹಾಕಿ ಬಂದಿದ್ದಾನೆ. 'ಶಿವಾ ನನಗೆ ಎರಡು ಕೋಟಿ ಬೇಕು..' ಎಂಬ ಚೀಟಿಯನ್ನ ಹುಂಡಿಗೆ ಹಾಕಿ ಬೇಡಿಕೆ ಇಟ್ಟಿದ್ದಾನೆ.
Chikkamagaluru: ಯೋಗಿ ಆದಿತ್ಯನಾಥ್ ಮಾಡಿರೋ ಕಾನೂನು ಎಲ್ಲಾ ಕಡೆ ಆಗಬೇಕು ಎಂದು ಪಾದಯಾತ್ರೆ ಹೊರಟ 103 ವರ್ಷದ ಅಜ್ಜಿ!
ಹುಂಡಿ ಹಣ ಹಾಗೂ ಎಣಿಕೆ ವೇಳೆ ದೇವರ ಬಳಿ ಹಣ ಕೇಳಿದವನ ಪತ್ರ ಮಾತ್ರ ಪತ್ತೆಯಾಗಿದೆ. ಭದ್ರಾ ನದಿ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಮಾರ್ಕಂಡೇಶ್ವರ ದೇಗುಲದಲ್ಲಿ ಈ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಗ್ರಾಮದ ಮಾರ್ಕಂಡೇಶ್ವರ ದೇಗುಲದಲ್ಲಿ ಈ ಪತ್ರ ಸಿಕ್ಕಿದೆ.
ಇದೇನು ರೈತ ವಿರೋಧಿ ಸರ್ಕಾರವೇ? ಚಿಕ್ಕಮಗಳೂರು ರೈತನಿಗೆ 3 ಲಕ್ಷ ರೂ. ವಿದ್ಯುತ್ ಬಿಲ್ ಕೊಟ್ಟ ಮೆಸ್ಕಾಂ!