ನೀರು ನಿಲ್ಲಿಸಿದರೆ ನಿಮ್ಮನ್ನು ಜೈಲಿಗೆ ಹಾಕುತ್ತಾರಾ, ನಾವೂ ಕೂಡ ನಿಮ್ಮ ಜೊತೆ ಜೈಲಿಗೆ ಬರುತ್ತೇವೆ. 5 ವರ್ಷ ಪೂರ್ತಿ ನಿಮ್ಮ ಜೊತೆಗಿರುತ್ತೇವೆ. ಮೊದಲು ನೀರು ನಿಲ್ಲಿಸಿ ರೈತರನ್ನು ಉಳಿಸಿ, ರೈತರು ಉಳಿದರೆ ಮಾತ್ರ ಅನ್ನ ಸಿಗಲು ಸಾಧ್ಯ ಎಂದು ಶಾಸಕ ಜಿ.ಟಿ.ದೇವೇಗೌಡ ಎಚ್ಚರಿಕೆ ನೀಡಿದರು.
ಮಂಡ್ಯ (ಸೆ.03): ನೀರು ನಿಲ್ಲಿಸಿದರೆ ನಿಮ್ಮನ್ನು ಜೈಲಿಗೆ ಹಾಕುತ್ತಾರಾ, ನಾವೂ ಕೂಡ ನಿಮ್ಮ ಜೊತೆ ಜೈಲಿಗೆ ಬರುತ್ತೇವೆ. 5 ವರ್ಷ ಪೂರ್ತಿ ನಿಮ್ಮ ಜೊತೆಗಿರುತ್ತೇವೆ. ಮೊದಲು ನೀರು ನಿಲ್ಲಿಸಿ ರೈತರನ್ನು ಉಳಿಸಿ, ರೈತರು ಉಳಿದರೆ ಮಾತ್ರ ಅನ್ನ ಸಿಗಲು ಸಾಧ್ಯ ಎಂದು ಶಾಸಕ ಜಿ.ಟಿ.ದೇವೇಗೌಡ ಎಚ್ಚರಿಕೆ ನೀಡಿದರು. ಈ ಸರ್ಕಾರಕ್ಕೆ ರೈತರನ್ನು ಉಳಿಸುವುದಕ್ಕಿಂತ ಗ್ಯಾರಂಟಿ ಯೋಜನೆ ಜಾರಿ ಮಾಡುವುದೇ ಮುಖ್ಯವಾಗಿದೆ. ಗ್ಯಾರಂಟಿ ಯೋಜನೆಯಲ್ಲಿ 2 ಸಾವಿರ ಕೊಟ್ಟು, ಲಿಕ್ಕರ್ ದರ ಹೆಚ್ಚಳ ಮಾಡಿದ್ದೀರಿ, ನಿತ್ಯ 20 ರು. ಹೆಚ್ಚು ಹಣ ಕೊಟ್ಟು ಲಿಕ್ಕರ್ ಖರೀದಿಸುತ್ತಾರೆ.
ತಿಂಗಳಿಗೆ ಮೂರು ಸಾವಿರ ಆಗುತ್ತೆ. ನೀವು ಕೊಡುತ್ತಿರುವುದು ಮಹಿಳೆಯರಿಗೆ 2 ಸಾವಿರ. ಹೆಚ್ಚುವರಿ ಹಣ ಅವರ ಕುಟುಂಬಕ್ಕೆ ಹೊರೆಯಾಗುವುದಿಲ್ಲವೇ ಎಂದು ಗ್ಯಾರಂಟಿ ಯೋಜನೆ ಬಗ್ಗೆ ಟೀಕಿಸಿದರು. ಬೆಂಗಳೂರು ನಗರಕ್ಕೆ 10 ಟಿಎಂಸಿಗೂ ಹೆಚ್ಚು ನೀರು ಬೇಕು. ಈಗಾಗಲೇ ಕಟ್ಟೆಯಲ್ಲಿ ನೀರಿನ ಸಂಗ್ರಹ ಕುಸಿಯಲಾರಂಭಿಸಿದೆ. ಇನ್ನೂ ಏಳೆಂಟು ತಿಂಗಳು ನೀರಿನ ಅಗತ್ಯತೆ ಇದೆ. ಕಾವೇರಿ ಹೋರಾಟದಲ್ಲಿ ಬೆಂಗಳೂರು ಜನರೂ ಪಾಲ್ಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ಅವರಿಗೆ ಕುಡಿಯಲು ನೀರೂ ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾವೇರಿ ಕಿಚ್ಚಿಗೆ ಜೆಡಿಎಸ್ ಸಾಥ್: ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ
ಸಂಕಷ್ಟ ಸೂತ್ರ ರಚನೆಯಾಗಲಿ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರ ರಚನೆಯಾಗಲೇಬೇಕು ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಬಲವಾಗಿ ಪ್ರತಿಪಾದಿಸಿದರು. ಮಳೆಯಿಲ್ಲದ ಸಮಯದಲ್ಲಿ ಯಾವ ಯಾವ ರಾಜ್ಯಕ್ಕೆ ಎಷ್ಟೆಷ್ಟು ನೀರು ಹಂಚಿಕೆಯಾಗಬೇಕೆಂಬ ಬಗ್ಗೆ ನಿರ್ಧಾರವಾಗಬೇಕು. ಆ ನೀರು ಕೂಡ ಸಮಾನವಾಗಿ ಹಂಚಿಕೆಯಾಗಬೇಕು. ಉತ್ತಮ ಮಳೆಯಾದಾಗ ಹರಿದುಹೋಗುವ ನೀರನ್ನು ಯಾರಿಂದಲೂ ತಡೆಯಲಾಗದು. ಮಳೆ ಬೀಳದಿದ್ದಾಗ ಸಂಕಷ್ಟ ಸೂತ್ರದಡಿಯಲ್ಲೇ ನೀರು ಹಂಚಿಕೆಯಾಗಬೇಕು ಎಂದು ಒತ್ತಾಯಿಸಿದರು.
ಕಾವೇರಿ ಹೋರಾಟಕ್ಕೆ ಧುಮುಕದ ಕನ್ನಡ ಚಿತ್ರರಂಗ: ರೈತರ ಆಕ್ರೋಶ
ನಮ್ಮ ನೀರು-ನಮ್ಮ ಹಕ್ಕು ಎಂಬ ಮಾತಿನಂತೆ ನಡೆದು ತಮಿಳುನಾಡಿನಿಂದ 14.71 ಟಿಎಂಸಿ ಅಡಿ ನೀರನ್ನು ಉಳಿಸಿಕೊಟ್ಟವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಂದು ಬಣ್ಣಿಸಿದರು. ನಮ್ಮ ನೀರು ನಮ್ಮ ಹಕ್ಕು ಹೆಸರಿನಲ್ಲಿ ಮೇಕೆದಾಟು ಪಾದಯಾತ್ರೆ ಕೈಗೊಂಡ ಕಾಂಗ್ರೆಸ್, ತಮಿಳುನಾಡಿಗೆ ನೀರು ಬಿಟ್ಟು ರಾಜ್ಯದ ರೈತರು ಮತ್ತು ಜನರಿಗೆ ದ್ರೋಹವೆಸಗಿದೆ ಎಂದು ಕಿಡಿಕಾರಿದರು. ದೇವೇಗೌಡರು 1962ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ 63ರಲ್ಲಿ ನೀರಿನ ವಿಚಾರದಲ್ಲಿ ಖಾಸಗಿ ನಿರ್ಣಯ ಕೈಗೊಂಡರು. 1985ರಲ್ಲಿ ಇಗ್ಗಲೂರು ಬ್ಯಾರೇಜ್ ನಿರ್ಮಿಸಿ ನೀರಾವರಿಗೆ ಒತ್ತು ನೀಡಿದರು. ತಮಿಳುನಾಡಿನ ಡಿಎಂಕೆ ಬೆಂಬಲವಿದ್ದರೂ ಪ್ರಧಾನಿಯಾಗಿದ್ದ ವೇಳೆ ಬೆಂಗಳೂರಿನ ಜನರ ಕುಡಿಯುವ ಆದ್ಯತೆಗೆ 10 ಟಿಎಂಸಿ ನೀರು ಕೊಟ್ಟರು. ಇದು ಜನ-ರೈತಪರ ನಿಲುವು ಎಂದರು.