ಕಲಬುರಗಿ: ದಂಡಗುಂಡನಲ್ಲಿ ಚಿರತೆ ಪ್ರತ್ಯಕ್ಷ, ಹೆಚ್ಚಾದ ಆತಂಕ

Published : Sep 03, 2023, 12:26 PM IST
ಕಲಬುರಗಿ: ದಂಡಗುಂಡನಲ್ಲಿ ಚಿರತೆ ಪ್ರತ್ಯಕ್ಷ, ಹೆಚ್ಚಾದ ಆತಂಕ

ಸಾರಾಂಶ

ಯಾದಗಿರಿಯಿಂದ ದಂಡಗುಂಡಕ್ಕೆ ಬರುವಾಗ ಚಿರತೆ ಪ್ರತ್ಯಕ್ಷವಾಗಿದೆ. ವಿದ್ಯಾನಂದ ಹಿರೇಮಠ ಅವರು ಕಾರಿನಲ್ಲಿ ತಮ್ಮ ಕುಟುಂಬದ ಜೊತೆ ತೆರಳುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಚಿರತೆ ಕಂಡ ವಿದ್ಯಾನಂದ ಅವರ ಕುಟುಂಬದವರು ಗಾಬರಿಯಾಗಿದ್ದಾರೆ. 

ಕಲಬುರಗಿ(ಸೆ.03):  ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ಯಾಗಾಪೂರ ಗುಡ್ಡದಲ್ಲಿ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡಿದೆ. 

ಯಾದಗಿರಿಯಿಂದ ದಂಡಗುಂಡಕ್ಕೆ ಬರುವಾಗ ಚಿರತೆ ಪ್ರತ್ಯಕ್ಷವಾಗಿದೆ. ವಿದ್ಯಾನಂದ ಹಿರೇಮಠ ಅವರು ಕಾರಿನಲ್ಲಿ ತಮ್ಮ ಕುಟುಂಬದ ಜೊತೆ ತೆರಳುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಚಿರತೆ ಕಂಡ ವಿದ್ಯಾನಂದ ಅವರ ಕುಟುಂಬದವರು ಗಾಬರಿಯಾಗಿದ್ದಾರೆ. 

ಮೈಸೂರು: ಕೆ.ಆರ್‌.ನಗರ ತಾಲೂಕಲ್ಲಿ ಬೋನಿಗೆ ಸೆರೆಸಿಕ್ಕ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಕಾರಿನ ಹೆಡ್ ಲೈಟ್‌ ಬೆಳಕಲ್ಲಿ ವಿದ್ಯಾನಂದ ಅವರು ಚಿರತೆಯ ವಿಡಿಯೋ ಸೆರೆ ಹಿಡಿದಿದ್ದಾರೆ. ಪ್ರಸಿದ್ಧ ದಂಡಗುಂಡ ಬಸವೇಶ್ವರ ಜಾತ್ರೆ ನಾಳೆ ನಡೆಯಲಿದೆ. ಸಾಕಷ್ಟು ಭಕ್ತ ಸಮೂಹ ಪಾದಯಾತ್ರೆ ಮೂಲಕ ಜಾತ್ರೆಗೆ ಬರಲಿದ್ದಾರೆ. ಈ ಮಾರ್ಗದಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಜಾತ್ರೆಗೆ ಬರುವ ಭಕ್ತರು ಅತಂಕಕ್ಕೊಳಗಾಗಿದ್ದಾರೆ. 

PREV
Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್