ಚಿಕ್ಕಬಳ್ಳಾಪುರ: ರೈಲು ನಿಲ್ದಾಣದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಾತೆ

By Kannadaprabha NewsFirst Published Sep 3, 2023, 1:49 PM IST
Highlights

ರೈಲು ಗುರುವಾರ ಮುಂಜಾನೆ 1-30 ಗಂಟೆಗೆ ಗೌರಿಬಿದನೂರು ರೈಲ್ವೆ ನಿಲ್ದಾಣದಲ್ಲಿ ನಿಂತಿದೆ. ಗೌರಿಬಿದನೂರು ರೈಲ್ವೆ ನಿಲ್ದಾಣದಲ್ಲಿ ಚಂದ್ರಮ್ಮ ಇಳಿದಿದ್ದಾಳೆ. ಅಲ್ಲಿಯೇ ಹೆರಿಗೆಯಾಗಿದೆ. ವೈದ್ಯಕೀಯ ಸಿಬ್ಬಂದಿ ಹೆರಿಗೆಗೆ ಸಹಾಯ ಮಾಡಿದ್ದು, ತಾಯಿ ಹಾಗೂ ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ. 

ಚಿಕ್ಕಬಳ್ಳಾಪುರ(ಸೆ.03):  ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ರೈಲು ನಿಲ್ದಾಣದಲ್ಲಿ ಇಳಿಯುತ್ತಿದಂತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಮೂಲತಃ ಕಲಬುರಗಿ ಜಿಲ್ಲೆಯ ಚಂದ್ರಮ್ಮ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. ಚಂದ್ರಮ್ಮ 8 ತಿಂಗಳ ಗರ್ಭಿಣಿಯಾಗಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದರು. ಬೆಂಗಳೂರಿನಿಂದ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ಗ್ರಾಮದಲ್ಲಿ ಸಂಬಂಧಿಕರ ಮನೆಗೆ ಸಹೋದರ ಹಾಗೂ ಸಂಬಂಧಿಕರ ಜೊತೆ ನಾಂದೇಡ್‌ ಎಕ್ಸ್‌ ಪ್ರೆಸ್‌ ಮೂಲಕ ಬುಧವಾರ ಮಧ್ಯರಾತ್ರಿ ಕಲಬುರಗಿಗೆ ಪ್ರಯಾಣ ಬೆಳೆಸಿದ್ದರು. ರೈಲು ಬೆಂಗಳೂರಿನಿಂದ ಯಲಹಂಕ ತಲಪುವಷ್ಟರಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ನಂತರ ರೈಲ್ವೆ ಕಂಟ್ರೋಲ್‌ ರೂಂಗೆ ಕರೆ ಮಾಡಿ ಸಹಾಯಕ್ಕೆ ಮನವಿ ಮಾಡಿದ್ದಾರೆ. ಮನವಿ ಆಲಿಸಿದ ರೈಲ್ವೆ ಕಂಟ್ರೋಲ್‌ ರೂಂ ಸಿಬ್ಬಂದಿ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯನ್ನು ಸಂರ್ಪಕಿಸಿ ಚಂದ್ರಮ್ಮಳ ಹೆರಿಗೆಗೆ ವ್ಯವಸ್ಥೆ ಸಿದ್ದತೆಗೆ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂಧಿಸಿದ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ರೈಲು ನಿಲ್ದಾಣದಲ್ಲಿ ಆ್ಯಂಬುಲೆನ್ಸ್‌ನೊಂದಿಗೆ ಕಾಯುತ್ತಿದ್ದರು.

ಕನಕಪುರದಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಚಿಂತನೆ: ಸಚಿವ ಶರಣ ಪ್ರಕಾಶ್‌ ಪಾಟೀಲ್‌

ರೈಲು ಗುರುವಾರ ಮುಂಜಾನೆ 1-30ಗಂಟೆಗೆ ಗೌರಿಬಿದನೂರು ರೈಲ್ವೆ ನಿಲ್ದಾಣದಲ್ಲಿ ನಿಂತಿದೆ. ಗೌರಿಬಿದನೂರು ರೈಲ್ವೆ ನಿಲ್ದಾಣದಲ್ಲಿ ಚಂದ್ರಮ್ಮ ಇಳಿದಿದ್ದಾಳೆ. ಅಲ್ಲಿಯೇ ಹೆರಿಗೆಯಾಗಿದೆ. ವೈದ್ಯಕೀಯ ಸಿಬ್ಬಂದಿ ಹೆರಿಗೆಗೆ ಸಹಾಯ ಮಾಡಿದ್ದು, ತಾಯಿ ಹಾಗೂ ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ. ಹೆರಿಗೆಯ ನಂತರ ತಾಯಿ ಮತ್ತು ಮಕ್ಕಳಿಬ್ಬರನ್ನು ಗೌರಿಬಿದನೂರು ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. 

click me!