ತಾವರಗೇರಾದ ರಾಯನ ಕೆರೆ ಭರ್ತಿ: ರೈತರ ಮೊಗದಲ್ಲಿ ಸಂತಸ

By Web DeskFirst Published Oct 7, 2019, 8:43 AM IST
Highlights

ಉತ್ತಮ ಮಳೆಯಾಗಿದ್ದರಿಂದ ತಾಲೂಕಿನ ತಾವರಗೇರಾ ಬಳಿ ಇರುವ ರಾಯನ ಕೆರೆ ಭರ್ತಿ| ಕಳೆದ ಒಂದು ವಾರದಿಂದ ತಾಲೂಕಿನ ವಿವಿಧ ಕಡೆಗಳಲ್ಲಿ ರಾತ್ರಿ ವೇಳೆ ಉತ್ತಮ ಮಳೆಯಾಗುತ್ತಿದೆ| ಬತ್ತಿದ್ದ ಕೆರೆ, ಬಾವಿಗಳು ಸೇರಿದಂತೆ ಬೋರವೆಲ್‌ಗಳು ಸಹ ತುಂಬಿವೆ| ಕಳೆದ ಹಲವು ವರ್ಷಗಳಿಂದ ಮತ್ತು ಇತ್ತೀಚಿಗೆ ಕೃಷಿ ಇಲಾಖೆಯಿಂದ ರೈತರು ಜಮೀನುಗಳಲ್ಲಿ ನಿರ್ಮಿಸಿದ್ದ ಕೃಷಿ ಹೊಂಡಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದರಿಂದ ಸರ್ಕಾರ ಯೋಜನೆಗೆ ಸ್ವಲ್ಪ ಮಟ್ಟಿಗೆ ಯಶಸ್ವಿಯಾದಂತಾಗಿದೆ| 

ಕುಷ್ಟಗಿ(ಅ.7): ತಾಲೂಕಿನಾದ್ಯಂತ ಶನಿವಾರ ರಾತ್ರಿ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದರಿಂದ ತಾಲೂಕಿನ ತಾವರಗೇರಾ ಬಳಿ ಇರುವ ರಾಯನ ಕೆರೆ ಭರ್ತಿಯಾಗಿದ್ದು. ನಿಡಶೇಸಿ ಕೆರೆಗೆ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ಒಂದು ವಾರದಿಂದ ತಾಲೂಕಿನ ವಿವಿಧ ಕಡೆಗಳಲ್ಲಿ ರಾತ್ರಿ ವೇಳೆ ಉತ್ತಮ ಮಳೆಯಾಗುತ್ತಿರುವುದರಿಂದ ಬತ್ತಿದ್ದ ಕೆರೆ, ಬಾವಿಗಳು ಸೇರಿದಂತೆ ಬೋರವೆಲ್‌ಗಳು ಸಹ ತುಂಬಿವೆ. ತಾಲೂಕಿನ ರಾಯನ ಕೆರೆಯೂ ಸಹ ಮಳೆಯಿಂದಾಗಿ ಈ ಬಾರಿ ಭರ್ತಿಯಾಗಿದ್ದು ಅಲ್ಲಿರುವ ಸಾರ್ವಜನಿಕರು ಮತ್ತು ಕೆಲ ಅಧಿಕಾರಿಗಳು, ಸಂಘ, ಸಂಸ್ಥೆಗಳ ಪ್ರತಿನಿಧಿಗಳ ಪರಿಶ್ರಮ ತಕ್ಕ ಪ್ರತಿ ಫಲ ದೊರಕಿದಂತ್ತಾಗಿದೆ.

ಕೃಷಿ ಹೊಂಡಗಳಿಗೆ ನೀರು:

ಕಳೆದ ಹಲವು ವರ್ಷಗಳಿಂದ ಮತ್ತು ಇತ್ತೀಚಿಗೆ ಕೃಷಿ ಇಲಾಖೆಯಿಂದ ರೈತರು ಜಮೀನುಗಳಲ್ಲಿ ನಿರ್ಮಿಸಿದ್ದ ಕೃಷಿ ಹೊಂಡಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದರಿಂದ ಸರ್ಕಾರ ಯೋಜನೆಗೆ ಸ್ವಲ್ಪ ಮಟ್ಟಿಗೆ ಯಶಸ್ವಿಯಾದಂತಾಗಿದೆ. ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಾನುವಾರುಗಳು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ನೀರಿನ ಆಸರೆಯಾಗುತ್ತಿದ್ದು. ಇದರಿಂದ ನೀರಿನ ದಾಹದಿಂದ ತತ್ತರಿಸಿ ಹೋಗಿದ್ದ ಪ್ರಾಣಿ, ಪಕ್ಷಿಗಳು ಮತ್ತು ಜಾನುವಾರುಗಳು ಸಹ ಮಳೆ ನೀರಿನಿಂದ ನೀರಿನ ದಾಹವನ್ನು ತೀರಿಸಿಕೊಳ್ಳುವಂತಾಗಿದೆ. ಜತೆಗೆ ತಾಲೂಕಿನ ರಾಯನ ಕೆರೆ ಮತ್ತು ನಿಡಶೇಸಿ ಕೆರೆಗೆ ಬರುತ್ತಿದ್ದ ಪ್ರಾಣಿ, ಪಕ್ಷಿಗಳು ಕೆರೆಯಲ್ಲಿ ನಿತ್ಯ ಮಂದಹಾಸ ಬೀರುತ್ತಿರುವುದು ವಿಶೇಷವಾಗಿದೆ.

ಶ್ರೀಗಳ ಆಶೀರ್ವಾದ:

ಜಿಲ್ಲೆಯಲ್ಲಿಯೇ ಜಲಕ್ರಾಂತಿ ಸೃಷ್ಟಿಸಿದ್ದ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಮಾರ್ಗದರ್ಶನ ಮತ್ತು ಅವರ ಇಚ್ಛಾಶಕ್ತಿ ಫಲವಾಗಿ ಜಿಲ್ಲೆಯ ಕೆಲ ಕೆರೆಗಳಿಗೆ ಮಳೆ ನೀರು ಸಂಗ್ರಹವಾಗುವುದಕ್ಕೆ ಸಾಧ್ಯವಾಗಿದೆ. ಜತೆಗೆ ಜಿಲ್ಲೆ ಕೆಲ ಅಧಿಕಾರಿಗಳು ಮತ್ತು ಪ್ರತಿಯೊಬ್ಬ ಸಾರ್ವಜನಿಕರು ಸಹ ಈ ಕಾರ್ಯಕ್ಕೆ ಕೈಜೋಡಿಸಿದ್ದರಿಂದ ನಾವುಗಳು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಲು ಸಾಧ್ಯವಾಗಿದೆ ಎನ್ನುತ್ತಾರೆ ತಾಲೂಕಿನ ರೈತ ಮುಖಂಡರಾದ ದೇವಿಂದ್ರಪ್ಪ ಎಸ್‌ ಬಳೂಟಗಿ, ಪರಸಪ್ಪ ಕತ್ತೆ, ಚಂದ್ರು ನಾಲತ್ವಾಡ, ಜಗನಾಥ ಈಳಗೇರ, ಟಿ, ಬಸವರಾಜ ಸೇರಿದಂತೆ ಕೆರೆಗಳ ಅಭಿವೃದ್ಧಿ ಸಮಿತಿ ಎಲ್ಲ ಸದಸ್ಯರು.
 

click me!