ಕಂಠಪೂರ್ತಿ ಕುಡಿದು ಬಿಎಂಟಿಸಿ ಬಸ್‌ ಚಾಲನೆ : ಸರಣಿ ಅಪಘಾತ

Published : Oct 07, 2019, 08:37 AM IST
ಕಂಠಪೂರ್ತಿ ಕುಡಿದು ಬಿಎಂಟಿಸಿ ಬಸ್‌ ಚಾಲನೆ : ಸರಣಿ ಅಪಘಾತ

ಸಾರಾಂಶ

ಬಿಎಂಟಿಸಿ ಬಸ್ ಚಾಲಕ ಕುಡಿದು ಬಸ್ ಚಾಲನೆ ಮಾಡಿದ್ದು ಸರಣಿ ಅಪಘಾತ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಬೆಂಗಳೂರು (ಅ.07): ಕಂಠಪೂರ್ತಿ ಮದ್ಯ ಸೇವಿಸಿ ಬಿಎಂಟಿಸಿ ಬಸ್‌ ಚಾಲಕ ಅಡ್ಡಾದಿಡ್ಡಿ ಬಸ್‌ ಚಾಲನೆ ಮಾಡಿರುವ ಘಟನೆ ಯಲಹಂಕದಲ್ಲಿ ನಡೆದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬಿಎಂಟಿಸಿ ಬಸ್‌ ಚಾಲಕ ಸೆದಪ್ಪ ಎನ್‌.ಬಾಬಲಿ (45) ವಿರುದ್ಧ ಪೊಲೀಸರು ಡ್ರಂಕ್‌ ಅಂಡ್‌ ಡ್ರೈವ್‌ ಪ್ರಕರಣ ದಾಖಲಿಸಿದ್ದಾರೆ. ಎಂ.ಎಸ್‌.ಪಾಳ್ಯ ಡಿಪೋನಲ್ಲಿ ಹತ್ತು ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿರುವ ಸೆದಪ್ಪ, ಅ.5ರಂದು ಸಂಜೆ ಆರು ಗಂಟೆ ಸುಮಾರಿಗೆ ವಿದ್ಯಾರಣ್ಯಪುರದಿಂದ-ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿ ನಿಯಂತ್ರಣ ಕಳೆದುಕೊಂಡು ಮುಖ್ಯರಸ್ತೆಯಲ್ಲಿ ಹೋಗುವಾಗ ಐದಾರು ವಾಹನಗಳಿಗೆ ಸರಣಿ ಅಪಘಾತ ಮಾಡಿ, ವಾಹನಗಳ ಜಖಂ ಮಾಡಿದ್ದಾರೆ. ಕೂಡಲೇ ಸಾರ್ವಜನಿಕರೇ ಬಸ್‌ ನಿಲ್ಲಿಸಿದ್ದಾರೆ. ಸ್ಥಳದಲ್ಲಿದ್ದ ಯಲಹಂಕ ಸಂಚಾರ ಠಾಣೆಯ ಎಎಸ್‌ಐ ರಂಗನಾಥ್‌ ಮತ್ತು ಸಿಬ್ಬಂದಿ ಗಂಗರಾಜಯ್ಯ, ರವೀಂದ್ರ ಕೂಡಲೇ ಚಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಳಿಕ ಆಲ್ಕೋಮೀಟರ್‌ ಮೂಲಕ ಸೆದಪ್ಪರನ್ನು ತಪಾಸಣೆ ನಡೆಸಿದಾಗ ಮದ್ಯ ಸೇವಿಸಿ ಬಿಎಂಟಿಸಿ ವಾಹನವನ್ನು ಚಲಾಯಿಸಿರುವುದು ದೃಢಪಟ್ಟಿದೆ. ಬಸ್ಸನ್ನು ಜಪ್ತಿ ಮಾಡಿ, ಚಾಲಕನಿಗೆ ನೋಟಿಸ್‌ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?