ಬಂಗಾರಪೇಟೆ (ಜೂ.10): ಕೊರೋನಾ ಮೂರನೆ ಅಲೆಯನ್ನು ತಪ್ಪಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು. ಇಲ್ಲದಿದ್ದರೆ ಅಂತವರ ಪಡಿತರ ಚೀಟಿಯನ್ನ ರದ್ದುಗೊಳಿಸಲಾಗುವುದು ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಎಚ್ಚರಿಸಿದರು.
ಬುಧವಾರ ಮಾವಹಳ್ಳಿ ಚಿಕ್ಕಅಂಕಂಡಹಳ್ಳಿ, ಕಾರಹಳ್ಳಿ ಮತ್ತು ಸೂಲಿಕುಂಟೆ ಗ್ರಾಂಪಂಗಳಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದುಕೊರತೆ ಹಾಗೂ ಕೊರೋನಾ ಸೋಂಕು ತಡೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲನಾ ಸಭೆಯಲ್ಲಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಶಾಸಕರು, ಜೀವ ಜೀವನ ಇರಬೇಕಾದರೆ ಎಲ್ಲರೂ ತಪ್ಪದೇ ಕೊರೋನಾ ಲಸಿಕೆ ಹಾಕಿಸಿಕೊಳ್ಳಬೇಕು. ಕಡೆಗಣಿಸಿದವರಿಗೆ ಸರ್ಕಾರಿ ಸೌಲಭ್ಯವನ್ನು ಮುಲಾಜಿಲ್ಲದೇ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.
undefined
ಕೊರೋನಾ ಸಾವಿನ ಸಂಕೋಲೆ: ರಾಜ್ಯವೇ ಬೆಚ್ಚಿ ಬೀಳಿಸುವಂತ ಸುದ್ದಿ..! ..
ಎರಡನೇ ಅಲೆಯಲ್ಲಿ ಸಾಕಷ್ಟು ಪ್ರಾಣಹಾನಿಯಾಗಿದೆ. 3ನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ತಜ್ಞರ ವರದಿಯಲ್ಲಿ ಎಚ್ಚರಿಸಿದ್ದಾರೆ. ಆದ್ದರಿಂದ ಲಸಿಕೆಯೊಂದೇ ಸೋಂಕಿನಿಂದ ಪಾರಾಗಲು ಮಾರ್ಗವೆಂದು ಹೇಳಿದರು.
ನಾನು ಸೋಂಕಿಗೆ ಹೆದರಿ ರೆಸಾರ್ಟ್‌ನಲ್ಲಿ ತಲೆ ಮರೆಸಿಕೊಂಡಿರುವುದಾಗಿ ಕೆಲವರು ಟೀಕೆ ಮಾಡಿದ್ದಾರೆ. ರೆಸಾರ್ಟ್ ಕಟ್ಟಿದ್ದೇನೆ. ಅಲ್ಲಿರುವೆ ಅದೇನು ಅಮೆರಿಕದಲ್ಲಿದೆಯೇ ಪಟ್ಟಣದಲ್ಲೇ ಇದೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.
ಕೋವಿಡ್ ಸಮಯದಲ್ಲಿ ಗ್ರಾಮಗಳಲ್ಲಿ ಜನರು ತೊಂದರೆಗೆ ಸಿಲುಕಿದ್ದಾರೆಂದು ಅವರ ಸಮಸ್ಯೆಗಳಿಗೆ ಅವರ ಸ್ಥಳದಲ್ಲೇ ಬಗೆಹರಿಸಲು ಕ್ಷೇತ್ರ ಪ್ರವಾಸ ಕೈಗೊಂಡಿರುವೆ ವಿನಃ ನಾನು ಕೋವಿಡ್‌ಗೆ ಹೆದರಿ ಎಲ್ಲೂ ಪಲಾಯನ ಮಾಡಿಲ್ಲ ಎಂದರು.