
ಹಾವೇರಿ: ಹಸು ಅಥವಾ ಎಮ್ಮೆ ಆಕಸ್ಮಿಕವಾಗಿ ಮರಣ ಹೊಂದಿದಾಗ ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಂದರ್ಭಗಳಲ್ಲಿ ‘ರಾಸು ವಿಮೆ’ ಈ ಯೋಜನೆ ಬಲವಾದ ಆರ್ಥಿಕ ಭದ್ರತೆಯಾಗಿ ನೆರವಾಗಲಿದೆ ಎಂದು ಹಾವೇಮುಲ್ ನಿರ್ದೇಶಕ ಪ್ರಕಾಶ ಬನ್ನಿ ಹಟ್ಟಿ ಹೇಳಿದರು.
ತಾಲೂಕಿನ ಮುತ್ತೂರು ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಹೈನುಗಾರರ ಹಿತದೃಷ್ಟಿಯಿಂದ ‘ರಾಸು ವಿಮೆ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಹೈನುಗಾರಿಕೆ ಗ್ರಾಮೀಣ ರೈತರ ಬದುಕಿನ ಪ್ರಮುಖ ಆಧಾರವಾಗಿದ್ದು, ರಾಸುಗಳ ನಷ್ಟದಿಂದ ಅನೇಕ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ.
ಇಂತಹ ಸಂದರ್ಭದಲ್ಲಿ ‘ರಾಸು ವಿಮೆ’ ಯೋಜನೆ ರೈತರಿಗೆ ರಕ್ಷಾ ಕವಚವಾಗಿ ಕೆಲಸ ಮಾಡಲಿದ್ದು, ನಷ್ಟಕ್ಕೆ ಪರಿಹಾರ ದೊರೆಯುವುದರ ಜೊತೆಗೆ ಮತ್ತೆ ಹೊಸ ರಾಸು ಖರೀದಿಸಿ ಹೈನುಗಾರಿಕೆಯನ್ನು ಮುಂದುವರಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮರಣ ಹೊಂದಿದ ಸದಸ್ಯರ ಕುಟುಂಬಗಳಿಗೆ ಕಲ್ಯಾಣ ನಿಧಿಯ ಚೆಕ್‌ಗಳನ್ನು ವಿತರಿಸಲಾಯಿತು. ಜೊತೆಗೆ ಹೈನುಗಾರರಿಗೆ ರಾಸು ವಿಮೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಾಗೇಂದ್ರಪ್ಪ ಜಿಗಳಿಕೊಪ್ಪ, ಆಡಳಿತ ಮಂಡಳಿಯ ಸದಸ್ಯರು, ಒಕ್ಕೂಟದ ಅಧಿಕಾರಿಗಳಾದ ಡಾ. ಶರಣಪ್ಪ, ವಿಸ್ತರಣಾ ಅಧಿಕಾರಿಗಳಾದ ಅಜಯ ಕುಮಾರ್ ರಿತ್ತಿ ಹಾಗೂ ವ್ಯಾಪಾರಸ್ಥ ರಮೇಶ ಮೋಟೆಬೆನ್ನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಮಲವಿಸರ್ಜನೆಗೆ ತೆರಳಿದಾಗ ಅತಿ ಆಯಾಸದಿಂದ 10 ವರ್ಷದ ಸ್ಮರಣ ಶಕ್ತಿ ಕಳೆದುಕೊಂಡ ಮಹಿಳೆ
ಇದನ್ನೂ ಓದಿ: ನಾರಿಶಕ್ತಿ ವಂದನಾ ಮಸೂದೆಗೆ ಸೋಲು: ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ