ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಪಕ್ಕದಲ್ಲಿ ಕಾಣಿಸಿಕೊಂಡ ಅಪರೂಪದ ಎರಡು ತಲೆ ಹಾವು!

By Govindaraj S  |  First Published Sep 12, 2024, 8:58 PM IST

ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಪಕ್ಕದಲ್ಲಿ ಅಪರೂಪದ ಹಾವು ಅಂದರೆ ಎರಡು ತಲೆ ಹಾವು  ಕಾಣಿಸಿಕೊಂಡಿದೆ. ಹೌದು! ಬೆಂಗಳೂರಿನ ಹೃದಯ ಭಾಗದಲ್ಲಿ ಆಟೋ ಡ್ರೈವರ್ ಗಳ ಕಣ್ಣಿಗೆ ಅತಿ ಹೆಚ್ಚು ಕಳ್ಳ ಸಾಗಾಣಿಕೆ ಪಟ್ಟಿಯಲ್ಲಿರುವ ಎರಡು ತಲೆ ಹಾವು ಕಾಣಿಸಿಕೊಂಡಿದೆ.


ಬೆಂಗಳೂರು (ಸೆ.12): ಹಾವು ಎಂಬ ಈ ಪದವನ್ನು ಕೇಳಿದರೆ ಸಾಕು ಅನೇಕರಿಗೆ ಭಯ ಶುರುವಾಗುತ್ತದೆ. ಹೌದು ಅದರಲ್ಲೂ ಈ ಹೆಬ್ಬಾವು, ನಾಗರಹಾವು, ಕಾಳಿಂಗ ಸರ್ಪ ಮತ್ತು ಎರಡು ತಲೆಯಿರುವ ಹಾವುಗಳನ್ನು ನೋಡಿದರಂತೂ ಮೈ ಬೆವರುವುದು ಗ್ಯಾರಂಟಿ ಅಂತ ಹೇಳಬಹುದು. ಅದರಲ್ಲೂ ಈ ರೀತಿಯ ವಿಭಿನ್ನ ಸರ್ಪಗಳ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಹರಿದಾಡುತ್ತಲೇ ಇರುತ್ತವೆ. 

ಇದೀಗ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಪಕ್ಕದಲ್ಲಿ ಅಪರೂಪದ ಹಾವು ಅಂದರೆ ಎರಡು ತಲೆ ಹಾವು  ಕಾಣಿಸಿಕೊಂಡಿದೆ. ಹೌದು! ಬೆಂಗಳೂರಿನ ಹೃದಯ ಭಾಗದಲ್ಲಿ ಆಟೋ ಡ್ರೈವರ್ ಗಳ ಕಣ್ಣಿಗೆ ಅತಿ ಹೆಚ್ಚು ಕಳ್ಳ ಸಾಗಾಣಿಕೆ ಪಟ್ಟಿಯಲ್ಲಿರುವ ಎರಡು ತಲೆ ಹಾವು ಕಾಣಿಸಿಕೊಂಡಿದೆ. ಈ ಎರಡು ತಲೆ ಹಾವು ಅಥವಾ ಮಣ್ಣವು ಅಂತ ಕರೆಯಲ್ಪಡುವ ಈ ಹಾವು ಅದೃಷ್ಟ ಅಂತ ನಂಬಿಕೆಯಿದೆ. 

Tap to resize

Latest Videos

ಹ್ಯಾಕರ್‌ಗಳು ವೃತ್ತಿಪರರು, ಸಂಘಟಿತರು: ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ವೆಂಕಟೇಶ್ ಮೂರ್ತಿ ಕಳವಳ

ಹಾಗಾಗಿ ಹೆಚ್ಚು ಕಳ್ಳ ಸಾಗಣಿಕೆ ಸಹ ನಡೆಯುತ್ತದೆ ಸದ್ಯ ಹಾವು ಕಂಡ ತಕ್ಷಣ ಆಟೋ ಚಾಲಕರು ರಕ್ಷಣೆ ಮಾಡುವಂತೆ ವನ್ಯಜೀವಿ ಸಂರಕ್ಷಕರು ಮತ್ತು ಪ್ರಾಣಿ ಕಲ್ಯಾಣ ಪರಿಪಾಲಕರಿಗೆ ಆಟೋ ಚಾಲಕರು ಮಾಹಿತಿ ನೀಡುವ ಮೂಲಕ ಮನವಿಯನ್ನು ನೀಡಿದ್ದಾರೆ. ಇನ್ನು ಮಾಹಿತಿಯಂತೆ ವನ್ಯಜೀವಿ ಸಂರಕ್ಷಕ ಪ್ರಸನ್ನ ಕುಮಾರ್ ರಕ್ಷಣೆ ಮಾಡಿ ಸೂಕ್ತವಾದ ಆವಾಸ ಸ್ಥಳದಲ್ಲಿ ಬಿಟ್ಟಿದ್ದಾರೆ. 

click me!