ಕೋಟಿ ಕೋಟಿ ಹಣವಿದ್ದ ಯೂನಿಯನ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆತ್ಮಹತ್ಯೆ!

By Sathish Kumar KH  |  First Published Sep 12, 2024, 3:57 PM IST

ಕೇರಳ ಮೂಲದ ಕೊಡಗು ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್‌ನ ಒಳಗೆ ಸಾವಿಗೆ ಶರಣಾಗಿರುವ ದುರ್ಘಟನೆ ಸಂಭವಿಸಿದೆ.


ಕೊಡಗು (ಸೆ.12): ಕೇರಳದಿಂದ ಬಂದು ಯೂನಿಯನ್ ಬ್ಯಾಂಕ್‌ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದವರು ಇದ್ದಕ್ಕಿಂದ್ದಂತೆ ಇಂದು ಬೆಳಗ್ಗೆ ಬ್ಯಾಂಕ್‌ಗೆ ಬಂದು ಲಾಕರ್ ರೂಮಿನಲ್ಲಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಹೌದು, ಬ್ಯಾಂಕ್ ಎಂದಾಕ್ಷಣದ ಹಣಕ್ಕೇನೂ ಕಡಿಮೆ ಇರುವುದಿಲ್ಲ. ಕೋಟಿ ಕೋಟಿ ಹಣದ ವ್ಯವಹಾರವನ್ನು ಹೊಂದಿರುತ್ತವೆ. ಅದರಲ್ಲಿಯೂ ಹೇಳಿ ಕೇಳಿ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವ ಯೂನಿಯನ್ ಬ್ಯಾಂಕ್‌ನ ಮ್ಯಾನೇಜರ್ ಆಗಿದ್ದರೂ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ಕೊಡಗು ಜಿಲ್ಲೆಯ ಕಕ್ಕಬ್ಬೆ ಶಾಖೆಯ ಯೂನಿಯನ್ ಬ್ಯಾಂಕ್‌ನಲ್ಲಿ ನಡೆದಿದೆ. ಮೃತನನ್ನು ಮ್ಯಾನೇಜರ್ ವಿಜು (46) ಎಂದು ಗುರುತಿಸಲಾಗಿದೆ.

Tap to resize

Latest Videos

undefined

ಟ್ರೆಂಡ್ ಆಗುತ್ತಿದೆ ಸ್ಲೀಪ್ ಟೂರಿಸಂ; ಎಲ್ಲಿವೆ ಸ್ಲೀಪಿಂಗ್ ಟೂರ್ ತಾಣಗಳು?

ಬ್ಯಾಂಕ್‌ ಮ್ಯಾನೇಜರ್ ವಿಜು ಎಂದಿನಂತೆ ಬೆಳಗ್ಗೆ ಬ್ಯಾಂಕ್‌ಗೆ ಕೆಲಸಕ್ಕೆಂದು ಬಂದಿದ್ದಾರೆ. ಆದರೆ, ಉಳಿದವರು ಬಂದು ಕೆಲಸ ಆರಂಭಿಸುವ ಮುನ್ನವೇ ಬ್ಯಾಂಕಿನೊಳಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಇನ್ನು ವಿಜು ಅವರು ಕೇರಳದ ಚಿಂಗೋಲಿ ಆಲಿಪುಳ ಗ್ರಾಮದ ನಿವಾಸಿ ಆಗಿದ್ದಾರೆ. ಈ ಘಟನೆಯ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆದರೆ, ಮ್ಯಾನೇಜರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

click me!