ಬಾನು ಮುಷ್ತಾಕ್ Dasara ಉದ್ಘಾಟನೆ: ಸ್ಪಷ್ಟನೆ ಕೇಳಿದ ಯದುವೀರ- ರಾಣಿ ಪ್ರಮೋದಾ ದೇವಿ ಏನಂದ್ರು?

Published : Aug 30, 2025, 04:34 PM IST
Rani Pramoda Devi

ಸಾರಾಂಶ

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ವಿಷಯ ಭಾರಿ ಕೋಲಾಹಲ ಸೃಷ್ಟಿಸಿದೆ. ಇದಕ್ಕೆ ಯದುವೀರ ದತ್ತ ಒಡೆಯರ್​ ಲೇಖಕಿಯಿಂದ ಸ್ಪಷ್ಟನೆ ಕೇಳಿದ್ರೆ, ರಾಣಿ ಪ್ರಮೋದಾ ದೇವಿ ಏನಂದ್ರು? 

ಈ ಬಾರಿನಾಡ ಹಬ್ಬ ದಸರಾವನ್ನು ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ (Banu Mushtaq) ಉದ್ಘಾಟಿಸಲಿದ್ದಾರೆ ಎನ್ನುವ ಸುದ್ದಿ ರಾಜಕೀಯ ತಿರುವು ಪಡೆದುಕೊಂಡಿದೆ. ಇದರ ಬಗ್ಗೆ ಪರ-ವಿರೋಧಗಳ ನಿಲುವು ವ್ಯಕ್ತವಾಗುತ್ತಿದೆ. ಪರವಾಗಿ ಇದ್ದವರು ತಮ್ಮದೇ ರೀತಿಯ ಕಾರಣ ಕೊಡುತ್ತಿದ್ದರೆ, ಹಿಂದೂಗಳ ಹಬ್ಬವಾಗಿರುವ ದಸರಾವನ್ನು ಇವರ ಬಳಿ ಉದ್ಘಾಟಿಸುವುದು ಸರಿಯಲ್ಲ ಎನ್ನುವ ದೊಡ್ಡ ಪ್ರಮಾಣದ ಟೀಕೆಗಳೇ ಸರ್ಕಾರದ ವಿರುದ್ಧ ಹರಿದುಬರುತ್ತಿದೆ. ಇದಾಗಲೇ ಸಂಸದರೂ ಆಗಿರುವ ಮಹಾರಾಜ ಕುಟುಂಬದ ಯದುವೀರ ದತ್ತ ಒಡೆಯರ್​ ಈ ಬಗ್ಗೆ ಮಾತನಾಡಿದ್ದಾರೆ. ಈ ಮೊದಲು ಅವರು ಸರ್ಕಾರದ ನಿಲುವನ್ನು ಒಪ್ಪಿದ್ದರು. ತಮಗೆ ಬಾನು ಮುಷ್ತಾಕ್​ ಅವರು ಉದ್ಘಾಟನೆ ಮಾಡುವುದರಲ್ಲಿ ಯಾವುದೇ ವಿರೋಧ ಇಲ್ಲ ಎಂದಿದ್ದರು.

ಸ್ಪಷ್ಟನೆ ಕೇಳಿದ ಯದುವೀರ್​

ಬಳಿಕ ಎಕ್ಸ್​ ಪೋಸ್ಟ್​ನಲ್ಲಿ ಯದುವೀರ್​ ಅವರು, ಶ್ರೀಮತಿ ಭಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ಬರಹಗಾರ್ತಿ ಮತ್ತು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡ ಲೇಖಕಿಯಾಗಿ, ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಹೆಮ್ಮೆಯನ್ನು ತಂದಿದ್ದಾರೆ ನಿಜ ಆದರೆ ಈ ಹಿಂದೆ ಕನ್ನಡ ತಾಯಿ ಭುವನೇಶ್ವರಿಯ ಬಗ್ಗೆ ಅವರು ಕೆಲವು ಹೇಳಿಕೆಗಳನ್ನು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ದಸರಾ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಬದಲಾಗಿ ಶಾಸ್ತ್ರ ಮತ್ತು ಪುರಾಣಗಳಲ್ಲಿ ಉಲ್ಲೇಖಗೊಂಡಿರುವ ಮತ್ತು ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ಸಂಸ್ಥಾನದ ಕಾಲದಿಂದಲೂ ವೈಭವದಿಂದ ಆಚರಿಸಲ್ಪಡುವ ಹಿಂದೂ ಧಾರ್ಮಿಕ ಉತ್ಸವವಾಗಿದೆ. ಈ ಪವಿತ್ರ ಪರಂಪರೆಯನ್ನು ಗಮನಿಸಿದರೆ, ಈ ವರ್ಷದ ದಸರಾ ಆಚರಣೆಯ ಮುಖ್ಯ ಅತಿಥಿಯಾಗಿ ಉದ್ಘಾಟಿಸುವ ಮೊದಲು ಅವರು ತಾಯಿ ಭುವನೇಶ್ವರಿ ಮತ್ತು ತಾಯಿ ಚಾಮುಂಡೇಶ್ವರಿಯ ಬಗ್ಗೆ ಅವರ ಗೌರವವನ್ನು ಶ್ರೀಮತಿ ಭಾನು ಮುಷ್ತಾಕ್ ಸ್ಪಷ್ಟಪಡಿಸುವುದು ಈ ಸಮಯದಲ್ಲಿ ಅತ್ಯಂತ ಅಗತ್ಯ ಎಂದು ಬರೆದುಕೊಂಡಿದ್ದಾರೆ.

ಮೈಸೂರು ದಸರಾ ವಿವಾದ, ಬಾನು ಮುಷ್ತಾಕ್ ವಿರುದ್ಧ ಮುಸ್ಲಿಂ ಮೌಲ್ವಿಗಳಿಂದ ಫತ್ವಾ? ಕಾಂಗ್ರೆಸ್ ವಿರುದ್ಧ ಮುಖಂಡರು ಗಂಭೀರ ಆರೋಪ!

ರಾಣಿ ಪ್ರಮೋದಾ ದೇವಿ ಹೇಳಿದ್ದೇನು?

ಇದೀಗ ರಾಣಿ ಪ್ರಮೋದಾ ದೇವಿ ಅವರು, ಅದರ ಬಗ್ಗೆ ನನ್ನ ಒಪೀನಿಯನ್​ ಏನೂ ಇಲ್ಲ. ಸರ್ಕಾರದ ಕಾರ್ಯಕ್ರಮ. ಕರೆಯುವವರ ಇಷ್ಟ, ಕರೆಸಿಕೊಂಡವರು ಬರುತ್ತೇನೋ, ಇಲ್ಲವೋ ಎಂದು ಹೇಳುವುದು ಅವರ ಇಷ್ಟ. ಆದರೆ ಒಂದು ವಿಷಯ ಹೇಳಬೇಕು. ಅದೇನೆಂದರೆ, ಚಾಮುಂಡಿ ಬೆಟ್ಟ ಹಿಂದೂ ದೇವರಿಗೆ ಸೇರಿದ್ದು. ಯಾಕೆ ಎಂದರೆ, ಚಾಮುಂಡೇಶ್ವರಿ ನಮ್ಮ ಕುಲದೇವಿ. ನಮಗೆ ಡಿವೈನ್​ ಮದರ್​, ಆಕೆ ನಮಗೆ ತಾಯಿ ಸ್ಥಾನ. ಸಮಾಜದಲ್ಲಿ ಎಲ್ಲರಿಗೂ ರಿಸ್​ಪೆಕ್ಟ್​ ಇದೆ. ದೇವಸ್ಥಾನ ಮಾತ್ರ ಹಿಂದೂ ಧಾರ್ಮಿಕ ಸಂಸ್ಕೃತಿಯಂತೆ ನಡೆಯುತ್ತದೆ. ಉಳಿದ ವಿಷಯ ನಾನು ಏನೂ ಹೇಳುವುದಿಲ್ಲ. ಅದನ್ನೆಲ್ಲಾ ಪತ್ರದ ಮೂಲಕ ತಿಳಿಸಿಯಾಗಿದೆ ಎಂದಿದ್ದಾರೆ.

ಅದೇ ಇನ್ನೊಂದೆಡೆ, ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ದಸರಾದಲ್ಲಿ ಭಾಗವಹಿಸಲು ನಮ್ಮ ಅಡ್ಡಿಯಿಲ್ಲ. ಆದರೆ ದೇವಿಗೆ ಪೂಜೆ ಮಾಡಿದರೆ ಫತ್ವಾ ಇನ್‌ಸ್ಟಿಟ್ಯೂಷನ್‌ನಿಂದ (Fatwa Institution) ಅನುಮತಿ ತೆಗೆದುಕೊಳ್ಳಬೇಕು ಎಂದು ಜಾಮೀಯಾ ಮಸೀದಿ ಮೌಲನಾ ಡಾ.ಮಕ್ಸೂದ್ ಇಮ್ರಾನ್ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಜಾಮೀಯಾ ಮಸೀದಿ ಮೌಲನಾ ಡಾ ಮಕ್ಸೂದ್ ಇಮ್ರಾನ್, ಪೂಜೆಯಲ್ಲಿ ನಿಂತರೆ ತಪ್ಪಿಲ್ಲ. ಅರ್ಚಕ ಅಥವಾ ಬೇರೆಯವರು ಪೂಜೆ ಮಾಡುತ್ತಿದ್ದರೆ ಇವರು ಭಾಗವಹಿಸಬಹುದು ಎಂದು ತಿಳಿಸಿದರು.

ಅಜ್ಮೇರ್‌ಗೆ ಚಾದರ್ ಹಾಕಿದ್ರೆ ಮೋದಿ ಮುಸ್ಲಿಂ ಆಗೋಲ್ಲ..' ಬಾನು ಮುಷ್ತಾಕ್ ವಿರುದ್ಧ ಫತ್ವಾ ಇಲ್ಲ ಎಂದ ಮೌಲಾನ

 

 

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್