ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಪಾಕಿಸ್ತಾನ್, ಐಸಿಸ್‌ಗೂ‌ ಲಿಂಕ್‌ ಇದೆ: ಬಸನಗೌಡ ಪಾಟೀಲ್ ಯತ್ನಾಳ್‌

By Girish Goudar  |  First Published Mar 8, 2024, 1:13 PM IST

ಬೆಂಗಳೂರು ಹೊಟೇಲ್ ಬಾಂಬ್ ಬ್ಲಾಸ್ಟ್ ಪ್ರಕರಣ ಕುರಿತು ಪ್ರತಿಕ್ರಿಯಿಸಿ ಬಾಂಬ್ ಸ್ಪೋಟ ಇದೊಂದು ವ್ಯವಸ್ಥಿತ ಜಾಲ ಎಂದಿದ್ದಾರೆ. ಬಾಂಬ್ ಸ್ಪೋಟಕ್ಕೂ ಪಾಕಿಸ್ತಾನ್, ಐಎಸ್‌ಐಎಸ್‌ಗೂ ಲಿಂಕ್ ಇದೆ. ಇದು ದೇಶವನ್ನ ಅಭದ್ರಗೊಳಿಸುವ ಸಂಚು. ಪಿಎಫ್‌ಐ ಚಟುವಟಿಕೆಗಳಿಗೂ ಲಿಂಕ್ ಇದೆ. ಸ್ಪೋಟದ ಹಿಂದೆ ಭಾರತವನ್ನ ಇಸ್ಲಾಮಿಕರಣ ಮಾಡುವ ಸಂಚಿದೆ. ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟಿಕರಣದಿಂದ ಬಾಂಬರ್ ಗಳಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಕಿಡಿಕಾರಿದ ಯತ್ನಾಳ್‌ 


ವಿಜಯಪುರ(ಮಾ.08):  ಪಾಕಿಸ್ತಾನ್ ಪರ ಘೋಷಣೆ ಪ್ರಕರಣ ನಾಸೀರ್ ಹುಸೇನ್ ಸುತ್ತಿಕೊಳ್ಳುತ್ತೆ. ನಾಸೀರ್ ಹುಸೇನ್ ಗೆ ಪ್ರಮಾಣ ವಚನ ನೀಡಬಾರದು. ಘೋಷಣೆ ಕೂಗಿದ ವ್ಯಕ್ತಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಜೊತೆಗೆ ನಿಕಟ ಸಂಬಂಧ ಹೊಂದಿದ್ದಾರೆ. ಇದರಲ್ಲಿ ನಾಸೀರ್ ಹುಸೇನ್‌ ಪಾತ್ರ ಇದ್ದೆ ಇದೆ‌. ಹಾಗಾಗಿ ಬಾಂಬ್ ಬ್ಲಾಸ್ಟ್ ಪ್ರಕರಣ ತನಿಖೆ ಮುಗಿಯುವವರೆಗೂ ನಾಸೀರ್ ಹುಸೇನ್‌ಗೆ ಪ್ರಮಾಣ ವಚನ ಕೊಡಬಾರದು. ಪ್ರಮಾಣ ವಚನ ಬೋಧಿಸದಂತೆ ಉಪರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಳ್ಳುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿದರು.

ಬಾಂಬ್ ಸ್ಪೋಟ‌ ವ್ಯವಸ್ಥಿತ ಜಾಲ ; ಯತ್ನಾಳ್..!

Latest Videos

undefined

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಬೆಂಗಳೂರು ಹೊಟೇಲ್ ಬಾಂಬ್ ಬ್ಲಾಸ್ಟ್ ಪ್ರಕರಣ ಕುರಿತು ಪ್ರತಿಕ್ರಿಯಿಸಿ ಬಾಂಬ್ ಸ್ಪೋಟ ಇದೊಂದು ವ್ಯವಸ್ಥಿತ ಜಾಲ ಎಂದಿದ್ದಾರೆ. ಬಾಂಬ್ ಸ್ಪೋಟಕ್ಕೂ ಪಾಕಿಸ್ತಾನ್, ಐಎಸ್‌ಐಎಸ್‌ಗೂ ಲಿಂಕ್ ಇದೆ. ಇದು ದೇಶವನ್ನ ಅಭದ್ರಗೊಳಿಸುವ ಸಂಚು. ಪಿಎಫ್‌ಐ ಚಟುವಟಿಕೆಗಳಿಗೂ ಲಿಂಕ್ ಇದೆ. ಸ್ಪೋಟದ ಹಿಂದೆ ಭಾರತವನ್ನ ಇಸ್ಲಾಮಿಕರಣ ಮಾಡುವ ಸಂಚಿದೆ. ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟಿಕರಣದಿಂದ ಬಾಂಬರ್ ಗಳಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಯತ್ನಾಳ ಕಿಡಿಕಾರಿದರು.

Rameshwaram Cafe Blast ಬಾಂಬರ್ ಪುಣೆಗೆ ಪರಾರಿ! ಸ್ಫೋಟದ ಹಿಂದೆ ಐಸಿಸ್ ಬಳ್ಳಾರಿ ಮಾಡ್ಯೂಲ್? ಶಂಕಿತರು ವಶಕ್ಕೆ

ಒಂದು ಕೋಮಿಗೆ ಹಣ ನೀಡಿ ಸರ್ಕಾರ ಸಾಲಕ್ಕೆ ಸಿಲುತ್ತಿದೆ..!

ಸಿಎಂ‌ ಸಿದ್ದರಾಮಯ್ಯ ಒಂದು ಕೋಮಿಗೆ 10 ಸಾವಿರ ಕೋಟಿ, ವಕ್ಪ್ ಆಸ್ತಿ ರಕ್ಷಣೆಗೆ ಕಾಂಪೌಂಡ್ ನಿರ್ಮಾಣಕ್ಕೆ 100 ಕೋಟಿ ಹೀಗೆ ನಮ್ಮ ಹಣ ಅವರಿಗೆ ಕೊಡ್ತಿದ್ದಾರೆ. ಹಿಂದೂಗಳಿಗೆ ಒಂದು ಕಾನೂನು, ಅವರಿಗೆ ಒಂದು ಕಾನೂನು. ಇದರಿಂದ ಸರ್ಕಾರ ಸಾಲದ ಸುಳಿಯಲಿ‌ ಸಿಲುಕುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದರು.

ವಿಜಯಪುರ ಲೋಕಸಭಾ ಟಿಕೇಟ್ ಯಾರಿಗೆ? ಯತ್ನಾಳ್ ಹೇಳಿದ್ದೇನು?!

ಇನ್ನು ಬೆಳಗಾವಿಯಲ್ಲಿ ಜೆಪಿ ನಡ್ಡಾ ಸಭೆ ವಿಚಾರವಾಗಿ ಅವರು ಮಾತನಾಡಿ, ಜೆಪಿ‌ ನಡ್ಡಾ ಅವರ ಜೊತೆಗೆ 15 ನಿಮಿಷಗಳ ಕಾಲ ಮಾತನಾಡಿದ್ದೇ‌ನೆ. ಲೋಕಸಭೆಗೆ ಸ್ಪರ್ಧಿಸೋದಿಲ್ಲ ಎಂದು ಹೇಳಿರುವೆ. ಪ್ರಚಾರದ ಜವಾಬ್ದಾರಿವಹಿಸಲಿ. 28 ಕ್ಷೇತ್ರಗಳಿಗೆ ಹೋಗಿ ಪ್ರಚಾರ ನಡೆಸುವೆ ಎಂದಿದ್ದೇನೆ ಎಂದು ತಿಳಿಸಿದರು.

Rameshwaram cafe Blast: ಬೆಂಗಳೂರು, ಹುಮ್ನಾಬಾದ್‌ ಬಸ್‌ ಸಿಸಿಟೀವೀಲಿ ಕೆಫೆ ಬಾಂಬರ್‌ ಸೆರೆ!

ಬಾಂಬ್ ಸ್ಪೋಟ ಪ್ರಕರಣ, ಕಾಂಗ್ರೆಸ್ ಸಚಿವರು ಜವಬ್ದಾರಿಯಿಂದ ಮಾತನಾಡಲಿ..!

ಬಾಂಬ್ ಸ್ಪೋಟ ಪ್ರಕರಣ ಓರ್ವನ ಬಂಧನ ವಿಚಾರವಾಗಿ, ಸುಲೇಮಾನ್ ಸಿಗಬೇಕು, ಶಿವಪ್ಪ ಸಿಗೊಲ್ಲ. ಸುಲೇಮಾನ್, ಅಜಗರ್, ಅಹಮ್ಮದ್ ಸಿಗಬೇಕು ಎಂದು ಪರೋಕ್ಷವಾಗಿ ಬಾಂಬ್ ಸ್ಪೋಟದಲ್ಲಿ ಮುಸ್ಲಿಮರೇ ಸಿಗ್ತಾರೆ ಎಂದು ಹೇಳಿದ ಯತ್ನಾಳ, ಸ್ಪೋಟದ ತನಿಖೆ ಇನ್ನು ಆಳವಾಗಿ ನಡೆಯಬೇಕು. ಇದು ಸಾಮಾನ್ಯ ಪ್ರಕರಣ ಅಲ್ಲವೇ ಅಲ್ಲ. ಕಾಂಗ್ರೆಸ್ ನ ಕೆಲ ಮಂತ್ರಿಗಳು ಇಮ್ಯಾಚುರ್ ಆಗಿ ಹೇಳಿಕೆ ಕೊಟ್ಟಿದ್ದಾರೆ. ಅಂದು ಸಿಲ್ಲಿ ಹೇಳಿಕೆ ನೀಡಿದವರಿಗೆ ಇವತ್ತು ಮುಖವೇ ಇಲ್ಲದಂತಾಗಿದೆ. ಗೃಹ ಸಚಿವರೆ ಖರ್ಗೆಯವರಿಗೆ ಛೀಮಾರಿ ಹಾಕಿದ್ದಾರೆ. 

ಖರ್ಗೆಯವರು ಬೇಜವಬ್ದಾರಿ ಹೇಳಿಕೆ ಕೊಡುವುದು ಬಿಟ್ಟು ತಮ್ಮ ಇಲಾಖೆಯಲ್ಲಿ ಚೆನ್ನಾಗಿ ಕೆಲಸ ಮಾಡಲಿ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡೋದು ಬಿಟ್ಟು ಹಿಂದೂಗಳಿಗೆ ಬೈತಿದ್ದಾರೆ. ಕಲಬುರ್ಗಿಯಲ್ಲಿ ನಿತ್ಯ ಬಿಜೆಪಿ ಕಾರ್ಯಕರ್ತ ಕೊಲೆ ಆಗ್ತಿದೆ. ಕಾನೂನು ಸುವ್ಯವಸ್ಥೆ ಸರಿಪಡೆಸಬೇಕು, ಹೀಗೆ ಮಾಡಿದ್ರೆ ಅವರ ಗೌರವ ಕಡಿಮೆ ಆಗುತ್ತೆ ಎಂದು ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಯತ್ನಾಳ‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

click me!