ಈಗಿರುವ ಉಪಮುಖ್ಯಮಂತ್ರಿ ಹುದ್ದೆಯೇ ಹೆಚ್ಚಾಗಿದ್ದು, ತೆಗೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಡಿಸಿಎಂ ಪದವಿ ಸೃಷ್ಟಿಯಾದ್ರೆ ರಮೇಶ್ ಜಾರಕಿಹೊಳಿ ಅಥವಾ ಶ್ರೀರಾಮುಲುಗೆ ಕೊಡುವ ಚಿಂತನೆಯಿದೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿದ್ದಾರೆ.
ಕೋಲಾರ(ಡಿ.14): ಈಗಿರುವ ಉಪಮುಖ್ಯಮಂತ್ರಿ ಹುದ್ದೆಯೇ ಹೆಚ್ಚಾಗಿದ್ದು, ತೆಗೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಡಿಸಿಎಂ ಪದವಿ ಸೃಷ್ಟಿಯಾದ್ರೆ ರಮೇಶ್ ಜಾರಕಿಹೊಳಿ ಅಥವಾ ಶ್ರೀರಾಮುಲುಗೆ ಕೊಡುವ ಚಿಂತನೆಯಿದೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿದ್ದಾರೆ.
ಕೋಲಾರಕ್ಕೆ ಆಗಮಿಸಿದ ಅಬಕಾರಿ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾತನಾಡಿದ್ದಾರೆ.
ಕೋಲಾರ: ಸರ್ಕಾರ ಸುಭದ್ರವಾಗ್ತಿದ್ದಂತೆ ಅಲರ್ಟ್ ಆದ ಸಚಿವ ನಾಗೇಶ್
ಉಪ ಚುನಾವಣೆಯಲ್ಲಿ ಪರಾಭವಗೊಂಡ ಬೆಂಬಲಿಗರಿಗೂ ಪದವಿ ಕೊಡುವಂತೆ ಸಿಎಂಗೆ ಮನವಿ ಮಾಡಲಾಗಿದೆ. ಎಚ್. ವಿಶ್ವನಾಥ ಮತ್ತು ಎಂಟಿಬಿ ನಾಗರಾಜ ಅವರಿಗೂ ಸಚಿವ ಪದವಿ ಕೊಡಬೇಕು. ಪಕ್ಷೇತರ ಶಾಸಕ ಶರತ್ ಅವರನ್ನು ಸೇರಿಸಿಕೊಳ್ಳುವುದು, ಬಿಡುವುದು ಸಿಎಂ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಈಗಿರುವ ಡಿಸಿಎಂ ಪದವಿಗಳನ್ನೇ ತೆಗೆಯಬೇಕೆಂಬ ಚಿಂತನೆಯಿದೆ. ಡಿಸಿಎಂ ಪದವಿ ಸೃಷ್ಟಿಯಾದ್ರೆ ಜಾರಕಿಹೊಳಿ ಅಥವಾ ಶ್ರೀರಾಮುಲುಗೆ ಕೊಡುವ ಚಿಂತನೆಯಿದೆ. ಸೋತಿದ್ದರೂ ಎಂಟಿಬಿ ನಾಗರಾಜ್ ಸಚಿವರಾಗುವುದು ಖಚಿತ ಎಂದು ಅವರು ಹೇಳಿದ್ದಾರೆ.
'ಇವರೆಂತ ಕಳ್ಳನ್ ಮಕ್ಳು'..? ದೇವೇಗೌಡ ಕುಟುಂಬದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ