ಸಿದ್ದರಾಮಯ್ಯಗೆ ಖಡಕ್ ಎಚ್ಚರಿಕೆ ನೀಡಿದ ನೂತನ ಅರ್ಹ ಶಾಸಕ!

By Suvarna News  |  First Published Dec 9, 2019, 4:00 PM IST

ಜನತಾ ನ್ಯಾಯಾಲಯ ಇಂದು ತಮ್ಮ ತೀರ್ಪು ನಡೆದಿದೆ ಎಂದ ರಮೇಶ್ ಜಾರಕಿಹೊಳಿ| ಅಯೋಗ್ಯ ರಮೇಶ್‌ ಕುಮಾರ್ ಮಾನ ಮರ್ಯಾದೆ ಇದ್ರೆ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು|ತಮಗೆ ಯಾವ ಖಾತೆ ಕೊಡ್ತಾರೆ ಗೊತ್ತಿಲ್ಲ| ಖಾತೆ ನೀಡುವ ಬಗ್ಗೆ ಬಿಜೆಪಿ ಹೈಕಮಾಂಡ್ ತೀರ್ಮಾನಿಸುತ್ತದೆ| ವಿಷಕನ್ಯೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾತನಾಡಬೇಡಿ ಎಂದ ರಮೇಶ್| 


ಬೆಳಗಾವಿ(ಡಿ.09): ಇನ್ನೂ 13 ರಿಂದ 15 ಜನ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಆದರೆ ಬಿಜೆಪಿ ಹೈಕಮಾಂಡ್ ಇದಕ್ಕೆ ಒಪ್ಪಿಲ್ಲ, ಸೋತ ಅನರ್ಹ ಶಾಸಕರ ಬಗ್ಗೆ ಸಿಎಂ ಯಡಿಯೂರಪ್ಪ, ಅಮಿತ್ ಶಾ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ವಿಜೇತ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ. 

ಸೋಮವಾರ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಅವರು, ಜನತಾ ನ್ಯಾಯಾಲಯ ಇಂದು ತಮ್ಮ ತೀರ್ಪು ನಡೆದಿದೆ. ಹಿಟ್ಲರ್, ಅಯೋಗ್ಯ ರಮೇಶ್‌ ಕುಮಾರ್ ಮಾನ ಮರ್ಯಾದೆ ಇದ್ರೆ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ. 

Tap to resize

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಗೌರವವಿದೆ, ನಿನ್ನೆಯವರೆಗೂ ಏನು ಮಾತನಾಡಿದ್ದೀರಿ ಎಲ್ಲವೂ ಗೊತ್ತಿದೆ. ಇಂದು ಫಲಿತಾಂಶ ಏನು ಬಂದಿದೆ ಅಂತ ಎಲ್ಲರಿಗೂ ತಿಳಿದಿದೆ. ಹೀಗಾಗಿ ನಿಮ್ಮ ಮಾತಿನ ಶೈಲಿ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ರಮೇಶ್ ಜಾರಕಿಹೊಳಿ‌ ಎಚ್ಚರಿಕೆ ನೀಡಿದ್ದಾರೆ. 

ಕೆ.ಸಿ.ವೇಣುಗೋಪಾಲ್, ದಿನೇಶ್ ಗುಂಡೂರಾವ್ ಗ್ರಾಮ ಪಂಚಾಯತ್ ಅಧ್ಯಕ್ಷರಾಗಲೂ ಲಾಯಕ್ ಇಲ್ಲ. ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾದ ದಿವಸವೇ ಕಾಂಗ್ರೆಸ್ ನಿರ್ನಾಮ ಆಗುತ್ತೆ ಅಂತಾ ಗೊತ್ತಾಯ್ತು ಎಂದು ತಿಳಿಸಿದ್ದಾರೆ. 
ತಮಗೆ ಯಾವ ಖಾತೆ ಕೊಡ್ತಾರೆ ಗೊತ್ತಿಲ್ಲ, ಖಾತೆ ನೀಡುವ ಬಗ್ಗೆ ಬಿಜೆಪಿ ಹೈಕಮಾಂಡ್ ತೀರ್ಮಾನಿಸುತ್ತದೆ, ವಿಷಕನ್ಯೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾತನಾಡಬೇಡಿ ಎಂದು ಹೇಳಿದ್ದಾರೆ. 

ಸಿಎಲ್‌ಪಿ ನಾಯಕ, ವಿರೋಧ ಪಕ್ಷದ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ವಿಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಮೇಶ್ ಜಾರಕಿಹೊಳಿ ಪಕ್ಷ ಬಿಟ್ಟರೆ ಏನಾಯ್ತು ಅವರು ಈಗಲೂ ನಮ್ಮ‌ ನಾಯಕರೇ, ಅವರು ಅವರ ಸೊಕ್ಕಿನ ಮಾತಿನಿಂದ ಈ ಮಟ್ಟಕ್ಕೆ ಬಂದು ತಲುಪಿದ್ದಾರೆ. ಅವರು ಸೊಕ್ಕು ಬಿಡಬೇಕು ಎಂದು ಹೇಳಿದ್ದಾರೆ. 

ಡಿಸೆಂಬರ್ 09ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!