ನಿಜವಾಯ್ತು ನೀಲಿ ಪುಸ್ತಕದ ರಾಜಕೀಯ ಭವಿಷ್ಯ: BSY ಸರ್ಕಾರಕ್ಕಿಲ್ಲ ಕಂಟಕ!

By Suvarna News  |  First Published Dec 9, 2019, 3:42 PM IST

12 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ರಾಜಕೀಯ ಭವಿಷ್ಯ ಹೇಳಿದ್ದ ಗಣಿತ ತಜ್ಞ ಪಂಡಿತ ಶ್ರೀಪಾಲ್​ ಉಪಾಧ್ಯ| ಮತ್ತೊಮ್ಮೆ ಸುಳ್ಳಾಗದ ನೀಲಿ ಪುಸ್ತಕದ ರಾಜಕೀಯ ಭವಿಷ್ಯ| ಮೂರು ತಿಂಗಳ ಮುಂಚೆಯೇ ಪ್ರಕಟಣೆ ಹೊರಡಿಸುವ ಉಪಾಧ್ಯ ಕುಟುಂಬ| 


ಬೆಳಗಾವಿ(ಡಿ.09): ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಹಾಗೂ ಮೂರು ಕ್ಷೇತ್ರಗಳಲ್ಲಿ ಮಾತ್ರ ಸಸ್ಪೆನ್ಸ್ ಇರಲಿದೆ ಎಂದು ಗಣಿತ ತಜ್ಞ ಪಂಡಿತ ಶ್ರೀಪಾಲ್​ ಉಪಾಧ್ಯ ಅವರು ನುಡಿದ ಭವಿಷ್ಯ ಇಂದು ಅಕ್ಷರಶಃ ನಿಜವಾಗಿದೆ. 

LIVE: ಬಿಜೆಪಿ ನಾಗಲೋಟ, ಕುಂಟಿದ ಕಾಂಗ್ರೆಸ್, ಮುಗ್ಗರಿಸಿದ ಜೆಡಿಎಸ್

Tap to resize

Latest Videos

undefined

ಹೌದು, ಉಪಚನಾವಣೆಯಲ್ಲಿ ಬಿಜೆಪಿಗೆ ಕನಿಷ್ಟ 6 ಸೀಟುಗಳು ಬರಬಹುದು ಎಂದು ಹೇಳಲಾಗಿತ್ತು. ಆದರೆ, ಗಣಿತ ತಜ್ಞ ಪಂಡಿತ ಶ್ರೀಪಾಲ್​ ಉಪಾಧ್ಯ ಅವರು ಹೇಳಿದ ಭವಿಷ್ಯ ಇಂದು ನಿಜವಾಗಿದೆ. ಇವರ ರಾಜಕೀಯ ಭವಿಷ್ಯದಿಂದ ಇಂದು ಯಡಿಯೂರಪ್ಪ ಅವರ ಸರ್ಕಾರ ಸುಭದ್ರವಾಗಿ ಇನ್ನೂ ಮೂರೂವರೆ ವರ್ಷ ಆಡಳಿತ ನಡೆಸಲಿದೆ. ಪಂಡಿತ ಶ್ರೀಪಾಲ್​ ಉಪಾಧ್ಯ ಅವರು ನುಡಿಯುವ ರಾಜಕೀಯ ಭವಿಷ್ಯ ಇಂದಿನವರೆಗೂ ಯಾವುದು ಸುಳ್ಳಾಗಿಲ್ಲ. 

1983ರಿಂದ ರಾಜಕೀಯ ಭವಿಷ್ಯ ಹೇಳುತ್ತಾ ಬಂದಿರುವ ಉಪಾಧ್ಯ ಕುಟುಂಬ

ಅಥಣಿ ತಾಲೂಕಿನ ಸಂಕೋನಟ್ಟಿಯಲ್ಲಿ ನೆಲೆಸಿರುವ ಪಂಡಿತ ಶ್ರೀಪಾಲ್​ ಉಪಾಧ್ಯ ಅವರು ಹೇಳಿರುವ ರಾಜಕೀಯ ಭವಿಷ್ಯ ಇಲ್ಲಿಯವರೆಗೆ ಯಾವುದು ಸುಳ್ಳಾಗಿಲ್ಲ. ಹೌದು,1983ರಿಂದ ಗಣಿತ ರಾಜಕೀಯ ಭವಿಷ್ಯ ಹೇಳುತ್ತಾ ಬಂದಿರುವ ಇವರು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದು ಸುಳ್ಳಾಗಲಿಲ್ಲ, ಎರಡು ಬಾರಿ ಮೋದಿ ಪ್ರಧಾನಿಯಾಗ್ತಾರೆ ಎಂದು ಹೇಳಿದ್ದರು.ಅದು ಕೂಡ ನಿಜವಾಗಿದೆ. 2018ರಲ್ಲಿ ಕುಮಾರಸ್ವಾಮಿ ಸಿಎಂ ಆಗ್ತಾರೆ ಎಂದು ಹೇಳಿದ್ದರು. ಈ ಬಗ್ಗೆ  3 ತಿಂಗಳ ಮುಂಚೆಯೇ ಶ್ರೀಪಾಲ್​ ಉಪಾಧ್ಯ ಅವರು ಪ್ರಕಟಣೆ ಹೊರಡಿಸಿದ್ದರು.

ಪಂಡಿತ ಉಪಾಧ್ಯಯರ ಕುಟುಂಬ ಸುಮಾರು 24 ತಲೆಮಾರುಗಳಿಂದ ಭವಿಷ್ಯ ಹೇಳುತ್ತಿದೆ.  ಸಾವಿರ ವರ್ಷಗಳ ಹಿಂದೆಯೇ ಉಪಾಧ್ಯ ಕುಟುಂಬದ ಪೂರ್ವಜರು ತ್ರಿಲೋಕ ಉಗ್ರ ಹೊತ್ತಿಗೆಯನ್ನು ರಚಿಸಿದ್ದಾರೆ. ಈ ಪುಸ್ತಕ ತಾಮ್ರ ಹಾಗೂ ತಾಳೆಗರಿಯಲ್ಲಿದ್ದು, ಅದನ್ನೇ ನೋಡಿ 1983ರಿಂದಲೇ ಈ ಕುಟುಂಬ ಪಕ್ಕಾ ರಾಜಕೀಯ ಭವಿಷ್ಯ ಹೇಳುತ್ತಾ ಬಂದಿದೆ.

ಉಪಾಧ್ಯ ಕುಟುಂಬ ಮೂರು ತಿಂಗಳ ಮುಂಚೆಯೇ ಪ್ರಕಟಣೆ ಹೊರಡಿಸುತ್ತೆ. ರಾಮಕೃಷ್ಣ ಹೆಗಡೆ ಸಿಎಂ ಆಗ್ತಾರೆ ಎಂದು ಈ ಹಿಂದೆ ಪ್ರಕಟಣೆ ಹೊರಡಿಸಿದ್ದು ಸುಳ್ಳಾಗಲಿಲ್ಲ 2ನೇ ಬಾರಿಗೆ ಮೋದಿಯೇ ಪ್ರಧಾನಿ ಆಗ್ತಾರೆ ಅನ್ನೋ ಪ್ರಕಟಣೆಯೂ ಹುಸಿಯಾಗಲಿಲ್ಲ.ಇನ್ನೂ 2018 ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿಯೇ ಸಿಎಂ ಆಗ್ತಾರೆ ಎಂದು ಮೂರು ತಿಂಗಳ ಹಿಂದೆಯೇ ಹೇಳಿದ್ದೆ ಅದು ಕೂಡ ಸುಳ್ಳಾಗಿಲ್ಲ ಎಂದು ಹೇಳಿದ್ದಾರೆ. ಈ ಪುಸ್ತಕಕ್ಕೆ ನೀಲಿ ಪುಸ್ತಕ ಎಂದು ಕರೆಯಲಾಗುತ್ತದೆ. 

ಉಪ ಸಮರದ ಬಗ್ಗೆ ವಿಸ್ಮಯದ ಭವಿಷ್ಯ: ಇವರು ಹೇಳಿದ್ದು ಸುಳ್ಳಾಗಿದ್ದೇ ಇಲ್ಲ!

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದ ಹೈವೋಲ್ಟೇಜ್ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್​ ಗೆಲುವು ಖಚಿತ ಎಂದು ಪಂಡಿತ ಶ್ರೀಪಾಲ್​ ಉಪಾಧ್ಯ ಅವರು ಹೇಳಿದ್ದರು. ಅದೇ ರೀತಿ ಸುಮಲತಾ ಅವರು ಗೆಲುವು ಸಾಧಿಸಿದ್ದರು ಎಂದು ಶ್ರೀಪಾಲ್​ ಉಪಾಧ್ಯ ಅವರ ಪುತ್ರ  ಉದಯ್ ಉಪಾಧ್ಯ ಅವರು ಹೇಳಿದ್ದಾರೆ.

ಇದೀಗ ರಾಜ್ಯದಲ್ಲಿ ನಡೆದ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಪಂಡಿತ ಶ್ರೀಪಾಲ್​ ಉಪಾಧ್ಯ ಅವರು ಹೇಳಿದ ಹಾಗೆ ಬಿಜೆಪಿ ಭರ್ತಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಪಂಡಿತ ಶ್ರೀಪಾಲ್​ ಉಪಾಧ್ಯ ಅವರು ನುಡಿದ ಭವಿಷ್ಯ ನಿಜವಾಗಿದೆ. 
ಡಿಸೆಂಬರ್ 09ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!