ಮತಾಂತರ ಮಾಡುವ ಕ್ರಿಶ್ಚಿಯನ್ ಮಿಷನರಿಗಳ ಸಹಚರರಿಗೆ ಖಡಕ್ ಎಚ್ಚರಿಕೆಯನ್ನ ಕೊಟ್ಟಿದ್ದೇನೆ. ಆಮಿಷವೊಡ್ಡಿ ಮತಾಂತರ ಮಾಡುವುದನ್ನು ಮುಂದುವರೆಸಿದ್ರೆ ಕಾಯ್ದೆ ಪ್ರಕಾರ ತಪ್ಪು, ಹೀಗೆ ಮಾಡುವವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸುವ ಎಚ್ಚರಿಕೆ ಕೊಟ್ಟಿದ್ದೇನೆ: ತಹಶಿಲ್ದಾರ್ ಪ್ರಕಾಶ
ಬೆಳಗಾವಿ(ಡಿ.29): ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಓಬಲಾಪುರ ತಾಂಡಾದಲ್ಲಿ ಹಣದ ಆಮೀಷವೊಡ್ಡಿ ಅಮಾಯಕರನ್ನ ಮತಾಂತರ ಮಾಡುವ ವಿಚಾರ ಸಂಬಂಧಿಸಿದಂತೆ ಓಬಲಾಪುರ ತಾಂಡಾಕ್ಕೆ ಇಡೀ ತಾಲೂಕಾಡಳಿತ ಭೇಟಿ ನೀಡಿದೆ. ಹೌದು, ಮತಾಂತರ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ವಿಸ್ಕೃತ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರಾಮದುರ್ಗ ತಾಲೂಕಾಡಳಿತ ಓಬಲಾಪುರ ತಾಂಡಾಕ್ಕೆ ಭೇಟಿ ನೀಡಿ ಮಾಹಿತಿಯನ್ನ ಕಲೆ ಹಾಕಿದೆ.
ರಾಮದುರ್ಗ ತಹಶಿಲ್ದಾರ ಪ್ರಕಾಶ ಹೊಳೆಪ್ಪಗೋಳ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಸಿಡಿಪಿಒ ಶಂಕರ ಕುಂಬಾರ ಸೇರಿ ಹಲವು ಅಧಿಕಾರಿಗಲು ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿ ಡಾ. ನಿತೇಶ ಪಾಟೀಲ ನಿರ್ದೇಶನ ಮೇರೆಗೆ ತಾಲೂಕಾಡಳಿತ ತಾಂಡಾಕ್ಕೆ ಭೇಟಿ ನೀಡಿದೆ ಎಂದು ತಿಳಿದು ಬಂದಿದೆ.
ಮತಾಂತರ ನಿಷೇಧವಿದ್ರೂ ಅಂಗನವಾಡಿ ಕಾರ್ಯಕರ್ತೆಯಿಂದಲೇ ಮತಾಂತರ ಕೃತ್ಯ; ಪ್ರಮೋದ್ ಮುತಾಲಿಕ್ ಆಕ್ರೋಶ
ಮತಾಂತರ ಮಾಡುವ ಕ್ರಿಶ್ಚಿಯನ್ ಮಿಷನರಿಗಳ ಸಹಚರರಿಗೆ ತಹಶಿಲ್ದಾರ್ ಪ್ರಕಾಶ ಅವರು ಖಡಕ್ ಎಚ್ಚರಿಕೆಯನ್ನ ಕೊಟ್ಟಿದ್ದಾರೆ. ಆಮಿಷವೊಡ್ಡಿ ಮತಾಂತರ ಮಾಡುವುದನ್ನು ಮುಂದುವರೆಸಿದ್ರೆ ಕಾಯ್ದೆ ಪ್ರಕಾರ ತಪ್ಪು, ಹೀಗೆ ಮಾಡುವವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸುವ ಎಚ್ಚರಿಕೆ ಕೊಟ್ಟಿದ್ದೇನೆ. ಇನ್ನು ಮುಂದೆ ಮತಾಂತರ ಮಾಡುವುದಿಲ್ಲ ಎಂದು ನಮ್ಮೆದುರು ಹೇಳಿದ್ದಾರೆ. ಮತಾಂತರಕ್ಕೆ ಪ್ರಚೋದನೆ ನೀಡ್ತಿದ್ದ ಅಂಗನವಾಡಿ ಟೀಚರ್ ಸುಮಿತ್ರಾ ವಿರುದ್ಧವೂ ಕೂಡ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇನ್ಮುಂದೆ ಮತಾಂತರ ಬಗ್ಗೆ ಯಾವುದೇ ಆ್ಯಕ್ಟಿವಿಟಿ ನಡೆದರೆ ನಮ್ಮ ಗಮನಕ್ಕೆ ತೆಗೆದುಕೊಂಡು ಬನ್ನಿ. ನಾವೇ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ತಹಶಿಲ್ದಾರ್ ಪ್ರಕಾಶ ಅವರು ತಾಂಡಾ ಜನರಿಗೆ ಅಭಯ ನೀಡಿದ್ದಾರೆ.
ತಾಂಡಾ ನಿವಾಸಿಗಳ ಜೊತೆಗೂ ಸಭೆ ಮಾಡಿ ಸಮಸ್ಯೆಗಳನ್ನ ಆಲಿಸಿದೆ ತಾಲೂಕಾಡಳಿತ. ಮತಾಂತರ ಆಗಿರುವವರಿಗೆ ಎಸ್‌ಸಿ ಸಮುದಾಯದ ಯಾವುದೇ ಸರ್ಕಾರಿ ಸೌಲಭ್ಯ ಕೊಡಬೇಡಿ. ಅಂಥವರನ್ನು ತಾಂಡಾದಿಂದ ಹೊರಗೆ ಹಾಕಿ ಎಂದು ಗ್ರಾಮಸ್ಥರು ತಹಶಿಲ್ದಾರ್ ಅವರಿಗೆ ಮನವಿ ಮಾಡಿದ್ದಾರೆ.