ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯು 2020-21 ನೇ ಸಾಲಿನ ಕರ್ನಾಟಕ ರಾಜ್ಯದ ಉತ್ತಮ ಜಿಲ್ಲಾ ಶಾಖೆ ಎಂದು ದ್ವಿತೀಯ ಸ್ಥಾನ ಪಡೆದಿದ್ದು, ರಾಜ್ಯಪಾಲರು ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷ ಥಾವರ್ ಚಂದ್ ಗೆಹ್ಲೋಟ್ ರಾಜಭವನದಲ್ಲಿ ಜರುಗಿದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ತುಮಕೂರು : ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯು 2020-21 ನೇ ಸಾಲಿನ ಕರ್ನಾಟಕ ರಾಜ್ಯದ ಉತ್ತಮ ಜಿಲ್ಲಾ ಶಾಖೆ ಎಂದು ದ್ವಿತೀಯ ಸ್ಥಾನ ಪಡೆದಿದ್ದು, ರಾಜ್ಯಪಾಲರು ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷ ಥಾವರ್ ಚಂದ್ ಗೆಹ್ಲೋಟ್ ರಾಜಭವನದಲ್ಲಿ ಜರುಗಿದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಾಖೆಯ ಸಭಾಪತಿ ಟಿ.ಬಿ. ಶೇಖರ್, ಗೌರವ ಕಾರ್ಯದರ್ಶಿ ಡಾ.ಜಿ.ಕೆ. ಸನತ್ ಕುಮಾರ್, ಖಜಾಂಚಿ ಶಿವಕುಮಾರ್, ರಾಷ್ಟ್ರ ಸಮಿತಿ ಸದಸ್ಯ ಎಸ್. ನಾಗಣ್ಣ, ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ. ವೀರಭದ್ರಯ್ಯ, ನಿರ್ದೇಶಕ ಡಿ. ಬಸವರಾಜು, ಡಾ. ಅಪರ್ಣಾ ಪ್ರಸನ್ನ, ಜಿ. ವೆಂಕಟೇಶ್, ಸುಭಾಷಿಣಿ ರವೀಶ್ ಹಾಗೂ ಟಿ.ಆರ್. ಲೋಕೇಶ್ ಉಪಸ್ಥಿತರಿದ್ದರು.
undefined
ಇಲ್ಲೊಂದು ರಕ್ತದಾನಿಗಳ ತವರೂರು
ಹಾವೇರಿ (ನ.25) : ರಕ್ತದಾನ ಮಾಡುವುದೆಂದರೆ ಹಿಂಜರಿಯುವ ಮಂದಿಯೇ ಹೆಚ್ಚು. ಆದರೆ, ಈ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ರಕ್ತ ಸೈನಿಕರಿದ್ದು, ರಕ್ತದಾನಿಗಳ ತವರೂರು ಎಂದೇ ಖ್ಯಾತಿ ಪಡೆದಿದೆ. ಹೋಮ್ ಟೌನ್ ಆಫ್ ಬ್ಲಡ್ ಡೋನರ್ಸ್ ಎಂದು ಗೂಗಲ್‌ನಿಂದ ಟ್ಯಾಗ್ ಆಗುವ ಮೂಲಕ ಜಗತ್ತಿನ ಭೂಪಟದಲ್ಲಿ ಈ ಗ್ರಾಮ ಗುರುತಿಸಿಕೊಂಡಿದೆ.
ಇಂಥ ವಿಶೇಷತೆಯಿಂದ ಗುರುತಿಸಿಕೊಂಡಿರುವುದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಅಕ್ಕಿಆಲೂರು ಗ್ರಾಮ. ಈ ಗ್ರಾಮದ ಮನೆಮನೆಯಲ್ಲೂ ರಕ್ತದಾನಿಗಳು ಇದ್ದಾರೆ. ‘ಸ್ನೇಹ ಮೈತ್ರಿ ಬ್ಲಡ್ ಆರ್ಮಿ’ ಎಂಬ ಸಂಘಟನೆ ಕಟ್ಟಿಕೊಂಡು ಸುತ್ತಮುತ್ತಲಿನ ಗ್ರಾಮಗಳಲ್ಲೂ ರಕ್ತ ದಾನದ ಶಿಬಿರ ಏರ್ಪಡಿಸಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲೂ ಅಕ್ಕಿಆಲೂರಿನ ರಕ್ತ ಸೈನಿಕರು ನಿರತರಾಗಿದ್ದಾರೆ. ಇತ್ತೀಚೆಗೆ ನೇತ್ರ ದಾನದ ಜಾಗೃತಿಯಲ್ಲೂ ತೊಡಗಿಕೊಂಡು 50ಕ್ಕೂ ಹೆಚ್ಚು ಜನರಿಂದ ನೇತ್ರ ದಾನದ ವಾಗ್ದಾನ ಮಾಡಿಸಿದ ಹೆಗ್ಗಳಿಗೆ ಈ ಗ್ರಾಮದ ಜನರದ್ದು.
BIG 3 Heroes: ರಕ್ತದಾನಿ ಗಣೇಶ್ ಶರ್ಮಾ ಮತ್ತು ಸುಂದರ ಅಂಗನವಾಡಿಯ ರೂವಾರಿ
68 ಸಲ ರಕ್ತದಾನ ಮಾಡಿದ ಪೇದೆ
ಅಕ್ಕಿಆಲೂರು ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬರ್ ಆಗಿರುವ ಕರಬಸಪ್ಪ ಗೊಂದಿ ಎಂಬವರೇ ಈ ಎಲ್ಲ ಕಾರ್ಯಕ್ಕೆ ಪ್ರೇರಣೆ. ಸ್ನೇಹಮೈತ್ರಿ ಬ್ಲಡ್ ಆರ್ಮಿ ಎಂಬ ಗುಂಪು ರಚಿಸಿಕೊಂಡು ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ವತಃ ಕರಬಸಪ್ಪ ಗೊಂದಿ ಅವರು 68 ಬಾರಿ ರಕ್ತದಾನ ಮಾಡಿದ್ದಾರೆ. ಹತ್ತಿಪ್ಪತ್ತು ಸಲ ರಕ್ತದಾನ ಮಾಡಿದ ನೂರಾರು ಜನರು ಅಕ್ಕಿಆಲೂರಿನಲ್ಲಿದ್ದಾರೆ. ಈ ಗ್ರಾಮದಲ್ಲಿರುವ ವಿರಕ್ತಮಠದ ಶಿವಬಸವ ಶ್ರೀಗಳು 9 ಬಾರಿ, ಮುತ್ತಿನಕಂತಿ ಮಠದ ಚಂದ್ರಶೇಖರ ಶಿವಾಚಾರ್ಯರು 12 ಸಲ ರಕ್ತದಾನ ಮಾಡಿದ್ದಾರೆ. ಇವರೆಲ್ಲರಿಂದ ಪ್ರೇರಣೆ ಪಡೆದು ಸುತ್ತಮುತ್ತಲಿನ ಗ್ರಾಮಗಳ ಜನರೂ ಬ್ಲಡ್ ಆರ್ಮಿ ಗುಂಪಿನ ಸದಸ್ಯರಾಗುತ್ತಿದ್ದಾರೆ. ಈಗ ಈ ಗುಂಪಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ರಕ್ತದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ತುರ್ತಾಗಿ ರಕ್ತ ಬೇಕಾದವರಿಗೆ, ಥಲಸ್ಸೇಮಿಯಾ ಕಾಯಿಲೆ ಇರುವವರಿಗೆ ಈ ಗ್ರಾಮದ ರಕ್ತ ಸೈನಿಕರು ರಕ್ತದಾನ ಮಾಡುತ್ತಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ರಕ್ತ ಸೈನಿಕರೂ ಅನೇಕರಿದ್ದಾರೆ.
ರಕ್ತದಾನಕ್ಕೆ ಪ್ರೇರಣೆ
ರಕ್ತ ದಾನದ ಬಗ್ಗೆ ಅನೇಕರಲ್ಲಿರುವ ತಪ್ಪು ಕಲ್ಪನೆ, ಮೂಢ ನಂಬಿಕೆಗಳನ್ನು ಹೋಗಲಾಡಿಸಿ ರಕ್ತ ದಾನಕ್ಕೆ ಪ್ರೇರಣೆ ನೀಡುವ ಕಾರ್ಯವನ್ನು ಕರಬಸಪ್ಪ ಗೊಂದಿ ನೇತೃತ್ವದಲ್ಲಿ ಬ್ಲಡ್ ಆರ್ಮಿ ತಂಡ ಕೆಲಸ ಮಾಡುತ್ತಿದೆ. ರಕ್ತದಾನದ ಜಾಗೃತಿಗೆಂದೇ ಸಾರಿಗೆ ಸಂಸ್ಥೆಯ ಬಸ್ ಒಂದಕ್ಕೆ ರಕ್ತದಾನ ರಥ ಎಂದು ನಾಮಕರಣ ಮಾಡಲಾಗಿದೆ. ಈ ಬಸ್ಸಿನ ಒಳಗಡೆಯೂ ರಕ್ತದಾನದ ಬಗ್ಗೆ ಅರಿವು ಮೂಡಿಸುವ ವಾಕ್ಯಗಳನ್ನು ಬರೆಯಲಾಗಿದೆ.
ಅಕ್ಕಿಆಲೂರು ಅಕ್ಕಪಕ್ಕದ ಹಳ್ಳಿಗಳಲ್ಲಿ ಥಲಸ್ಸೆಮಿಯಾದಿಂದ ಬಳಲುತ್ತಿರುವ ಹತ್ತಾರು ಮಕ್ಕಳಿಗೆ ನಿಯಮಿತವಾಗಿ ರಕ್ತವನ್ನು ಪೂರೈಸುವ ಕಾರ್ಯವನ್ನು ಇಲ್ಲಿಯ ರಕ್ತ ಸೈನಿಕರು ಮಾಡುತ್ತಿದ್ದಾರೆ. ಇದರಿಂದಾಗಿ ಥಲಸ್ಸೇಮಿಯಾದಿಂದ ಬಳಲುತ್ತಿರುವ ಸುತ್ತಮುತ್ತಲಿನ ಮಕ್ಕಳು ರಕ್ತಕ್ಕಾಗಿ ಅಲೆದಾಡುವ ಸ್ಥಿತಿ ಇದುವರೆಗೂ ಎದುರಾಗಿಲ್ಲ ಎಂದು ಅಕ್ಕಿಆಲೂರಿನ ರಕ್ತ ಸೈನಿಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 2015ರಿಂದ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಗುಂಪು ಮಾಡಿಕೊಂಡು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪೇದೆ ಕರಬಸಪ್ಪ ಗೊಂದಿ ಮತ್ತು ಅವರ ತಂಡ ನಿರತವಾಗಿದೆ. ಅಕ್ಕಿಆಲೂರು ಬಸ್ ನಿಲ್ದಾಣಕ್ಕೆ ರಕ್ತದಾನಿಗಳ ತವರೂರು ಎಂದು ನಾಮಕರಣ ಮಾಡಲಾಗಿದೆ.