ಯೇಸು ಕ್ರಿಸ್ತನ ಪೋಟೋಕ್ಕೆ ಡಿಕೆಶಿ ಮುಖ.. ಇದೆಂಥಾ ಕುಚೇಷ್ಟೆ!

By Suvarna News  |  First Published Jan 2, 2020, 8:43 PM IST

ರಾಮನಗರ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿಚಾರ/ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಡಿಕೆ ಶಿವಕುಮಾರ್/ ಡಿಕೆ ಶಿವಕುಮಾರ್ ಅವರನ್ನು ಯೇಸು ಕುಮಾರ್ ಎಂದು ಕರೆದ ನೆಟ್ಟಿಗರು


ಬೆಂಗಳೂರು(ಜ. 02)  ರಾಮನಗರದ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡಿವ ವಿಚಾರ ರಾಜ್ಯಮಟ್ಟದ ಸುದ್ದಿಯಾಗಿತ್ತು. ಅಂತಿಮವಾಗಿ ಈ ಕ್ಷಣಕ್ಕೆ ಯೇಸು ಪ್ರತಿಮೆ ನಿರ್ಮಾಣಕ್ಕೆ ಬ್ರೇಕ್  ಬಿದ್ದಿದೆ. ಆದರೆ ಯೇಸು ಪ್ರತಿಮೆ ನಿರ್ಮಾಣಕ್ಕೆ ಮುಂದಡಿ ಇಟ್ಟಿದ್ದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಟ್ರೋಲ್ ಆಗುತ್ತಿದ್ದಾರೆ.

ಯೇಸುಕ್ರಿಸ್ತನ ಭಾವ ಚಿತ್ರಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮುಖದ ಚಿತ್ರ ಅಳವಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೆಲವರು ಕುಚೇಷ್ಟೆ ತೋರಿದ್ದಾರೆ.

Tap to resize

Latest Videos

114 ಅಡಿ ಎತ್ತರದ ಜಗತ್ತಿನಲ್ಲೇ ಎತ್ತರ ಎಂದು ಕರೆಸಿಕೊಂಡ ಯೇಸು ಪ್ರತಿಮೆ ನಿರ್ಮಾಣ ಕಾರ್ಯ ಬೆಟ್ಟದಲ್ಲಿ ಆರಂಭವಾಗಿತ್ತು. ಗೋಮಾಳದ ಜಮೀನನ್ನು ಕಡಿಮೆ ಬೆಲೆಗೆ ಖರೀದಿ ಮಾಡಿದ ಡಿಕೆ ಶಿವಕುಮಾರ್ ಆ ಭೂಮಿಯನ್ನು ಪ್ರತಿಮೆ ನಿರ್ಮಾಣಕ್ಕೆ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಅಲ್ಲದೇ ಈ ಬಗ್ಗೆ ತನಿಖೆ ಮಾಡುವ ಮಾತುಗಳನ್ನು ಆಡಿತ್ತು.

ಕ್ರಿಸ್ತನ ಬೆಂಬಲಿಸಿದ ಡಿಕೆಶಿಗೆ ಕೃಷ್ಣನಲ್ಲಿ ಲೋಪ

ಸಂಸದ ಅನಂತ್ ಕುಮಾರ್ ಹೆಗಡೆ ಡಿಕೆ ಶಿವಕುಮಾರ್ ಅವರು ಯಾವ ಇಟಲಿ ಮಾತೆಯನ್ನು ಮೆಚ್ಚಿಸಲು ಮುಂದಾಗಿದ್ದಾರೆ ಎಂದು ಪ್ರಶ್ನೆ ಮಾಡಿದ್ದರು. ಒಟ್ಟಿನಲ್ಲಿ ಹೊಸ ವರ್ಷಕ್ಕೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಜೋರಾದ ಚರ್ಚೆ ನಡೆದಿತ್ತು.

ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತವಾಗಿದ್ದರೂ ಸೋಶಿಯಲ್ ಮೀಡಿಯಾ ರಿಯಾಕ್ಷನ್ ಮಾತ್ರ ಕಡಿಮೆ ಆಗಿಲ್ಲ. ಡಿಕೆ ಶಿವಕುಮಾರ್ ಅವರನ್ನು ಯೇಸುಕುಮಾರ್ ಎಂದು ಕರೆದು ಕನಕಪುರದ ಸ್ವಾಭಿಮಾನ ಕಾಪಾಡಿ ಎಂಬ ಪೋಸ್ಟ್ ಗಳು ಹರಿದಾಡುತ್ತಿವೆ. 

click me!