'ನಿಜವಾಗ್ಲೂ ನಿಮಗೆ ಧಮ್ ಇದ್ರೆ ಬೆಳಗಾವಿಯಲ್ಲಿ ಸಭೆ ಮಾಡಿ ನೋಡಿ'

By Suvarna NewsFirst Published Jan 2, 2020, 3:14 PM IST
Highlights

ಪ್ರಚೋದನಾತ್ಮಕ ಹೇಳಿಕೆ ನೀಡೋರನ್ನ ಒದ್ದು ಒಳಗೆ ಹಾಕಬೇಕು| ರಣಹೇಡಿಗಳ ತರಹ ಕದ್ದುಮುಚ್ಚಿ ಬಂದು ಸಭೆ ನಡೆಸಿದರೆ ಪರಿಣಾಮ ನೆಟ್ಟಗಿರೊಲ್ಲ ಎಂದ ನಾರಾಯಣಗೌಡ| ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿರುವ ಮಹಾರಾಷ್ಟ್ರ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ ನಾರಾಯಣಗೌಡ|

ಬೆಳಗಾವಿ(ಜ.02): ಕದ್ದುಮುಚ್ಚಿ ಬೆಳಗಾವಿಗೆ ಬಂದು ಸಭೆ ನಡೆಸುತ್ತಿದ್ದರೆ ಅಂತವರ ಕ್ರಮ ಕೈಗೊಳ್ಳಬೇಕು, ಧಮ್ ಇದ್ರೆ ಬೆಳಗಾವಿಯಲ್ಲಿ ಬಹಿರಂಗ ಸಾರ್ವಜನಿಕ ಸಭೆ ಮಾಡಲಿ ಎಂದು ಮಹಾರಾಷ್ಟ್ರದ ನಾಯಕರಿಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಸವಾಲ್ ಹಾಕಿದ್ದಾರೆ. 

ಬೆಳಗಾವಿಯಲ್ಲಿ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಸೀಕ್ರೆಟ್ ಮೀಟಿಂಗ್ ವಿಚಾರದ ಬಗ್ಗೆ ಗುರುವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಪ್ರಚೋದನಾತ್ಮಕ ಹೇಳಿಕೆ ನೀಡೋರನ್ನ ಒದ್ದು ಒಳಗೆ ಹಾಕಬೇಕು. ರಣಹೇಡಿಗಳ ತರಹ ಕದ್ದುಮುಚ್ಚಿ ಬಂದು ಸಭೆ ನಡೆಸಿದರೆ ಪರಿಣಾಮ ನೆಟ್ಟಗಿರೊಲ್ಲ ಎಂದು ಮಹಾರಾಷ್ಟ್ರ- ಕರ್ನಾಟಕದ ಗಡಿಯಲ್ಲಿ ಬೆಂಕಿ ಏಳುವಂತ ಹೇಳಿಕೆಗಳನ್ನ ನೀಡುತ್ತಿರುವ ಮಹಾರಾಷ್ಟ್ರ ನಾಯಕರಿಗೆ   ನಾರಾಯಣಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಳಗಾವಿ ಶಾಸಕನಾಗಿ ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸುವ ಆಸೆ ಇದೆ ಎಂಬ ಚಂದಗಡ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ನಾರಾಯಣಗೌಡ, ಬೆಳಗಾವಿ ಅವರ ಅಪ್ಪಂದ್ ಸ್ವತ್ತಲ್ಲ, ಎಂಇಎಸ್‌ನವರ ಸ್ವತ್ತಲ್ಲ, ಬೆಳಗಾವಿ ಕನ್ನಡಿಗರ ಸ್ವತ್ತು, ಕನ್ನಡಿಗರ ಹಕ್ಕು, ಅವರಿಗೆ ನಿಜವಾಗ್ಲೂ ಧಮ್ ಇದ್ರೆ ಬೆಳಗಾವಿಗೆ ಬಂದು ಎಲೆಕ್ಷನ್‌ಗೆ ನಿಂತು ಗೆಲ್ಲಲಿ ಎಂದು ಹೇಳಿದ್ದಾರೆ. 

ಮೊದಲು 6 ಎಂಇಎಸ್‌ ಶಾಸಕರು ಗೆದ್ದು ಬರುತ್ತಿದ್ದರು, ಈಗ ಒಬ್ಬನೂ ಗೆಲ್ಲುತ್ತಿಲ್ಲ, ಬೆಳಗಾವಿಯಲ್ಲೇ ಎಂಇಎಸ್‌ನವರು ಸತ್ತು ಸುಣ್ಣಾಗಿ ಮಲಗಿದ್ದಾರೆ. ಇಲ್ಲಿರುವ ಎಂಇಎಸ್‌ನವರೇ ಸತ್ತು ಮಲಗಿದಾಗ ನಿನ್ನ ಕ್ಷೇತ್ರದಲ್ಲಿ ಇದ್ದು ಮುಂದಿನ ಬಾರಿ ಗೆಲ್ತಿಯಾ ನೋಡು ಎಂದು ಚಂದಗಡ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್‌ಗೆ ನಾರಾಯಣಗೌಡ ತಿರುಗೇಟು ನೀಡಿದ್ದಾರೆ. 

ಬೆಳಗಾವಿ ಗಡಿ ವಿವಾದ: ಪತ್ರಕರ್ತರಿಗೆ MES ಮುಖಂಡನಿಂದ ಅವಾಜ್

ಎನ್‌‌ಸಿಪಿ ವರಿಷ್ಠ ಶರದ್ ಪವಾರ್‌ ಬೆಳಗಾವಿ ಪ್ರವೇಶಕ್ಕೆ ನಾವು ಬಿಡುವುದಿಲ್ಲ, ಒಂದು ವೇಳೆ ಶರದ್ ಪವಾರ್ ಬೆಳಗಾವಿ ಪ್ರವೇಶಿಸಿದ್ರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ. 
 

click me!