ಊಟ ಮಾಡುವಾಗಲೇ ಹೃದಯಾಘಾತ: ರಾಮನಗರ ಜಿಲ್ಲಾಧಿಕಾರಿ ಕಚೇರಿ ಡಿ ಗ್ರೂಪ್ ನೌಕರ ಸಾವು!

By Govindaraj S  |  First Published Jun 28, 2024, 6:06 PM IST

ಊಟ ಮಾಡುವಾಗಲೇ ಹೃದಯಾಘಾತ ಸಂಭವಿಸಿ ಡಿ ಗ್ರೂಪ್ ನೌಕರನೋರ್ವ ದಾರುಣವಾಗಿ ಮೃತಪಟ್ಟ ಘಟನೆ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ. 


ರಾಮನಗರ (ಜೂ.28): ಊಟ ಮಾಡುವಾಗಲೇ ಹೃದಯಾಘಾತ ಸಂಭವಿಸಿ ಡಿ ಗ್ರೂಪ್ ನೌಕರನೋರ್ವ ದಾರುಣವಾಗಿ ಮೃತಪಟ್ಟ ಘಟನೆ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಯೋಗ್ಯಕುಮಾರ್ (45) ಮೃತ ನೌಕರ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ ಗ್ರೂಪ್ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಇಂದು ಮಧ್ಯಾಹ್ನ ಊಟ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ್ದು, ಕುಸಿದು ಬೀಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆಗೆ ಫಲಿಸದೇ ಯೋಗ್ಯಕುಮಾರ್ ಸಾವನಪ್ಪಿದ್ದಾರೆ.

ಹೃದಯಾಘಾತಕ್ಕೆ ಯುವತಿ ಬಲಿ: ಯುವತಿಯೊಬ್ಬಳು ಹೃದಯಾಘಾತದಿಂದ ‌ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ನೆಲಜಿ ಗ್ರಾಮದಲ್ಲಿ ನಡೆದಿದೆ. ನೆಲಜಿ ಗ್ರಾಮದ ಕಾಫಿ ಬೆಳೆಗಾರ ಮಣವಟ್ಟಿರ ಪೊನ್ನಪ್ಪ ಅವರ ಮಗಳು‌ ನಿಲಿಕಾ ಪೊನ್ನಪ್ಪ (24) ಮೃತ ಯುವತಿ. ನಿಲಿಕಾ ಮಡಿಕೇರಿಯ ಕೊಡಗು ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಕರ್ತವ್ಯಕ್ಕೆ ಹೊರಟಿದ್ದಳು. ಈ ಸಂದರ್ಭ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಹಿಂತಿರುಗಿ ತನ್ನ ಕೋಣೆಗೆ ಹೋಗಿ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾಳೆ. 

Tap to resize

Latest Videos

ನೀಟ್ ಬಗ್ಗೆ ಅಧ್ಯಯನ ಬೇಕೇ? ಬೇಡವೇ ಚರ್ಚೆಯಾಗಲಿ: ಸಚಿವ ದಿನೇಶ್ ಗುಂಡೂರಾವ್

ಪೋಷಕರು ಮಗಳತ್ತ ತೆರಳುವ ವೇಳೆಗೆ ನಿಲಿಕಾ ಉಸಿರಾಟ ಸ್ಥಗಿತಗೊಳಿಸಿದ್ದಳು. ಕಣ್ಣೆದುರೇ ಮಗಳನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದ್ದರೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ನಿಲಿಕಾಳ ನೆನೆದು ಕಣ್ಣೀರಿಟ್ಟ ಸಹೋದ್ಯೋಗಿಗಳು: ನಿಲಿಕಾಳ ಆಸ್ಪತ್ರೆಯಲ್ಲಿ ಸದಾ ಚಟುವಟಿಕೆಯಿಂದ ಇರುತ್ತಿದ್ದಳು, ಎಲ್ಲರೊಂದಿಗೂ ಸದಾ ಖುಷಿ ಖುಷಿಯಾಗಿ ಇರುತ್ತಿದ್ದಳು, ನಾವು ನೋಡದಿದ್ದರೆ ಅವಳೇ ನೋಡಿ ಕರೆದು ಮಾತನಾಡಿಸುತ್ತಿದ್ದ ಹುಡುಗಿ ನಾಲ್ಕು ವರ್ಷದಿಂದ ನಮ್ಮೆಲ್ಲರ ಮನೆ ಮಗಳಂತೆ ಇದ್ದ ನಿಲಿಕಾ ಹಾಡು, ನೃತ್ಯ ಎಲ್ಲದರಲ್ಲೂ ಮುಂದೆ ಇದ್ದಳು. ನಿನ್ನೆಯೂ ಅವಳು ಕರ್ತವ್ಯಕ್ಕೆ ಬಂದಿದ್ದಳು ಇಂದು ಕರ್ತವ್ಯಕ್ಕೆ ಬರುವವಳಿದ್ದಳು ಅಷ್ಟರಲ್ಲಿ ದೇವರು ವಿಧಿಯಾಟ ಮೆರೆದಿದ್ದಾನೆ ಎಂದು ನಿಲಿಕಾಳ ನೆನೆದು ಸಹೋದ್ಯೋಗಿಗಳು ಕಣ್ಣೀರಿಟ್ಟರು.

click me!