'ಸಿದ್ದರಾಮಯ್ಯ, HDK ಹಣ ಕೊಡದಿದ್ರೆ ರಾಮಮಂದಿರ ನಿಲ್ಲಲ್ಲ'

Published : Feb 21, 2021, 05:05 PM IST
'ಸಿದ್ದರಾಮಯ್ಯ, HDK ಹಣ ಕೊಡದಿದ್ರೆ ರಾಮಮಂದಿರ ನಿಲ್ಲಲ್ಲ'

ಸಾರಾಂಶ

ರಾಮಮಂದಿರ ದೇಣಿಗೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ  ಹೇಳಿಕೆ/ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಚಿವ ಜಗದೀಶ್ ಶೆಟ್ಟರ್/ ರಾಮಮಂದಿರ ಕಟ್ಟಬೇಕು ಎನ್ನುವುದು ಇಡೀ ದೇಶದ ಜನ ಅಭಿಲಾಷೆ/ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇಂಥ  ಹೇಳಿಕೆ ನೀಡುತ್ತಿದ್ದಾರೆ.

ಧಾರವಾಡ (ಫೆ. 21)  ರಾಮಮಂದಿರಕ್ಕೆ ಹಣ ನೀಡೋದಿಲ್ಲ ಅನ್ನೋ ಮಾಜಿ ಸಿಎಂ ಸಿದ್ದು ಹೇಳಿಕೆಗೆ ಧಾರವಾಡದಲ್ಲಿ ಸಚಿವ ಜಗದೀಶ ಶೆಟ್ಟರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 

ರಾಮ ಮಂದಿರ ಕಟ್ಟಬೇಕೆನ್ನೋದು ದೇಶದಲ್ಲಿನ ಕೋಟ್ಯಾಂತರ ಜನರ ಅಭಿಲಾಷೆಯಾಗಿದೆ. ನಾವು ಎಲ್ಲಿಲ್ಲಿಗೆ ಹೋಗುತ್ತಿದ್ದೇವೆಯೋ ಅಲ್ಲೆಲ್ಲಾ ಜನರು ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ, ಎಚ್ಡಿಕೆ ದೇಣಿಗೆ ಕೊಡದಿದ್ದರೆ ಅದರ ನಿರ್ಮಾಣ ಕಾರ್ಯವೇನೂ ನಿಲ್ಲೋದಿಲ್ಲ. ಅವರು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಹೇಳುತ್ತಿದ್ದಾರೆ ಎಂದಿದ್ದಾರೆ.

ಸಿದ್ದರಾಮಯ್ಯಗೂ ರಾಮಮಂದಿರ ಕಟ್ಟುವ ಆಸೆ ಇದೆ

ಇಡೀ ದೇಶದ ಜನರ ಅಭಿಲಾಷೆ ಮಂದಿರ ಕಟ್ಟಬೇಕು ಅನ್ನೋದು ಆಗಿದೆ. ಅವರು ಈ ರೀತಿ ಹೇಳೋದ್ರಿಂದ, ಅವರರ ಅಪಸ್ವರವೇ ಅವರಿಗೆ ಕಪ್ಪು ಚುಕ್ಕೆಯಾಗುತ್ತದೆ. ಇನ್ನು ಶ್ರೀರಾಮ ಮಂದಿರಕ್ಕೆ ನಿರ್ಮಾಣಕ್ಕೆ ಹಣ ನೀಡಬೇಡಿ, ಅದು ಆರ್.ಎಸ್.ಎಸ್. ಮಂದಿರ ಅನ್ನೋ ಪಿಎಫ್ಐ ಮುಖಂಡನ ಹೇಳಿಕೆ ವಿಚಾರವಾಗಿ ಮಾತನಾಡಿದ ಶೆಟ್ಟರ್, ಪಿಎಫ್ಐ, ಸಿದ್ದರಾಮಯ್ಯ ಇವರೆಲ್ಲಾ ಒಂದೇ ಟೀಮ್. ಹೀಗೆ ಹೇಳೋದ್ರಿಂದ ಅಲ್ಪಸಂಖ್ಯಾತರ ವೋಟ್ ಬರುತ್ತವೆ ಅಂದುಕೊಂಡಿದ್ದಾರೆ. ಆದರೆ ಇದೀಗ ಎಲ್ಲವೂ ಬದಲಾಗಿದೆ ಎಂದರು.

ಆರ್.ಎಸ್.ಎಸ್. ಅನ್ನೋದು ರಾಷ್ಟ್ರಭಕ್ತಿಯ ಸಂಕೇತ. ಸಂಘವು ದೇಶವನ್ನು ಕಟ್ಟೋ ಕೆಲಸವನ್ನು ಮಾಡುತ್ತಿದೆ. ಸಂಘ ಎಲ್ಲ ಸಮಾಜವನ್ನು ಒಗ್ಗೂಡಿಸೋ ಕೆಲಸವನ್ನು ಮಾಡುತ್ತಿದೆ. ಟೀಕೆ ಮಾಡಿದವರೇ ಹಾಳಾಗಿದ್ದಾರೆಯೇ ಹೊರತು ಅದರಿಂದ ಸಂಘಕ್ಕೆ ಏನೂ ಆಗಿಲ್ಲ ಅಂತಾ ಹೇಳಿದರು. ಇನ್ನು ಐಎಂಎ ಪ್ರಕರಣದಲ್ಲಿ ಮಾಜಿ ಸಿಎಂಗಳ ಹೆಸರು ಕೇಳಿ ಬಂದಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಕರಣದ ಬಗ್ಗೆ ಇನ್ನೂ ವಿಚಾರಣೆ ನಡೆದಿದೆ. ಅವರ ಹೆಸರಿದ್ದರೆ ತನಿಖೆಯಲ್ಲಿ ಎಲ್ಲವೂ ಹೊರಗೆ ಬರುತ್ತದೆ ಎಂದರು. 

PREV
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!