ವಿಧಾನಸೌಧಕ್ಕೆ ಶಿಫ್ಟ್ ಆದ ಪಂಚಮಸಾಲಿ ಹೋರಾಟ.. ಯಾರೂ ಹೇಳಿದ್ರೂ ಕೇಳಂಗಿಲ್ಲ

Published : Feb 21, 2021, 03:49 PM IST
ವಿಧಾನಸೌಧಕ್ಕೆ ಶಿಫ್ಟ್ ಆದ ಪಂಚಮಸಾಲಿ ಹೋರಾಟ.. ಯಾರೂ ಹೇಳಿದ್ರೂ ಕೇಳಂಗಿಲ್ಲ

ಸಾರಾಂಶ

ವಿಧಾನಸೌಧಕ್ಕೆ ಪಂಚಮಸಾಲಿ ಹೋರಾಟ ಶಿಫ್ಟ್/  ವಿಧಾನಸೌಧ ಬಳಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧಾರ/ ಸರ್ಕಾರದ ಮನವಿಗೂ ಜಗ್ಗದ ಪಂಚಮಸಾಲಿ ಸಮುದಾಯ/ ಮಾರ್ಚ್ 4 ನೇ ತಾರೀಕಿನ ವರೆಗೂ ವಿಧಾನಸೌಧ ದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧಾರ/  ಇಬ್ಬರು ಸಚಿವರು ಸಚಿವರು ಬಂದು ಮನವಿ ಮಾಡಿದ್ದಿವಿ

ಬೆಂಗಳೂರು( ಫೆ.  21)  2 ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಹೋರಾಟ ಅರಮನೆ ಮೈದಾನದಲ್ಲಿ ನಡೆಯುತ್ತಿತ್ತು. ಈಗ ಹೋರಾಟ ಅಲ್ಲಿಂದ ವಿಧಾನಸೌಧಕ್ಕೆ ಶಿಫ್ಟ್ ಆಗಿದೆ. ವಿಧಾನಸೌಧ ಬಳಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸರ್ಕಾರದ ಮನವಿ ಮಾಡಿಕೊಂಡರೂ ಪಂಚಮಸಾಲಿ ಸಮುದಾಯ ಹಿಂದೆ ಸರಿದಿಲ್ಲ. ಮಾರ್ಚ್ 4 ನೇ ತಾರೀಕಿನ ವರೆಗೂ ವಿಧಾನಸೌಧ ದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧಾರ ತೆಗದೆಕುಕೊಳ್ಳಲಾಗಿದೆ.

ಇಬ್ಬರು ಸಚಿವರು ಸಚಿವರು ಬಂದು ಮನವಿ ಮಾಡಿಕೊಂಡಿದ್ದರೂ  ಕೇಳಿಲ್ಲ ಆದರೂ ಇಲ್ಲಿ ಒಪ್ಪಲು ಸಿದ್ಧವಿಲ್ಲ ಸರ್ಕಾರ ಕೂಡ ಸಕಾರಾತ್ಮಕವಾಗೇ  ಇದೆ ಎಂದು  ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವರ ಮಹತ್ವದ  ಸಭೆಯಲ್ಲಿ ಆದ ತೀರ್ಮಾನ ಏನು? 

ಸಮಾವೇಶ ಸ್ಥಳಕ್ಕೆ ಕಮಿಷನರ್ ಕಮಲ್ ಪಂತ್ ಸಹ ಭೇಟಿ ನೀಡಿದ್ದಾರೆ. 2 ಎ ಆದೇಶ ಪ್ರಮಾಣ ಪತ್ರ ಸಿಗೋವರೆಗೂ ಹೋರಾಟ ಮುಂದುವರಿಯುತ್ತದೆ. ನಾವೀಗ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದೇವೆ. ಸರ್ಕಾರ ಕೇವಲ ಕಾರಣಗಳನ್ನು ನೀಡ್ತಿದೆ ಅಷ್ಟೇ. ಸರ್ಕಾರದ ಪ್ರತಿನಿಧಿಯಾಗಿ ಸಚಿವರು ಬಂದಿದ್ದರು ಆದರೆ ನಮ್ಮ ಹೋರಾಟ ಇರುವುದು ನಮ್ಮ ಸಮುದಾಯಕ್ಕೆ ಎಂದು ಪ್ರತಿಭಟನಾಕಾರರು ಹೇಳಿಕೆ ನೀಡಿದ್ದಾರೆ. 

ಪ್ರತಿಭಟನಾಕಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಸಂಭವ ಇರುವುದರಿಂದ ಬಿಗಿ  ಭದ್ರತೆ ನೀಡಲಾಗಿದೆ. ವಿಧಾನಸೌಧ ಸುತ್ತಮುತ್ತಲ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ