ಕಳೆದ 24 ಗಂಟೆಯಲ್ಲಿ ಎರಡು ಜನರನ್ನು ಬಲಿ ಪಡೆದುಕೊಂಡ ನರಭಕ್ಷಕ ಹುಲಿಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ನಾಲ್ಕು ಆನೆಗಳು ಹುಲಿ ಸೆರೆ ಹಿಡಿಯಲು ಕೊಡಗಿಗೆ ಆಗಮಿಸಿವೆ
ಕೊಡಗು (ಫೆ.21): ಕೊಡಗಿನಲ್ಲಿ ಕಳೆದ 24 ಗಂಟೆಯಲ್ಲಿ ನರಭಕ್ಷಕ ವ್ಯಾಘ್ರನಿಗೆ ಎರಡು ಜೀವಗಳು ಬಲಿಯಾಗಿವೆ. ಇದರಿಂದ ಇಲ್ಲಿನ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಇಬ್ಬರು ಸಂಬಂಧಿಗಳ ಜೊತೆ ಅಣಬೆ ಕೀಳಲು ಯುವತಿಯೋರ್ವರು ತೆರಳಿದ್ದಾಗ ಏಕಾ ಏಕಿ ಎಗರಿದ್ದ ಹುಲಿ ವೃದ್ಧೆಯೊಬ್ಬರನ್ನು ಹೊತ್ತೊಯ್ದು ತಿಂದು ಹಾಕಿತ್ತು. ಪ್ರತ್ಯಕ್ಷ ದರ್ಶಿ ಯುವತಿ ಈ ಬಗ್ಗೆ ಅರಣ್ಯ ಇಲಾಖೆಯೊಂದಿಗೆ ಆತಂಕ ತೋಡಿಕೊಂಡಿದ್ದಾರೆ.
undefined
ರಸ್ತೆಯಲ್ಲಿ ಹೋಗುತ್ತಿದ್ದಾಗ ತೋಟದಿಂದ ಎಗರಿದ ವ್ಯಾಘ್ರ. ಮೈಮೇಲೆ ಎಗರಿ 50 ಮೀಟರ್ವರೆಗೆ ವೃದ್ಧೆಯನ್ನು ಎಳೆದೊಯ್ದಿದೆ. ವೃದ್ಧೆಯನ್ನು ಹೊತ್ತೊಯ್ದು ತಿಂದು ಹಾಕಿದ್ದು, ಅದನ್ನ ನೋಡಿ ಭಯ ಆಗ್ಬಿಡ್ತು. ಹುಲಿಯನ್ನು ಕೊಂದು ನಮ್ಮನ್ನು ಬದುಕಿಸಿ ಮಕ್ಕಳು, ನಾವೆಲ್ಲ ಬದುಕೋದು ಹೇಗೆ? ಎಂದು ಯುವತಿ ಹೇಳಿದ್ದಾರೆ.
ಇದು ಕಾಶ್ಮೀರವಲ್ಲ ಕೊಡಗು... ಆಲಿಕಲ್ಲು ಮಳೆಗೆ ರೈತರು ಹೈರಾಣ .
ಸ್ಥಳಕ್ಕೆ ಸಿಸಿಎಫ್ ಹಿರಾಲಾಲ್ ಭೇಟಿ : ಹುಲಿ ದಾಳಿಯಿಂದ ಕೊಡಗಿನ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದು ಸ್ಥಳಕ್ಕೆ ಸಿಸಿಎಫ್ ಭೇಟಿ ನೀಡಿದ್ದಾರೆ. ಈ ವೇಳೆ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆಗ್ರಹಿಸಿದ್ದು, ತಪ್ಪಿದಲ್ಲಿ ಭಾರಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವ ಭರವಸೆ ನೀಡಿದೆ.
ಈ ಬಗ್ಗೆ ಸಿಸಿಎಫ್‌ಗೆ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಪೂರ್ಣ ಅಧಿಕಾರ ನೀಡಿದ್ದು, ವಿವಿಧ ತಂಡಗಳಾಗಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ನಾಲ್ಕು ಆನೆಗಳನ್ನು ಕರೆಸಲಾಗಿದೆ. ಟಿ.ಶೆಟ್ಟಿಗೇರಿಗೆ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ, ಮಹೇಂದ್ರ ಆನೆಗಳು ಆಗಮಿಸಿವೆ.
ಹುಲಿ ಕಂಡಲ್ಲಿ ಆನೆ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತದೆ. ಶ್ರೀಮಂಗಲ ಆಸ್ಪತ್ರೆಯಲ್ಲಿ ಹುಲಿದಾಳಿಗೆ ಮೃತಪಟ್ಟ ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಿದ್ದುಮ ಹುಲಿ ದಾಳಿಯಿಂದ ಕೊಡಗಿನ ಜನ ಬೆಚ್ಚಿ ಬಿದ್ದಿದ್ದಾರೆ.