ಧಾರವಾಡ: ಮಳೆಗಾಲಕ್ಕೆ ಮುನ್ನ ಮಹಾನಗರ ರಾಜಕಾಲುವೆ ಒತ್ತುವರಿ ತೆರವು

By Kannadaprabha News  |  First Published May 27, 2023, 2:59 PM IST

ಹುಬ್ಬಳ್ಳಿ-ಧಾರವಾಡ ಮಹಾನಗರದ ರಾಜಕಾಲುವೆ ಹಾಗೂ ನಾಲೆಗಳನ್ನು 15 ದಿನದಲ್ಲಿ ಹೂಳೆತ್ತುವ ಕೆಲಸ ಮಾಡಬೇಕು. ರಾಜಕಾಲುವೆಗಳ ಒತ್ತುವರಿ ತೆರವು ಮಾಡಲು ಮಹಾನಗರ ಪಾಲಿಕೆ ನಿರ್ಧರಿಸಿದೆ.


ಧಾರವಾಡ (ಮೇ.27) ಹುಬ್ಬಳ್ಳಿ-ಧಾರವಾಡ ಮಹಾನಗರದ ರಾಜಕಾಲುವೆ ಹಾಗೂ ನಾಲೆಗಳನ್ನು 15 ದಿನದಲ್ಲಿ ಹೂಳೆತ್ತುವ ಕೆಲಸ ಮಾಡಬೇಕು. ರಾಜಕಾಲುವೆಗಳ ಒತ್ತುವರಿ ತೆರವು ಮಾಡಲು ಮಹಾನಗರ ಪಾಲಿಕೆ ನಿರ್ಧರಿಸಿದೆ.

ನಗರದ ಮಹಾನಗರ ಪಾಲಿಕೆ ಕಚೇರಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ನಾಲೆ, ರಾಜಕಾಲುವೆ ಸಮಸ್ಯೆಗಳ ಬಗ್ಗೆ ಹಿರಿಯ ಸದಸ್ಯ ವೀರಣ್ಣ ಸವಡಿ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲ ಸದಸ್ಯರು ಪಕ್ಷಭೇದ ಮರೆತು ಧ್ವನಿಗೂಡಿಸಿದರು.

Tap to resize

Latest Videos

ಸದಸ್ಯರಾದ ಸವಡಿ, ರಾಜಣ್ಣ ಕೊರವಿ, ಕವಿತಾ ಕಬ್ಬೇರ, ಚಂದ್ರಶೇಖರ ಮನಗುಂಡಿ ಹಾಗೂ ಇತರ ಸದಸ್ಯರು ಮಾತನಾಡಿ, ಕಳೆದ ವಾರದಲ್ಲಿ ಸುರಿದ ಮಳೆಯಿಂದ ಸಾಕಷ್ಟುಅವಾಂತರ ಸೃಷ್ಟಿಯಾಗಿವೆ. ಗಟಾರು, ನಾಲೆಗಳು ಕಸ ಕಡ್ಡಿಗಳಿಂದ ತುಂಬಿ ನೀರು ಹರಿಯದಂತಾಗಿದೆ. ಹೀಗಾಗಿ ಮಳೆಗಾಲ ಆರಂಭಕ್ಕೂ ಪೂರ್ವದಲ್ಲಿ ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು. ಇಲ್ಲವಾದಲ್ಲಿ ಮತ್ತೆ ಅವಾಂತರ ತಪ್ಪಿದ್ದಲ್ಲ. ಈ ಕುರಿತು ಎಲ್ಲ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿ: 3 ವರ್ಷದ ಬದಲು ಪ್ರತಿವರ್ಷ ಆಸ್ತಿ ಕರ ಹೆಚ್ಚಳ, ಇಂದು ಚರ್ಚೆ ಸಾಧ್ಯತೆ

ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಮಾತನಾಡಿ, ಮಳೆಹಾನಿ ತಡೆಗೆ ಈಗಾಗಲೇ ಕಾರ್ಯಪಡೆ ರಚಿಸಲಾಗಿದೆ. ನಾಲೆ ಹೂಳೆತ್ತಲು ಪ್ರತಿ ವಲಯಕ್ಕೆ .5 ಲಕ್ಷ ಸಣ್ಣ ನಾಲೆ ಹೂಳೆತ್ತಲು .1 ಲಕ್ಷ ನೀಡಲಾಗಿದೆ. ತುರ್ತು ಸೇವೆಗೆ ಕಂಟ್ರೋಲ್‌ ರೂಂ. ಸಿದ್ಧವಾಗಿದೆ. ಸದ್ಯ ಅವಳಿನಗರದಲ್ಲಿ 14 ಜಟ್ಟಿಂಗ್‌ ಮತ್ತು 5 ಸಿಲ್ಟಿಂಗ್‌ ವಾಹನಗಳಿವೆ. 15ನೇ ಹಣಕಾಸಿ ಯೋಜನೆ ಅಡಿ 2 ಜಟ್ಟಿಂಗ್‌ ಹಾಗೂ 3 ಸಿಲ್ಟಿಂಗ್‌ ವಾಹನಗಳು ಬರಲಿವೆ. ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಭರವಸೆ ನೀಡಿದರು.

ಆಗ ಮಾತನಾಡಿದ ಮೇಯರ್‌ ಈರೇಶ ಅಂಚಟಗೇರಿ, ಮಳೆಗಾಲದಲ್ಲಿ ರಾಜಕಾಲುವೆ ಹಾಗೂ ನಾಲಾಗಳು ತುಂಬಿ ಜನರಿಗೆ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ. ಹೀಗಾಗಿ ಇನ್ನು 15 ದಿನಗಳಲ್ಲಿ ಹೂಳೆತ್ತುವ ಕೆಲಸ ಆಗಬೇಕು. ಒತ್ತುವರಿ ಸಹ ತೆರವು ಮಾಡಬೇಕು ಎಂದು ಆದೇಶಿಸಿದರು.

ಈಗಾಗಲೇ ನಾಲೆ, ಗಟಾರು ಸ್ವಚ್ಛತೆಗೆ ಪ್ರತಿ ವಾರ್ಡ್‌ಗೆ .5 ಲಕ್ಷ ನೀಡಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ .5 ಲಕ್ಷ ರೂ. ಸೇರಿಸಿ ಒಟ್ಟು .10 ಲಕ್ಷ ನೀಡಲಾಗುವುದು. ಮುಂಗಾರು ಆರಂಭಕ್ಕೂ ಮುನ್ನ ಈ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಆಯಾ ವಲಯ ಕಚೇರಿ ಸಹಾಯಕ ಆಯುಕ್ತರೇ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಸಿದರು.

ಬೀದಿ ದೀಪ: ಕಾವೇರಿದ ಚರ್ಚೆ

ಬೀದಿ ದೀಪ ಅಳವಡಿಕೆ ಕುರಿತು ಬಹುತೇಕ ಸದಸ್ಯರು ಪ್ರಶ್ನಿಸಿ, ಎಲ್‌ಇಡಿ ಬೀದಿ ದೀಪ ಅಳವಡಿಕೆ ಮಾಡುವುದಾಗಿ ಹೇಳಿ ಹಲವು ತಿಂಗಳಾದರೂ ಕಾರ್ಯಗತವಾಗಿಲ್ಲ. ಇದರಿಂದ ಜನರು ಕತ್ತಲೆಯಲ್ಲಿ ಓಡಾಡುವಂತಾಗಿದ್ದಲ್ಲದೆ, ಚೈನ್‌ ಕಳ್ಳತನ ಹೆಚ್ಚುತ್ತಲೇ ಇವೆ. ಹೀಗಾಗಿ ಕೂಡಲೇ ಎಲ್‌ಇಡಿ ಅಳವಡಿಸಬೇಕು. ಇಲ್ಲವೇ ಸದಸ್ಯರಿಗೆ ನೀಡಿದ ಅನುದಾನದಲ್ಲಿ ಬೀದಿ ದೀಪ ಅಳವಡಿಕೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಮೇಯರ್‌, ಈಗಾಗಲೇ ಸರ್ಕಾರದ ಮಟ್ಟದಲ್ಲಿ ಟೆಂಡರ್‌ ಕರೆಯಲಾಗಿದೆ. ಕೆಲ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಅದನ್ನು ಕೂಡಲೇ ಸರಿಪಡಿಸಲಾಗುವುದು. ಅಲ್ಲಿ ವರೆಗೆ ಬೀದಿ ದೀಪ ಅಳವಡಿಸಲು ಪ್ರತಿವಾರ್ಡಿಗೆ .2 ಲಕ್ಷ ಅನುದಾನ ನೀಡಲಾಗುವುದು ಎಂದರು.

ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಒಪ್ಪಿಗೆ

ಹುಬ್ಬಳ್ಳಿಯಲ್ಲಿ ಪಾಲಿಕೆ ಒಡೆತನದಲ್ಲಿರುವ ಬ್ರಾಡ್ವೇ ಕಟ್ಟಡದ ನಿವೇಶನದಲ್ಲಿ ಪಿಪಿಪಿ ಮಾದರಿಯಲ್ಲಿ ಸುಸಜ್ಜಿತ ವಾಣಿಜ್ಯ ಮಳಿಗೆ ನಿರ್ಮಿಸಲು ಸಭೆ ಒಪ್ಪಿತು. ಇದೇ ಸಂದರ್ಭದಲ್ಲಿ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಈ ನಿವೇಶನದಲ್ಲೇ ಸರ್ಕಾರಿ ಶಾಲೆ ಇದೆ. ಆ ಶಾಲೆ ಕಟ್ಟಡದ ಬಗ್ಗೆ ಸಹ ಗಮನಿಸಬೇಕು. ಅದು ಯೋಗ್ಯವಾಗಿಲ್ಲದಿದ್ದರೆ ಮರು ನಿರ್ಮಾಣ ಮಾಡಲು ಚಿಂತಿಸಬೇಕು ಎಂದರು. ಇದಕ್ಕೆ ಧನಿ ಗೂಡಿಸಿದ ಇನ್ನಿತರ ಸದಸ್ಯರು, ಬರೀ ಮಳಿಗೆ ನಿರ್ಮಾಣ ಮಾಡಿದರೆ ಸಾಲದು. ಅಲ್ಲಿ ಪಾರ್ಕಿಂಗ್‌, ಶೌಚಗೃಹ ಸೇರಿ ಎಲ್ಲ ಮೂಲ ಸೌಲಭ್ಯಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.

ಉಪ ಮೇಯರ್‌ ಉಮಾ ಮುಕುಂದ, ಅಧಿಕಾರಿಗಳು ಇತರರು ಇದ್ದರು.

ಧಾರವಾಡ: ಸಾಧನಕೇರಿ ಕೆರೆಗೆ ಬಂತು ಅಭಿವೃದ್ಧಿ ಭಾಗ್ಯ!

ನಾಗರಿಕ ಸಮಿತಿ ಕಾರ್ಯರೂಪಕ್ಕೆ

ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ನಾಗರಿಕ ಸಮಿತಿ ರಚನೆಗೆ ಕೊನೆಗೂ ಕಾಲ ಕೂಡಿ ಬಂದಂತಾಗಿದೆ. ಸದನ ಸಮಿತಿ ನೀಡಿದ ವರದಿ ಆಧರಿಸಿ ಆ. 15ರೊಳಗೆ ನಾಗರಿಕ ಸಮಿತಿ ರಚಿಸುವಂತೆ ಮೇಯರ್‌ ಆದೇಶಿಸಿದ್ದಾರೆ. ಸಮಿತಿ ರಚನೆಗೆ ನೇಮಿಸಿದ್ದ ರಾಮಣ್ಣ ಬಡಿಗೇರ ನೇತೃತ್ವದ ಸದನ ಸಮಿತಿಯು ವರದಿ ಮಂಡಿಸುತ್ತಿದ್ದಂತೆ ವಾರ್ಡ್‌ ಸಮಿತಿ ಸದಸ್ಯರ ನಡತೆ ಬಗ್ಗೆ ಕೆಲವರು ಅಪಸ್ವರ ಎತ್ತಿತ್ತದರು. ಸಮಿತಿ ಸದಸ್ಯರು ಯಾವ ರೀತಿ ಇರಬೇಕು ಎಂಬ ನಿಯಮ ಇರಲಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮೇಯರ್‌, ವಾರ್ಡ್‌ನ ನಾಗರಿಕ ಸಮಿತಿಗಳ ಕಾರ್ಯವೈಖರಿ ಸಲಹಾರೂಪಕ್ಕೆ ಸಿಮೀತವಾಗಿರಬೇಕು. ಈ ವಿಚಾರದಲ್ಲಿ ಪಾಲಿಕೆ ಸದಸ್ಯರು ನೀಡಿದ ಸಲಹೆಗಳನ್ನು ಒಳಗೊಂಡು ಆ. 15ರೊಳಗೆ ಸಮಿತಿ ರಚಿಸುವಂತೆ ಆದೇಶಿಸಿದರು.

click me!