ಚಳ್ಳಕೆರೆ: ರೈಲ್ವೆ ಸೇತುವೆಗೆ ಖಾಸಗಿ ಬಸ್‌ ಡಿಕ್ಕಿ; 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ!

Published : May 27, 2023, 12:51 PM IST
ಚಳ್ಳಕೆರೆ: ರೈಲ್ವೆ ಸೇತುವೆಗೆ ಖಾಸಗಿ ಬಸ್‌ ಡಿಕ್ಕಿ; 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ!

ಸಾರಾಂಶ

ರಾಷ್ಟ್ರೀಯ ಹೆದ್ದಾರಿ (150-ಎ) ಬೆಂಗಳೂರು ರಸ್ತೆಯ ರೋಜಾ ಡಾಬಾ ಬಳಿಯ ರೈಲ್ವೆ ಸೇತುಗೆ ಬೆಂಗಳೂರಿನಿಂದ ರಾಯಚೂರು ಕಡೆಗೆ ಚಲಿಸುತ್ತಿದ್ದ ಸಂಜನಾ ಎಂಬ ಖಾಸಗಿ ಬಸ್‌ ಗುರುವಾರ ರಾತ್ರಿ ಸೇತುವೆಗೆ ರಭಸವಾಗಿ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಬಸ್‌ನಲ್ಲಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಚಳ್ಳಕೆರೆ (ಮೇ.27) : ರಾಷ್ಟ್ರೀಯ ಹೆದ್ದಾರಿ (150-ಎ) ಬೆಂಗಳೂರು ರಸ್ತೆಯ ರೋಜಾ ಡಾಬಾ ಬಳಿಯ ರೈಲ್ವೆ ಸೇತುಗೆ ಬೆಂಗಳೂರಿನಿಂದ ರಾಯಚೂರು ಕಡೆಗೆ ಚಲಿಸುತ್ತಿದ್ದ ಸಂಜನಾ ಎಂಬ ಖಾಸಗಿ ಬಸ್‌ ಗುರುವಾರ ರಾತ್ರಿ ಸೇತುವೆಗೆ ರಭಸವಾಗಿ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಬಸ್‌ನಲ್ಲಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗಾಯಾಳು ಲಿಂಗಸೂರಿನ ನಾಗರಾಜು ಪೊಲೀಸ್‌ ಠಾಣೆಗೆ ದೂರು ನೀಡಿ, ಗುರುವಾರ ರಾತ್ರಿ 10.30ಕ್ಕೆ ಸದರಿ ಬಸ್‌ನಲ್ಲಿ ಬೆಂಗಳೂರಿನಿಂದ ರಾಯಚೂರಿಗೆ ಪ್ರಯಾಣಿಸುತ್ತಿದ್ದು, ಚಳ್ಳಕೆರೆಯ ರೋಜಾ ಡಾಬಾ ಬಳಿ ಬಸ್‌ ಚಾಲಕ ಬಸವರಾಜ ಅತಿವೇಗದಿಂದ ಬಂದು ಸೇತುವೆಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಬಸ್‌ ಪಲ್ಟಿಯಾಗಿದೆ ಎಂದಿದ್ದಾರೆ.

 

ಮುದ್ದೇಬಿಹಾಳದಲ್ಲಿ ಭೀಕರ ಅಪಘಾತ: ಅತ್ತೆ, ಅಳಿಯ ಸಾವು, ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕ..!

ಬಸ್‌ನಲ್ಲಿದ್ದ ಹಾಸನದ ವಿನುತ(24), ಚನ್ನಪ್ಪಣ್ಣದ ಶಿವರಾಮ್‌(25), ಗುಲ್ಬರ್ಗದ ಬಸವರಾಜ(31), ಲಿಂಗಸೂರಿನ ನಾಗರಾಜು(30), ರಾಯಚೂರಿನ ಮೆಹಬೂಬ್‌ ಭಾಷ(50), ಕುಮಾರ(9), ಈರಮ್ಮ(40), ಅಖಿಲ(24), ಜಯರಾಮ್‌(21), ಕೌಸರ್‌(26), ಶೇಖರ್‌(45), ಅಡ್ವಾಣಿ(50), ಮೆಹಬೂಬ್‌(45), ಹರ್ಷಿತ(21), ಅಕ್ಬರ್‌(21), ಜಯರಾಂ(51), ಕಲ್ಕತ್ತದ ನಿಸಾರ್‌ ಆಹಮ್ಮದ್‌(31), ನಿಜಯಾಕಾಶ್‌(32), ಸಿಂದನೂರಿನ ನಾಗರಾಜು (30), ಸೀಮ್ರಾನ್‌(28), ಸೇವಾಲಾಲ್‌(19) ಮೊದಲಾದವರು ಗಾಯಗೊಂಡಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತದಲ್ಲಿ ಬಸ್‌ ಚಾಲಕ ಬಸವರಾಜು ತಲೆಗೆ ಪೆಟ್ಟು ಬಿದಿದ್ದು, ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಬಸ್‌ ಕ್ಲಿನರ್‌ ಪೌಲ್‌ರಾಜ್‌, ಹೆಚ್ಚುವರಿ ಚಾಲಕ ಮೆಹಬೂಬ್‌ ಸಾಬ್‌ ಗಾಯಗೊಂಡವರಲ್ಲಿ ಸೇರಿದ್ದಾರೆ. ಸುದ್ದಿ ತಿಳಿದ ಕೂಡಲೇ ಚಳ್ಳಕೆರೆ ಠಾಣಾ ಇನ್ಸ್‌ಪೆಕ್ಟರ್‌ ರಾಜ ಫಕೃದ್ದೀನ್‌ ದೇಸಾಯಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಠಾಣಾಧಿಕಾರಿ ರಂಗನಾಥ ಪ್ರಕರಣ ದಾಖಲಿಸಿದ್ದಾರೆ.

ಬೆಳ್ಳಂಬೆಳಗ್ಗೆ ಕುಣಿಗಲ್ ಬಳಿ ಭೀಕರ ಅಪಘಾತ: ರಾಯಚೂರು ಮೂಲದ ಇಬ್ಬರು ಸಾವು, ನಾಲ್ವರಿಗೆ ಗಾಯ

PREV
Read more Articles on
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ