Bengaluru Rain: ಇಂದೂ ಕೂಡ ಬಿಸಿಲು, ಮೋಡದ ಜತೆ ಮಳೆ ಸಾಧ್ಯತೆ

Kannadaprabha News   | Asianet News
Published : Nov 27, 2021, 08:17 AM ISTUpdated : Nov 27, 2021, 08:35 AM IST
Bengaluru Rain: ಇಂದೂ ಕೂಡ ಬಿಸಿಲು, ಮೋಡದ ಜತೆ ಮಳೆ ಸಾಧ್ಯತೆ

ಸಾರಾಂಶ

*  ಇಂದು ನಗರದಲ್ಲಿ ಚಳಿಯ ವಾತಾವರಣ ಸಾಧ್ಯತೆ *  27 ಡಿಗ್ರಿ ಮತ್ತು 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ *  ಮುಂದೆ ನಿಂತು ಗುಂಡಿಗಳನ್ನು ಮುಚ್ಚಿಸಿದ ಶಾಸಕರು

ಬೆಂಗಳೂರು(ನ.27):  ನಗರದಲ್ಲಿ ಇಂದು(ಶನಿವಾರ) ತುಸು ಚಳಿಯ ವಾತಾವರಣ ಇರುವ ನಿರೀಕ್ಷೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿಗ್ರಿ ಮತ್ತು 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ(Department of Meteorology) ಹೇಳಿದೆ. 

ಬಿಸಿಲು ಮತ್ತು ಮೋಡದ ಕಣ್ಣಾಮುಚ್ಚಾಲೆ ಶನಿವಾರವೂ ಮುಂದುವರಿಯಲಿದ್ದು, ಕೆಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ(Rain) ಸಾಧ್ಯತೆಯಿದೆ. ಶುಕ್ರವಾರ ನಗರದಲ್ಲಿ ಗರಿಷ್ಠ 24.9 ಡಿಗ್ರಿ ಮತ್ತು ಕನಿಷ್ಠ 19.1 ಡಿಗ್ರಿ ಸೆಲ್ಸಿಯಸ್‌, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ 25.7 ಡಿಗ್ರಿ ಮತ್ತು ಕನಿಷ್ಠ 18.8 ಡಿಗ್ರಿ ಸೆಲ್ಸಿಯಸ್‌ ಹಾಗೂ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಗರಿಷ್ಠ 24.7 ಡಿಗ್ರಿ ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

Bengaluru Rain| ನಗರದಲ್ಲಿ ಅವಾಂತರ ಸೃಷ್ಟಿಸಿದ ಮಳೆ

ಥಂಡಿ ಜತೆಗೆ ಹೆಚ್ಚಾಗ್ತಿದೆ ಶೀತ, ಜ್ವರ..!

ನಗರದಲ್ಲಿ (Bengaluru)ಕಳೆದ ಐದಾರು ದಿನಗಳಿಂದ ಚಳಿಯ ವಾತಾವರಣ ಇರುವುದರಿಂದ ವೈರಲ್‌ ಕಾಯಿಲೆಗಳಿಂದ (Viral Disease)ಬಳಲುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ಚಳಿ ಮತ್ತು ಮಂಜಿನ ವಾತಾವರಣದ ಹಿನ್ನೆಲೆಯಲ್ಲಿ ಅಸ್ತಮಾ, ಉಬ್ಬಸ ಸೇರಿದಂತೆ ಶ್ವಾಸಕೋಶ ಸಂಬಂಧಿ ರೋಗಿಗಳ ಸಂಖ್ಯೆಯೂ ಹೆಚ್ಚುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಜನರಲ್ಲಿ ಜ್ವರ(Fever), ಕೆಮ್ಮು, ಕಫ, ಶೀತ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಬಹುತೇಕ ಆಸ್ಪತ್ರೆಗಳ ಹೊರ ರೋಗಿ ವಿಭಾಗಕ್ಕೆ ಔಷಧಿಗಾಗಿ(Medicine) ಭೇಟಿ ನೀಡುತ್ತಿರುವವರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಆರೋಗ್ಯಾಧಿಕಾರಿ ಡಾ.ಗುಳೂರು ಶ್ರೀನಿವಾಸ್‌ ತಿಳಿಸಿದ್ದಾರೆ.

ಈ ವಾತಾವರಣದಲ್ಲಿ ಅನಿವಾರ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಹೊರ ಬಂದಾಗ ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ, ಕೈ ಶುದ್ಧತೆ ಕಾಪಾಡಿಕೊಳ್ಳಬೇಕು. ಹೊರಗಿನ ಕರಿದ ಪದಾರ್ಥಗಳ ಸೇವನೆ ಸಲ್ಲದು. ಬಿಸಿಯಾಗಿರುವ ಆಹಾರವನ್ನು ಮಾತ್ರ ಸೇವಿಸಬೇಕು. ತಣ್ಣನೆಯ ಆಹಾರ(Food) ಸೇವಿಸಬಾರದು ಎಂದು ಅವರು ಹೇಳುತ್ತಾರೆ.

ಮುಂದೆ ನಿಂತು ಗುಂಡಿಗಳನ್ನು ಮುಚ್ಚಿಸಿದ ಶಾಸಕರು

ಹೊಸಕೋಟೆ: ಹೊಸಕೋಟೆ-ಶಿಡ್ಲಘಟ್ಟದ ರಸ್ತೆಯಲ್ಲಿ ಮಳೆಯ ಕಾರಣದಿಂದ ನಿರ್ಮಾಣವಾಗಿದ್ದ ಭಾರಿ ಗಾತ್ರದ ಗುಂಡಿಗಳಿಗೆ ಶಾಸಕ ಶರತ್‌ ಬಚ್ಚೇಗೌಡರು(Sharath Bache Gowda) ಖುದ್ದು ನಿಂತು ಗುಂಡಿ ಮುಚ್ಚಿಸಿ ಗುಂಡಿಗಳ ಕಾಟದಿಂದ ಜನರಿಗೆ ಮುಕ್ತಿ ನೀಡಿದರು.

ಬೆಂಗ್ಳೂರಲ್ಲಿ ಜಿಟಿ ಜಿಟಿ ಮಳೆ, ಮೋಡ ಮುಸುಕಿದ ವಾತಾವರಣ

ಕಳೆದ ಒಂದು ವಾರದಿಂದ ಸುರಿದ ಮಳೆಗೆ ಶಿಡ್ಲಘಟ್ಟ-ಹೊಸಕೋಟೆ ರಾಜ್ಯ ಹೆದ್ದಾರಿಯ(State Highway) ಕಂಬಳೀಪುರ ಗೇಟ್‌, ಮುತ್ಸಂದ್ರ ಗೇಟ್‌ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಗೇಟ್‌ ಬಳಿ ಸಾಕಷ್ಟುಗುಂಡಿಗಳು ಬಿದ್ದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಹ ಪರಿಸ್ಥಿತಿ ಉದ್ಬವವಾಗಿತ್ತು. ಆದರೆ ಈ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಶಾಸಕ ಶರತ್‌ ಬಚ್ಚೇಗೌಡ ಇದನ್ನು ಗಮನಿಸಿ ಕೂಡಲೆ ಸಂಬಂದಪಟ್ಟಅ​ಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತಿಳಿಸಿ ತಾತ್ಕಾಲಿಕವಾಗಿ ಗುಂಡಿ ಮುಚ್ಚಿಸುವ ಕೆಲಸ ಮಾಡಿದರು. ಇದರಿಂದ ವಾಹನ ಸವಾರರು ಸುಗಮವಾಗಿ ಸಂಚಾರ ಮಾಡಲು ಅನುವು ಮಾಡಿಕೊಟ್ಟಂತಾಗಿದೆ.

ಆದರೆ ಪ್ರತಿ ದಿನ ಈ ರಸ್ತೆಯಲ್ಲಿ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶಗಳಿಗೆ(industrial Areas) ತೆರಳುವ ಭಾರಿ ಗಾತ್ರದ ಟ್ರಕ್‌ಗಳು ಇದೇ ರಸ್ತೆಯಲ್ಲಿ ಸಂಚಾರ ಮಾಡುವ ಪರಿಣಾಮ ರಸ್ತೆಯಲ್ಲಿ ಮತ್ತೆ ಗುಂಡಿಗಳು ಉದ್ಬವವಾಗುತ್ತವೆ. ಆದ್ದರಿಂದ ರಸ್ತೆಯ ಮರು ಡಾಂಬರೀಕರಣ ಮಾಡಿಸಲು ಶಾಸಕರು ಸಂಬಂದಪಟ್ಟ ಅ​ಕಾರಿಗಳ ಜೊತೆ ಚರ್ಚಿಸಿ ಕಾರ್ಯಗತಗೊಳಿಸಬೇಕಿದೆ. ಸಹಕಾರ ಬ್ಯಾಂಕ್‌ ಅಧ್ಯಕ್ಷ ಬಿ.ವಿ.ಸತೀಶಗೌಡ, ಡಾ.ಡಿ.ಟಿ.ವೆಂಕಟೇಶ್‌, ಮುತ್ಸಂದ್ರ ಆನಂದಪ್ಪ,ಕೆಪಿಸಿಸಿ ಜಿಲ್ಲಾಧ್ಯಕ್ಷ ಮುನಿಶಾಮಣ್ಣ, ಪಿಳ್ಳಣ್ಣ, ಹೊಸಹಳ್ಳಿ ಜಯರಾಮ್‌, ಶಶಿಮಾಕನಹಳ್ಳಿ ಮುನಿರಾಜು ಇತರರು ಇದ್ದರು.
 

PREV
Read more Articles on
click me!

Recommended Stories

ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ