ಮಡಿಕೇರಿ: ಜಿಲ್ಲೆಯಾದ್ಯಂತ ಮಳೆ ಇಳಿಕೆ

By Kannadaprabha News  |  First Published Aug 18, 2019, 10:40 AM IST

ಕೊಡಗು ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ನೆರೆಯಿಂದ ನಲುಗಿದ್ದ ಜಿಲ್ಲೆಯಲ್ಲೀಗ ಮಳೆ ಕಡಿಮೆಯಾಗಿದೆ. ಹಲವೆಡೆ ಮನೆ ಕುಸಿತ, ಭೂಕುಸಿತ ಉಂಟಾಗಿ ಅಪಾರ ನಾಶ ನಷ್ಟ ಸಂಭವಿಸಿದ್ದು, ಅಂತೂ ಮಳೆ ಕಡಿಮೆಯಾಗಿರುವುದು ಜಿಲ್ಲೆಯ ಜನರನ್ನು ನಿರಾಳಗೊಳಿಸಿದೆ.


ಮಡಿಕೇರಿ(ಆ.18): ಪ್ರವಾಹದಿಂದ ನಲುಗಿರುವ ಕೊಡಗು ಜಿಲ್ಲೆಗೆ ಶನಿವಾರ ವರುಣ ಕೃಪೆ ತೋರಿದ್ದಾನೆ. ಜಿಲ್ಲಾದ್ಯಂತ ಸಾಧಾರಣ ಮಳೆ ಸುರಿದಿದೆ.

ಜಿಲ್ಲೆಯಲ್ಲಿ ಸರಾಸರಿ ಮಳೆ 16.56 ಮಿ.ಮೀ. ಕಳೆದ ವರ್ಷ ಇದೇ ದಿನ 142.37 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2031.82 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 3464.49 ಮಿ.ಮೀ ಮಳೆಯಾಗಿತ್ತು.

Tap to resize

Latest Videos

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 28.20 ಮಿ.ಮೀ. ಕಳೆದ ವರ್ಷ ಇದೇ ದಿನ 197.80 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2680.32 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 4916.13 ಮಿ.ಮೀ. ಮಳೆಯಾಗಿತ್ತು.

ಕೊಡಗಿನ ದುರಂತದ ಬಗ್ಗೆ ಆಘಾತಕಾರಿ ಮಾಹಿತಿ ಕೊಟ್ಟ ಭೂ ವಿಜ್ಞಾನಿಗಳು

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 12.87 ಮಿ.ಮೀ. ಕಳೆದ ವರ್ಷ ಇದೇ ದಿನ 118.68 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2075.51 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2701.34 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 8.60 ಮಿ.ಮೀ. ಕಳೆದ ವರ್ಷ ಇದೇ ದಿನ 110.62 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1339.64 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2776 ಮಿ.ಮೀ. ಮಳೆಯಾಗಿತ್ತು.

ಚಿಕ್ಕಮಗಳೂರು, ಕೊಡಗಲ್ಲಿ ಮತ್ತೆ ಶಾಲಾ-ಕಾಲೇಜು ಶುರು

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 37, ನಾಪೋಕ್ಲು 16.20, ಸಂಪಾಜೆ 40.20, ಭಾಗಮಂಡಲ 19.40, ವಿರಾಜಪೇಟೆ ಕಸಬಾ 12.80, ಹುದಿಕೇರಿ 22, ಶ್ರೀಮಂಗಲ 11, ಪೊನ್ನಂಪೇಟೆ 10.60, ಅಮ್ಮತ್ತಿ 6.80, ಬಾಳೆಲೆ 14, ಸೋಮವಾರಪೇಟೆ ಕಸಬಾ 1, ಶನಿವಾರಸಂತೆ 5.40, ಶಾಂತಳ್ಳಿ 10.80, ಕೊಡ್ಲಿಪೇಟೆ 8.40, ಕುಶಾಲನಗರ 6, ಸುಂಟಿಕೊಪ್ಪ 20 ಮಿ.ಮೀ. ಮಳೆಯಾಗಿದೆ.

click me!