'ಯಾರಿಗೆ ಬಿಎಸ್‌ವೈ ಮೇಲೆ ವಿಶ್ವಾಸ ಇಲ್ಲವೋ ಅವರು ರಾಜೀನಾಮೆ ಕೊಡೋದು ಒಳಿತು'

Kannadaprabha News   | Asianet News
Published : Jul 11, 2021, 01:16 PM IST
'ಯಾರಿಗೆ ಬಿಎಸ್‌ವೈ ಮೇಲೆ ವಿಶ್ವಾಸ ಇಲ್ಲವೋ ಅವರು ರಾಜೀನಾಮೆ ಕೊಡೋದು ಒಳಿತು'

ಸಾರಾಂಶ

* ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಲು ಯಡಿಯೂರಪ್ಪ ಅವರೇ ಕಾರಣ. * ಕಾಂಗ್ರೆಸ್‌ನವರಂತೆ ವರ್ತಿಸುತ್ತಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ * ಬಿಜೆಪಿ ಬಗ್ಗೆ ಮಾತನಾಡುವುದಿದ್ದರೆ ಸರ್ಕಾರದಿಂದ ಹೊರ ಬಂದು ಮಾತನಾಡಲಿ

ಗಂಗಾವತಿ(ಜು.11): ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವರು ಕಾಂಗ್ರೆಸ್‌ ಪಕ್ಷದವರಂತೆ ವರ್ತಿಸುತ್ತಿದ್ದಾರೆ ಎಂದು ರಾಯಚೂರು ನಗರ ಶಾಸಕ ಶಿವರಾಜ ಪಾಟೀಲ್‌ ಹೇಳಿದ್ದಾರೆ.  

ತಾಲೂಕಿನ ಆನೆಗೊಂದಿಗೆ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಬಿಜೆಪಿಯಲ್ಲಿರುವ ಯತ್ನಾಳ್‌ ವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಹೊಗಳುವುದನ್ನು ನೋಡಿದರೆ ಯತ್ನಾಳ್‌ ಯಾವ ಪಕ್ಷದವರು ಎಂದು ಗೊತ್ತಾಗುತ್ತಿಲ್ಲ. ಇದರಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಸುಮ್ಮನೆ ಕುಳಿತಿದ್ದಾರೆ. ನಮ್ಮ ಪಕ್ಷದಲ್ಲಿ ಇಬ್ಬರು-ಮೂವರು ಆ್ಯಕ್ಟಿಂಗ್‌ ಮಾಡುತ್ತಿದ್ದಾರೆ. ಸಮಸ್ಯೆ ಇದ್ದರೆ ಕುಳಿತು ಮಾತನಾಡಲಿ. ಮಾಧ್ಯಮದಲ್ಲಿ ಹೇಳಿಕೆ ನೀಡಿದರೆ ಹಿರೋ ಆಗುವುದಿಲ್ಲ. ನಮ್ಮ ಕ್ಯಾಪಿಸಿಟಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಬಸನಗೌಡ ಪಾಟೀಲ್ ಯತ್ನಾಳ್ ದಿಲ್ಲಿಯಲ್ಲಿ ಪ್ರತ್ಯಕ್ಷ: ರಾಜ್ಯ ರಾಜಕಾರಣದಲ್ಲಿ ಸಂಚಲನ

ಯಡಿಯೂರಪ್ಪ ಅವರಿಗೆ ಒಬ್ಬರು ಇಬ್ಬರು ವಿರೋಧ ಮಾಡಿದರೆ ಅವರನ್ನು ತೆಗೆದು ಹಾಕಲು ಆಗುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಲು ಯಡಿಯೂರಪ್ಪ ಅವರೇ ಕಾರಣ. ಯಾರಿಗೆ ಮುಖ್ಯಮಂತ್ರಿ ಮೇಲೆ ವಿಶ್ವಾಸ ಇಲ್ಲವೋ ಅವರು ರಾಜೀನಾಮೆ ಕೊಡುವುದು ಒಳಿತು. ಅಂಥವರ ಬಗ್ಗೆ ವರಿಷ್ಠರಿಗೆ ದೂರು ಸಲ್ಲಿಸಲಾಗುತ್ತದೆ. ಬಿಜೆಪಿ ಬಗ್ಗೆ ಮಾತನಾಡುವುದಿದ್ದರೆ ಸರ್ಕಾರದಿಂದ ಹೊರ ಬಂದು ಮಾತನಾಡಲಿ. ಅವರೆಲ್ಲ ಉಂಡು ಮನೆಗೆ ಬೆಂಕಿ ಇಡುವ ವ್ಯಕ್ತಿಗಳು ಎಂದ ಶಿವರಾಜ್‌ ಪಾಟೀಲ್‌ ಹೇಳಿದರು. ಅವಧಿ ಮುಗಿಯವವರಿಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು.
 

PREV
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!