ರಾಕ್‌ಲೈನ್ ವೆಂಕಟೇಶ್ ವಿರುದ್ಧ ದೂರು

  • ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧದ ಹೇಳಿಕೆ
  • ರಾಕ್‌ಲೈನ್ ವೆಂಕಟೇಶ್ ವಿರುದ್ಧ ದೂರು
  • ಜೆಡಿಎಸ್ ಮುಖಂಡ ಲಿಂಗದ ಹಳ್ಳಿ ಚೇತನ್‌ಕುಮಾರ್‌ ದೂರು

ಶಿರಾ (ಜು.11): ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ರಾಕ್‌ಲೈನ್ ವೆಂಕಟೇಶ್ ಎಂಬ ವ್ಯಕ್ತಿ ಮಾಜಿ ಸಿಎಂ ತೇಜೋವಧೆ ಮಾಡಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈ ಮೂಲಕ ನ್ಯಾಯ ಒದಗಿಸಬೇಕು ಎಂದು ಜೆಡಿಎಸ್ ಮುಖಂಡ ಲಿಂಗದ ಹಳ್ಳಿ ಚೇತನ್‌ಕುಮಾರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ನಂತರ ಮಾತನಾಡಿದ ಅವರು ರಾಕ್‌ಲೈನ್  ವೆಂಕಟೇಶ್ ಅವರು ರಾಜ್ಯಾದ್ಯಂತ ಮಾಜಿ ಸಿಎಂ  ಎಚ್ ಡಿ ಕುಮಾರಸ್ವಾಮಿ ಅಭಿಮಾನಿಗಳಿಗೆ ಧಕ್ಕೆ ತರುವ ಮಾತನಾಡಿದ್ದಾರೆ. 

Latest Videos

ಎಚ್‌ಡಿಕೆ ಮನನೋಯಿಸುವ ಹೇಳಿಕೆ ಕೊಟ್ಟಿಲ್ಲ, ಕ್ಷಮೆ ಕೇಳಲ್ಲ : ರಾಕ್‌ಲೈನ್ ..

ಮಂಡ್ಯ ಜನರ ನಡುವೆ ಕೋಮು ಗಲಭೆ ತಂದಿಕ್ಕುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಬೇಕು ಎಂದಿದ್ದಾರೆ.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಹೆಚ್‌ಡಿ ನಡುವೆ ಅನೇಕ ದಿನಗಳಿಂದ ಕೆಆರ್‌ಎಸ್ ವಿಚಾರವಾಗಿ ಕಾಳಗ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಮಧ್ಯಪ್ರವೇಶಿಸಿದ್ದ ರಾಕ್‌ ಲೈನ್ ವೆಂಕಟೇಶ್ ಸುಮಲತಾಗೆ ಬೆಂಬಲ ಸೂಚಿಸಿದ್ದರು. 

click me!