ಬೆಂಗಳೂರು: ಎರಡನೇ ಮಹಡಿಯಿಂದ ಬಿದ್ದು ರಾಯಚೂರು ಮೂಲದ ಕಾರ್ಮಿಕ ಸಾವು

Kannadaprabha News   | Asianet News
Published : Mar 18, 2021, 02:11 PM IST
ಬೆಂಗಳೂರು: ಎರಡನೇ ಮಹಡಿಯಿಂದ ಬಿದ್ದು ರಾಯಚೂರು ಮೂಲದ ಕಾರ್ಮಿಕ ಸಾವು

ಸಾರಾಂಶ

ಈ ಸಂಬಂಧ ಮನೆ ಮಾಲೀಕ ರಾಘವೇಂದ್ರ ರಾವ್‌ ಹಾಗೂ ಗುತ್ತಿಗೆದಾರ ಕೃಷ್ಣಪ್ಪ ಪೆರುಮಾಳ್‌ ಎಂಬುವವರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲು| ಜ್ಞಾನಭಾರತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ| ರಾಯಚೂರು ಮೂಲಕ ಕೋಟೇಶ್ವರ್‌ ಮೃತ ಯುವಕ| 

ಬೆಂಗಳೂರು(ಮಾ.18): ಎರಡನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು, ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಕೋಟೇಶ್ವರ್‌ (23) ಮೃತ ಯುವಕ. ಈ ಸಂಬಂಧ ಮನೆ ಮಾಲೀಕ ರಾಘವೇಂದ್ರ ರಾವ್‌ ಹಾಗೂ ಗುತ್ತಿಗೆದಾರ ಕೃಷ್ಣಪ್ಪ ಪೆರುಮಾಳ್‌ ಎಂಬುವವರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಲಿಂಗಸುಗೂರು: ಸಾರಿಗೆ ಬಸ್‌ಗೆ ಟ್ರ್ಯಾಕ್ಟರ್‌ ಡಿಕ್ಕಿ, ತಪ್ಪಿದ ಅನಾಹುತ

ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಸಪ್ತಗಿರಿ ಲೇಔಟ್‌ನಲ್ಲಿ ರಾಘವೇಂದ್ರ ರಾವ್‌ ಎಂಬುವರಿಗೆ ಸೇರಿದ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಕಟ್ಟಡದಲ್ಲಿ ರಾಯಚೂರು ಮೂಲಕ ಯುವಕ ಕೋಟೇಶ್ವರ್‌ ಕೂಲಿ ಕೆಲಸ ಮಾಡುತ್ತಿದ್ದ. ಬುಧವಾರ ಸಂಜೆ ಎರಡನೇ ಮಹಡಿಯಲ್ಲಿ ಕೆಲಸ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
 

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ