ಸ್ಥಳೀಯ ಸಂಸ್ಥೆಗಳ ತೆರಿಗೆ ಭಾರ ಹೊರಲು ಸಿದ್ದರಾಗಿ!

By Kannadaprabha NewsFirst Published Mar 18, 2021, 2:07 PM IST
Highlights

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರ ಮೂಲಕ ಸಂಗ್ರಹವಾಗುವ ತೆರಿಗೆ ಪ್ರಮಾಣ ಹೆಚ್ಚಳಕ್ಕೆ ಈ ಬಾರಿ ಸದ್ದಿಲ್ಲದೇ ತಯಾರಿ ನಡೆಸಿದ್ದು ಶೇ.20 ರಿಂದ 30ರಷ್ಟುತೆರಿಗೆ ಹೆಚ್ಚಳ ಆಗುವ ಸಾಧ್ಯತೆ ದಟ್ಟವಾಗಿದೆ.

 ಚಿಕ್ಕಬಳ್ಳಾಪುರ (ಮಾ.18):  ಕೊರೋನಾ ಸಂಕಷ್ಟದ ಬಳಿಕ ಪ್ರ ಸಾಲಿನ ಆಯವ್ಯಯ ಮಂಡನೆಗೆ ಸಿದ್ಧಗೊಳ್ಳುತ್ತಿರುವ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರ ಮೂಲಕ ಸಂಗ್ರಹವಾಗುವ ತೆರಿಗೆ ಪ್ರಮಾಣ ಹೆಚ್ಚಳಕ್ಕೆ ಈ ಬಾರಿ ಸದ್ದಿಲ್ಲದೇ ತಯಾರಿ ನಡೆಸಿದ್ದು ಶೇ.20 ರಿಂದ 30ರಷ್ಟುತೆರಿಗೆ ಹೆಚ್ಚಳ ಆಗುವ ಸಾಧ್ಯತೆ ದಟ್ಟವಾಗಿದೆ.

ಕಳೆದ ವರ್ಷ ಕೊರೋನಾ ಹೊಡೆತದ ಪರಿಣಾಮ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಹರಿದು ಬರಬೇಕಿದ್ದ ಆಸ್ತಿ, ಕುಡಿಯುವ ನೀರಿನ ತೆರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಂದಾಯವಾಗದೇ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದವು. ಕೆಲವು ನಗರಸಭೆಗಳಲ್ಲಿ ತನ್ನ ಪೌರ ಕಾರ್ಮಿಕರಿಗೆ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸಲು ಇನ್ನಿಲ್ಲದ ಪಡಿಪಾಟಲು ಅನುಭವಿಸಿದ್ದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು 2021-22ನೇ ಸಾಲಿಗೆ ವಾರ್ಷಿಕ ಆಯವ್ಯಯ ಮಂಡಿಸಲು ಪೂರ್ವ ತಯಾರಿಯಲ್ಲಿ ತೊಡಗಿವೆ.

ವಲಸೆ ತಡೆಗೆ ದುಡಿಯೋಣ ಬಾ ಅಭಿಯಾನ : ಪ್ರತಿ ಕುಟುಂಬಕ್ಕೆ 60 ದಿನ ಉದ್ಯೋಗ .

ಸಂಪನ್ಮೂಲ ಕ್ರೋಡೀಕರಣಕ್ಕಾಗಿ ತೆರಿಗೆ :  ವಿವಿಧ ತೆರಿಗೆಗಳ ಹೆಚ್ಚಳದ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿರುವ ಸ್ಥಳೀಯ ಸಂಸ್ಥೆಗಳು ಜನರ ಮೇಲೆ ತೆರಿಗೆ ಭಾರ ಹೊರೆಸಲು ಹೊರಟಿಸಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ದಿನದಿಂದ ದಿನಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಆಡಳಿತಾತ್ಮಕವಾದ ವೆಚ್ಚ ಏರುಗತಿಯಲ್ಲಿ ಸಾಗಿದ್ದು ಅಧಿಕಾರಿ, ಸಿಬ್ಬಂದಿ ವೇತನ, ಬಳಕೆಯಾಗುವ ವಾಹನಗಳಿಗೆ ಇಂಧನ, ಬೀದಿ ದೀಪಗಳ ನಿರ್ವಹಣೆ, ಸ್ವಚ್ಛತೆ, ಮುಂತಾದ ನಿರ್ವಣೆಗಳ ಜತೆಗೆ ಪ್ರತಿ ವರ್ಷ ಪಾವತಿಸಬೇಕಾದ ಗ್ರಂಥಾಲಯ ಸೆಸ್‌, ಪೌರ ಕಾರ್ಮಿಕರ ಕ್ಷೇಮಾಭಿವೃದ್ದಿ ನಿಧಿ ಸೇರಿದಂತೆ ವಾರ್ಷಿಕ ಆಡಳಿತದ ನಿರ್ವಹಣೆಗೆ ಕೋಟ್ಯಂತರ ರು., ಆರ್ಥಿಕ ಸಂಪನ್ನೂಲ ಅವಶ್ಯಕವಾಗಿದೆ.

ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ತೆರಿಗೆ ಸೇರಿದಂತೆ ತನ್ನ ಸ್ವಂತ ಸತ್ತುಗಳಿಂದಲೂ ಬಾಡಿಗೆ, ಸಂತೆ, ಸಮುದಾಯ ಭವನ, ಉದ್ಯಾನವನ ಶುಲ್ಕ. ಪಾರ್ಕಿಂಗ್‌ ಶುಲ್ಕ ಮತ್ತಿತರ ಮೂಲಗಳಿಂದ ಆದಾಯ ಬಾರದ ಕಾರಣ ಮೂರು ವರ್ಷಗಳಗೊಮ್ಮೆ ಪರಿಷ್ಕರಣೆ ಆಗುವ ತೆರಿಗೆಯನ್ನು ಈ ಬಾರಿ ಕೊರೋನಾ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಆಡಳಿತ ಮಂಡಳಿಗಳು ಹೆಚ್ಚಿಸುವ ದಿಸೆಯಲ್ಲಿ ಕೌನ್ಸಿಲ್‌ನ ವಿಶೇಷ ಸಭೆಗಳನ್ನು ಆಯೋಜಿಸುವ ಮೂಲಕ ಸದಸ್ಯರ ಒಮ್ಮತದ ಅಭಿಪ್ರಾಯ ಪಡೆಯಲು ಮುಂದಾಗಿ ತೆರಿಗೆ ಹೆಚ್ಚಳಕ್ಕೆ ತಯಾರಿ ನಡೆಸಿವೆ.

10, 15 ವರ್ಷಗಳ ಹಿಂದಿರುವ ಆಸ್ತಿಗಳ ಮೇಲೆ ಇದುವರೆಗೂ ನಗರ ಸ್ಥಳೀಯ ಸಂಸ್ಥೆಗಳು ತೆರಿಗೆ ವಸೂಲಿ ಮಾಡಲಾಗುತ್ತಿತ್ತು. ಆದರೆ ಈ ವರ್ಷದಿಂದ ಸಂಪೂರ್ಣವಾಗಿ ನಗರಸಭೆಯಿಂದ ಆಸ್ತಿಗಳ ಸರ್ವೆ ಮಾಡಿಸಿ ಎಲ್ಲಾ ಸಾರ್ವಜನಿಕರ ಆಸ್ತಿಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಶೇ.05 ರಿಂದ 1.5 ರಷ್ಟುತೆರಿಗೆ ಪ್ರಮಾಣ ಹೆಚ್ಚಳವಾಗಲಿದೆ. ಸರ್ಕಾರದ ಮಾರ್ಗಸೂಚಿಯಂತೆ ತೆರಿಗೆ ಹೆಚ್ಚಳ ಆಗಲಿದೆ.

ಎಂ.ರೇಣುಕಾ, ಯೋಜನಾ ನಿರ್ದೇಶಕಿ, ನಗರಾಭಿವೃದ್ದಿ ಕೋಶ.

click me!