ಪತಿಯನ್ನ ಹೋಮಕುಂಡದಲ್ಲಿ ಸುಟ್ಟಿದ್ದ ರಾಜೇಶ್ವರಿ ಶೆಟ್ಟಿ ಮೇಲೆ ವೇಶ್ಯಾವಾಟಿಕೆ ಕೇಸ್

Suvarna News   | Asianet News
Published : Mar 18, 2021, 01:01 PM ISTUpdated : Mar 18, 2021, 01:36 PM IST
ಪತಿಯನ್ನ ಹೋಮಕುಂಡದಲ್ಲಿ ಸುಟ್ಟಿದ್ದ ರಾಜೇಶ್ವರಿ ಶೆಟ್ಟಿ ಮೇಲೆ ವೇಶ್ಯಾವಾಟಿಕೆ ಕೇಸ್

ಸಾರಾಂಶ

ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಉದ್ಯಮಿ ಗಂಡನನ್ನೇ ಕೊಂದು ಹೋಮಕುಂಡದಲ್ಲಿ ಸುಟ್ಟಿದ ರಾಜೇಶ್ವರಿ ಶೆಟ್ಟಿ ವಿರುದ್ಧ ಈಗ ವೇಶ್ಯಾವಾಟಿಕೆ ಕೇಸ್ ದಾಖಲಾಗಿದೆ. 

ಉಡುಪಿ (ಮಾ.18):   ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ರಾಜೇಶ್ವರಿ ಶೆಟ್ಟಿ ಮೇಲೆ ಪ್ರಕರಣ ದಾಖಲಾಗಿದೆ. 

ಉಡುಪಿಯಲ್ಲಿ ಹೋಮಕುಂಡದಲ್ಲಿ ತನ್ನ ಪತಿಯನ್ನೇ ಹತ್ಯೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಇದೀಗ ಮೇಲೆ ಇದೀಗ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ ಎದುರಾಗಿದೆ. 

 ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿ ಭಾಸ್ಕರ ಶೆಟ್ಟಿಯನ್ನು ಕೊಂದು ಹೋಮಕುಂಡದಲ್ಲಿ ಸುಟ್ಟು ಹಾಕಿದ್ದಳು.   ಉದ್ಯಮಿಯಾಗಿದ್ದ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿಯಿಂದ ಹತ್ಯೆಗೀಡಾಗಿದ್ದರು. 

ಹೋಮಕುಂಡ ಹತ್ಯೆಗೆ ಹೊಸ ಟ್ವಿಸ್ಟ್: ಪತ್ನಿ ರಾಜೇಶ್ವರಿಯ ಸಹೋದರಿಯರ ವಿರುದ್ಧ ದಾಖಲಾಗಿದೆ ದೂರು ...

ಗಂಡನ ಹತ್ಯೆ ಪ್ರಕರಣದಲ್ಲಿ ಬೇಲ್ ಪಡೆದು ಹೊರಬಂದಿದ್ದ ರಾಜೇಶ್ವರಿ ಶೆಟ್ಟಿ ವಿರುದ್ಧ ಇದೀಗ  ಅವರದ್ದೆ ಮಾಲೀಕತ್ವದ ಖಾಸಗಿ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ ಎದುರಾಗಿದೆ.  

ವೈಶ್ಯಾವಾಟಿಕೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಶೇಖರ ಶೆಟ್ಟಿ, ಜಾನ್ಸನ್ ಡಿ ಅಲ್ಮೇಡಾ, ಹರ್ಷಿತ್ ಶೆಟ್ಟಿ ಎಂಬುವವರು ಪೊಲೀಸರ ಅತಿಥಿಗಳಾಗಿದ್ದಾತರ. 
ರಾಜೇಶ್ವರಿ ಶೆಟ್ಟಿ ಹಾಗೂ ಇತರ  ಮೂವರಿಗೆ ಪೊಲೀಸರು ಬಲೆ ಬೀಸಿದ್ದಾರೆ.

PREV
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್